ಸುಂಟಿಕೊಪ್ಪ, ಫೆ. ೨೩: ಮಾದಾಪುರದಲ್ಲಿ ಕಾಡಾನೆಗಳ ಹಿಂಡು ಲಗ್ಗೆಯಿಟ್ಟ ಪರಿಣಾಮ ಕೃಷಿಕರ ಕಾಫಿ ಬಾಳೆಗಿಡಗಳು ನಾಶವಾಗಿದೆ.

ಮಾದಾಪುರ ಜಂಬೂರು ಗ್ರಾಮದ ವಿ.ಕೆ.ಗಣೇಶ, ಇಬ್ರಾಹಿಂ, ಶಶಿಧರ, ರಜನಿ ಇವರ ಕಾಫಿ ತೋಟಕ್ಕೆ ಕಳೆದ ೩ ದಿನಗಳಿಂದ ರಾತ್ರಿ ವೇಳೆ ೪ ಕಾಡಾನೆಗಳು ನುಗ್ಗಿ ಹಲಸಿನ ಹಣ್ಣು, ಬಾಳೆಗಿಡವನ್ನು ತಿಂದು ಹಾಕಿದ್ದು, ಕಾಫಿ ತೋಟದೊಳಗೆ ಎಲ್ಲೆಂದರಲ್ಲಿ ಕಾಡಾನೆಗಳು ಅಡ್ಡಾಡಿರುವುದರಿಂದ ಕಾಫಿ ಗಿಡಗಳ ರಕ್ಕೆಗಳು ಮುರಿದು ಬಿದ್ದಿದೆ.

ಅರಣ್ಯ ಇಲಾಖೆಯವರು ಕಾಡಾನೆಗಳನ್ನು ತೋಟದಿಂದ ಕಾಡಿಗೆ ಅಟ್ಟಲು ಮುಂದಾಗಬೇಕೆAದು ಕೃಷಿಕರು ಆಗ್ರಹಿಸಿದ್ದಾರೆ.