ಮಡಿಕೇರಿ, ಫೆ. ೨೩: ಮಡಿಕೇರಿ ನಗರದ ಹೊರವಲಯದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆ ಮಹಿಳೆಯೋರ್ವರನ್ನು ದುಷ್ಕರ್ಮಿಗಳು ಕತ್ತಿಯಿಂದ ಕಡಿದು ಹತ್ಯೆ ಮಾಡಿರುವ ಭೀಕರ ಘಟನೆಯೊಂದು ನಿನ್ನೆ ಸಂಜೆ ನಡೆದಿದೆ. ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಕ್ಲಬ್ ಮಹೀಂದ್ರಾದ ಸನಿಹದಲ್ಲಿ ಈ ಘಟನೆ ಮಡಿಕೇರಿ, ಫೆ. ೨೩: ಮಡಿಕೇರಿ ನಗರದ ಹೊರವಲಯದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆ ಮಹಿಳೆಯೋರ್ವರನ್ನು ದುಷ್ಕರ್ಮಿಗಳು ಕತ್ತಿಯಿಂದ ಕಡಿದು ಹತ್ಯೆ ಮಾಡಿರುವ ಭೀಕರ ಘಟನೆಯೊಂದು ನಿನ್ನೆ ಸಂಜೆ ನಡೆದಿದೆ. ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಕ್ಲಬ್ ಮಹೀಂದ್ರಾದ ಸನಿಹದಲ್ಲಿ ಈ ಘಟನೆ ಚಿನ್ನಾಭರಣಗಳನ್ನು ಅಪಹರಿಸಿ ಪರಾರಿಯಾಗಿದ್ದಾರೆ. ನಿನ್ನೆ ಸಂಜೆ ವೇಳೆ ಈ ಕೃತ್ಯ ನಡೆದಿರುವ ಸಾಧ್ಯತೆಯಿದ್ದು, ರಾತ್ರಿ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.ಪೂರ್ಣ ವಿವರಕೆ ನಿಡುಗಣೆಯ ನಿವಾಸಿ ದಿ. ಬೈಲಾಡಿ ಹೊನ್ನಪ್ಪ ಅವರ ಪತ್ನಿ ಲಲಿತಾ ಕಳೆದ ಹಲವು ವರ್ಷಗಳಿಂದ ಒಬ್ಬರೇ ವಾಸಿಸುತ್ತಿದ್ದು, ತಮ್ಮ ತೋಟದ ಉಸ್ತುವಾರಿಯನ್ನು ಗಮನಿಸುತ್ತಿದ್ದರು. ಇವರ ಪುತ್ರ ಗೋಪಾಲಕೃಷ್ಣ ಮೈಸೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಇಬ್ಬರು ಪುತ್ರಿಯರಲ್ಲಿ ಒಬ್ಬರಾದ ಚಂದ್ರಾವತಿ ಕಲ್ಲುಗುಂಡಿಯಲ್ಲಿ ಹಾಗೂ ಮೀನಾಕ್ಷಿ ಬೆಂಗಳೂರಿನಲ್ಲಿದ್ದಾರೆ. ಪುತ್ರಿ ಚಂದ್ರಾವತಿಯ ಪ್ರಕಾರ ಇವರು ತಾಯಿಯೊಂದಿಗೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದರು. ನಿನ್ನೆ ಬೆಳಿಗ್ಗೆಯೂ ಇವರು ಮಾತನಾಡಿದ್ದು, ಸಂಜೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸದಿದ್ದಾಗ ಆತಂಕಗೊAಡು ಬಂಧುಗಳಿಗೆ ತಿಳಿಸಲಾಗಿದೆ.ಅವರು ಮನೆಗೆ ತೆರಳಿದಾಗ ಮನೆ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿರಲಿಲ್ಲ ಒಳಗೆ ಪರಿಶೀಲಿಸಿದಾಗ ಬೀರುವಿನ ಬಾಗಿಲು ತೆರೆದಿತ್ತಲ್ಲದೆ ಮನೆಯೊಳಗಿನ ವಸ್ತುಗಳು ಚೆಲಾ ್ಲಪಿಲ್ಲಿಯಾಗಿದ್ದು ಕಂಡು ಬಂದಿದ್ದು, ಮಕ್ಕಳಿಗೆ ಈ ವಿಷಯ ತಿಳಿಸಲಾಗಿದೆ. ಹುಡುಕಾಟ ನಡೆಸಿದಾಗ ಮನೆಯ ಬಾತ್‌ರೂಂನ ಬಳಿ ಲಲಿತಾ ರಕ್ತದ ಮಡುವಿನಲ್ಲಿ ಬಿದ್ದಿರುವದು ಕಂಡು ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
(ಮೊದಲ ಪುಟದಿಂದ) ಹಣ ಹಾಗೂ ಚಿನ್ನಾಭರಣ ಅಪಹರಿಸುವ ಉದ್ದೇಶದಿಂದಲೇ ಈ ಕೊಲೆ ನಡೆದಿರುವದಾಗಿ ಶಂಕೆ ವ್ಯಕ್ತಗೊಂಡಿದೆ. ಕೆಲದಿನಗಳ ಹಿಂದೆಯಷ್ಟೆ ಇವರು ಕಾಫಿಯನ್ನು ಮಾರಾಟ ಮಾಡಿದ್ದಾರೆನ್ನಲಾಗಿದೆ. ಪುತ್ರ ಗೋಪಾಲಕೃಷ್ಣ ವಾರಕ್ಕೊಮ್ಮೆ ಮಾತ್ರ ಮನೆಗೆ ಬಂದು ಹೋಗುತ್ತಿದ್ದರೆನ್ನಲಾಗಿದೆ. ಘಟನೆಯ ಬಗ್ಗೆ ಪುತ್ರ ಗೋಪಾಲಕೃಷ್ಣ ಅವರು ನೀಡಿದ ಪುಕಾರಿನಂತೆ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ರೂ. ೫೦ ಸಾವಿರದಷ್ಟು ನಗದು, ೧೫ ಪವನ್‌ನಷ್ಟು ಚಿನ್ನದ ಆಭರಣಗಳು ಕಳುವಾಗಿರುವದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಹತ್ಯೆಗೀಡಾದ ಲಲಿತಾ ಅವರ ಮನೆಯ ಸನಿಹದಲ್ಲಿ ಕೆಲವು ಉತ್ತರ ಭಾರತದ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಇವರಲ್ಲಿ ಕೆಲವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆನ್ನಲಾಗಿದೆ. ಮೃತರ ಮನೆಯಲ್ಲಿದ್ದ ಕೆಲವು ಮದ್ಯದ ಬಾಟಲಿಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದು, ಅನತಿ ದೂರದಲ್ಲಿ ಮರದ ಬುಡವೊಂದರ ಕೆಳಗೆ ಖಾಲಿ ಬಾಟಲಿಗಳೂ ಪತ್ತೆಯಾಗಿವೆ.
ಅಪರಿಚಿತ ವ್ಯಕ್ತಿಗಳಿಂದ ಹತ್ಯೆ ನಡೆದಿದೆಯೋ ಅಥವಾ ಇವರ ಬಗ್ಗೆ ಪೂರ್ಣಮಾಹಿತಿ ಇರುವವರಿಂದಲೂ ಈ ಕೃತ್ಯ ನಡೆದಿದೆಯೇ ಎಂಬ ಸಂಶಯದ ಮಾತುಗಳೂ ಕೇಳಿ ಬಂದಿದ್ದು, ಎಲ್ಲಾ ಆಯಾಮದಿಂದಲೂ ಪೊಲೀಸ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಘಟನೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ, ಬೆರಳಚ್ಚು ತಜ್ಞರು ತೆರಳಿ ಪರಿಶೀಲನೆಯೊಂದಿಗೆ ಮಹಜರು ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಒಂಟಿಯಾಗಿದ್ದ ಈ ವೃದ್ಧೆಯ ಹತ್ಯೆ ಪ್ರಕರಣ ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಪೊಲೀಸ್ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ. ಎಸ್‌ಪಿ ಕ್ಷಮಾಮಿಶ್ರಾ, ಡಿವೈಎಸ್‌ಪಿ ದಿನೇಶ್‌ಕುಮಾರ್, ವೃತ್ತ ನಿರೀಕ್ಷಕರಾದ ದಿವಾಕರ್, ಅನೂಪ್ ಮಾದಪ್ಪ, ಎಸ್‌ಐಗಳಾದ ಚಂದ್ರಶೇಖರ್, ರವಿಕಿರಣ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದರು.