ಮಡಿಕೇರಿ, ಫೆ. ೨೪: ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಈಗಾಗಲೇ ಮಡಿಕೇರಿ ನಗರಸಭೆ ವ್ಯಾಪ್ತಿಯ ಎಲ್ಲಾ ೨೩ ವಾರ್ಡ್ಗಳನ್ನು ಬಯಲು ಶೌಚಮುಕ್ತ ವಾರ್ಡ್ ಗಳೆಂದು ಘೋಷಿಸಿ ಪ್ರಮಾಣೀಕರಿ ಸಲಾಗಿದೆ. ಅದರಂತೆ ಬಯಲು ಶೌಚಮುಕ್ತ ನಗರಕ್ಕಾಗಿ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸಿ ಕ್ರಮ ಜರುಗಿಸಲಾಗಿದ್ದು, ಎಲ್ಲ ೨೩ ವಾರ್ಡ್ಗಳು ಬಯಲು ಶೌಚಮುಕ್ತ (ಒಡಿಎಫ್) ವಾರ್ಡ್ಗಳೆಂದು ಘೋಷಿಸಬೇಕಾಗಿದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಈ ಕುರಿತು ತಮ್ಮ ಸಲಹೆ ಅಥವಾ ಆಕ್ಷೇಪಣೆಗಳು ಇದ್ದಲ್ಲಿ ನಗರಸಭೆಗೆ ೭ ದಿನಗಳ ಒಳಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್ ಅವರು ಕೋರಿದ್ದಾರೆ