ಮಡಿಕೇರಿ, ಫೆ. ೨೩: ಮೂಲತಃ ಕೊಡಗಿನ ಸಾಹಿತ್ಯ ದಂಪತಿಗಳು, ಕೊಡಗು ಜಿಲ್ಲಾ ೯ನೇ ಸಮ್ಮೇಳನಾಧ್ಯಕ್ಷರಾಗಿದ್ದ ವಿಧ್ವಾನ್ ವಿಷ್ಣುಭಟ್ ಹಾಗೂ ಕೊಡಗು ಜಿಲ್ಲಾ ಪ್ರಥಮ ಮಹಿಳಾ ಸಮ್ಮೇಳನದ ಅಧ್ಯಕ್ಷರಾಗಿದ್ದ ವಿಜಯ ವಿಷ್ಣುಭಟ್ ಅವರು ಕೊಡಗಿನ ಲೇಖಕಿಯರಿಗಾಗಿ ೫೦ ಸಾವಿರ ರೂ.ಗಳ ಹೊಸ ದತ್ತಿ ಯೊಂದನ್ನು ಸ್ಥಾಪಿಸಿದ್ದಾರೆ.

ಜಿಲ್ಲಾ ಕಸಾಪ ನಿರ್ದೇಶಕ ಎಸ್.ಪಿ. ಪ್ರಸನ್ನ ಹಾಗೂ ಸುಲೋಚನಾ ಪ್ರಸನ್ನ ಅವರು ಕಟ್ಟೆಮನೆ ಎಸ್. ಪುಟ್ಟಸ್ವಾಮಿ ಅವರ ಹೆಸರಿನಲ್ಲಿ ೨೫ ಸಾವಿರ ರೂ.ಗಳ ದತ್ತಿ ಸ್ಥಾಪಿಸಿದ್ದಾರೆ. ಈ ಎರಡು ದತ್ತಿಗಳ ಡಿಡಿಗಳನ್ನು ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಅವರು ರಾಜ್ಯಾಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಅವರಿಗೆ ನೀಡಿದರು. ರಾಜ್ಯ ಕಸಾಪ ಕಾರ್ಯದರ್ಶಿ ಕೆ. ರಾಜ ಕುಮಾರ್ ಇದ್ದರು.