ಮಡಿಕೇರಿ, ಫೆ.೨೪: ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿಕೊಂಡವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಹಿಂದುಳಿದ, ಬಡವರಿಗೆ ದೊರಕಬೇಕಾದ ವೈದ್ಯಕೀಯ ಸೀಟುಗಳು ಹಣಕ್ಕೆ ಮಾರಾಟ ವಾಗುತ್ತಿದೆ. ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಮೆಡಿಕಲ್ ಸೀಟುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ಸಾಕ್ಷಿ ಸಹಿತ ಐ.ಟಿ ಅಧಿಕಾರಿಗಳು ಬಯಲು ಮಾಡಿದ್ದಾರೆ. ಈ ಬಗ್ಗೆ ತ್ವರಿತ ಕ್ರಮ ವಹಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪರಿಷತ್ ಜಿಲ್ಲಾ ಸಹ ಸಂಚಾಲಕ ಪೊನ್ನಣ್ಣ ತಾಲೂಕು ಸಂಚಾಲಕ ದಿವಿನ್, ನಗರ ಕಾರ್ಯದರ್ಶಿ ದರ್ಶನ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರಚನ್, ಯಕ್ಷಿತಾ ಕಾರ್ಯಕರ್ತರಾದ ಸುಬ್ರಮಣಿ, ಸುಜೇಶ್, ಅಜೀದಾ, ಶಿಲ್ಪ ಇತರರು ಉಪಸ್ಥಿತರಿದ್ದರು.