ಮಡಿಕೇರಿ, ಫೆ.೨೪: ಕೇರಳದಿಂದ ಕರ್ನಾಟಕ ರಾಜ್ಯ ಪ್ರವೇಶಿಸುವುದಕ್ಕೆ ರಾಜ್ಯ ಸರ್ಕಾರ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಕೊಡಗು-ಕೇರಳ ಗಡಿ ಚೆಕ್ ಪೋಸ್ಟ್ ಮಾಕುಟ್ಟದಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಸಮಸ್ಯೆ ಎದುರಿಸುವಂತಾಯಿತು

ಕೇರಳದಿಂದ ಆಗಮಿಸುವವರ ಬಳಿ ಕ್ಷಿಪ್ರ ಪರೀಕ್ಷೆ ವರದಿ ಇದ್ದರೂ, ಕೊಡಗು ಜಿಲ್ಲೆಯೊಳಗೆ ಪ್ರವೇಶ ನೀಡುತ್ತಿಲ್ಲ. ಕೋವಿಡ್-೧೯ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಜಿಲ್ಲೆಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ. ಮಾಕುಟ್ಟದಲ್ಲಿ ರಾಜ್ಯ ಪ್ರವೇಶಿಸುವ ಪ್ರಮುಖ ಹೆದ್ದಾರಿ ಆಗಿದ್ದು, ನಿತ್ಯ ಸಾವಿರಾರು ಜನ ಈ ಮಾರ್ಗವಾಗಿ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಸಾಲುಗಟ್ಟಿ ನಿಂತಿದ್ದ ವಾಹನಗಳಲ್ಲಿ ಹಣ್ಣು ಹಂಪಲು, ತರಕಾರಿ ಹಾಗೂ ಸರಕು ಸಾಗಣೆ ವಾಹನಗಳು ಹೆಚ್ಚಿದ್ದವು.