ಶನಿವಾರಸಂತೆ, ಫೆ. ೨೪: ಶನಿವಾರಸಂತೆ ಸಮೀಪದ ಕೂಡ್ಲೂರು ಗ್ರಾಮದ ನಿವಾಸಿ, ಶೀಲಾ (೩೧) ನಾಪತ್ತೆಯಾಗಿರುವದಾಗಿ, ಶೀಲಾ ಅವರ ಪತಿ ಪುಟ್ಟರಾಜ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಿನಾಂಕ ೨೧ ರಂದು ಪುಟ್ಟರಾಜು ಅರಕಲಗೋಡಿಗೆ ಮದುವೆಗೆ ಹೋಗಿದ್ದು, ಮದುವೆ ಮುಗಿಸಿ ಸಂಜೆ ೪.೩೦ ಗಂಟೆಗೆ ಮನೆಗೆ ಬಂದಾಗ ಪತ್ನಿ ಶೀಲಾ ಮನೆಯಲ್ಲಿ ಇರಲಿಲ್ಲ. ಪತ್ನಿಯನ್ನು ಹುಡುಕಾಡಿ ಪತ್ನಿಯ ಮೊಬೈಲ್ಗೆ ಫೋನ್ ಮಾಡಿ, ಫೋನ್ ಕೂಡ ಸ್ವೀಚ್ ಆಫ್ ಆಗಿದ್ದು, ಶನಿವಾರಸಂತೆ ಪೊಲೀಸ್ ಠಾಣೆಗೆ ತಾ. ೨೩ ರಂದು ದೂರು ನೀಡಲಾಗಿ, ಶೀಲಾ ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಶನಿವಾರಸಂತೆ ಪೊಲೀಸ್ ಠಾಣೆ ದೂ. ೦೮೨೭೬ - ೨೮೩೩೩೩ ಅನ್ನು ಸಂಪರ್ಕಿಸಲು ಕೋರಿದೆ. ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ, ಚೆನ್ನಯ್ಯ ಪ್ರಕರಣ ದಾಖಲಿಸಿದ್ದಾರೆ.