ಮಡಿಕೇರಿ, ಫೆ.೨೩: ಗುಂಪು ಗಾರಿಕೆ ನಿಲ್ಲಿಸಿದರೆ ಮಾತ್ರ ಪಕ್ಷ ಸಂಘಟನೆ ಸಾಧ್ಯ. ಪರಸ್ಪರ ಕಾಲೆಳೆಯುವುದು ಹಾಗೂ ಗೊಂದಲ ಸೃಷ್ಟಿಸುವುದನ್ನು ಸ್ಥಳೀಯ ನಾಯಕರು ಬಿಡಬೇಕು. ರಾಜ್ಯ ನಾಯಕರು ಜಿಲ್ಲೆಯ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕೆAದು ಜೆ.ಡಿ.ಎಸ್. ಕಾರ್ಯಕರ್ತರು ರಾಜ್ಯ ನಾಯಕರ ಎದುರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ವಾಣಿಜ್ಯೋದ್ಯಮಿ ಸಹಕಾರ ಸಂಘದ ಸಭಾಂಗಣದಲ್ಲಿ ಕ್ಷೇತ್ರ, ಜಿಲ್ಲಾ ಸಮಿತಿ ವಿಸರ್ಜನೆ ಹಾಗೂ ಪುನರ್ ರಚನೆ ಸಂಬAಧ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ ಎನ್.ಎನ್ ನಿಂಗಯ್ಯ ವೀಕ್ಷಕರಾಗಿ ಆಗಮಿಸಿ ಕಾರ್ಯಕರ್ತರ ಅಭಿ ಪ್ರಾಯ ಕಲೆಹಾಕಿದರು. ಕಾರ್ಯ ಕರ್ತರು ತಮ್ಮ ದೂರು, ಸಲಹೆಗಳನ್ನು ನೀಡಿದರು. ಹಾಲಿ ಜಿಲ್ಲಾಧ್ಯಕ್ಷ ಕೆ.ಎಂ.ಬಿ ಗಣೇಶ್ ಜಿಲ್ಲಾಧ್ಯಕ್ಷರಾಗಿ ಮುಂದುವರೆಸುವ ಒತ್ತಾಯಗಳು ಕೂಡ ಕಾರ್ಯಕರ್ತ ರಿಂದ ಕೇಳಿ ಬಂತು.
ಕಾರ್ಯಕರ್ತರ ಆಕ್ರೋಶ
ವೀರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಜಿಲ್ಲೆಗೆ ಆಗಮಿಸಿ ಬಹಿರಂಗ ಸಭೆ ನಡೆಸಿದ್ದಾರೆ. ಇದರಲ್ಲಿ ಜಿಲ್ಲಾಧ್ಯಕ್ಷರು ಸೇರಿದಂತೆ ನಾಯಕರನ್ನು ಕಡೆಗಣಿಸಲಾಗಿದೆ. ಕೆಲವರು ಗುಂಪುಗಾರಿಕೆ ನಡೆಸಿ ಪಕ್ಷವನ್ನು ಇಬ್ಭಾಗ ಮಾಡಿದ್ದಾರೆ. ಪರಿಣಾಮ ಕೆಲ ಪ್ರಮುಖರು ಪಕ್ಷ ತ್ಯಜಿಸಿದ್ದಾರೆ. ಪಕ್ಷದೊಳಗೆ ಗೊಂದಲ ಸೃಷ್ಟಿಸು ವವರು ನಮಗೆ ಬೇಕಾಗಿಲ್ಲ. ಪಕ್ಷಕ್ಕೆ ಗೌರವ ನೀಡುವವರು ಬೇಕೆಂದು ಹೇಳಿದರು.
ಬಿ.ಎ ಯೂಸಫ್ ಮಾತನಾಡಿ, ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತಿದೆ. ಇದರಿಂದ ಅಲ್ಪಸಂಖ್ಯಾತ ಮತಗಳು ವಿಭಜನೆಯಾಗುತ್ತಿದೆ. ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು ವಿಧಾನಸಭಾ ಕ್ಷೇತ್ರವನ್ನು ಅಲ್ಪಸಂಖ್ಯಾತರಿಗೆ ಮೀಸಲಿಡುವಂತೆ ರಾಜ್ಯ ನಾಯಕರು ಚುನಾವಣಾ ಆಯೋಗಕ್ಕೆ ಮನವಿ ಮಾಡಬೇಕು. ಜಿಲ್ಲಾಧ್ಯಕ್ಷರು ಉತ್ತಮವಾಗಿ ಕಾರ್ಯಚಟುವಟಿಕೆ ನಡೆಸುತ್ತಿದ್ದಾರೆ. ಅವರನ್ನು ಅಧ್ಯಕ್ಷರ ನ್ನಾಗಿ ಮುಂದುವರೆಸುವAತೆ ಸಲಹೆ ನೀಡಿದರು.
ಯುವ ಘಟಕದ ಜಿಲ್ಲಾಧ್ಯಕ್ಷ ವಿಶ್ವ ಕುಮಾರ್ ಮಾತನಾಡಿ, ರಾಷ್ಟಿçÃಯ ಪಕ್ಷಗಳಲ್ಲೂ ಗೊಂದಲಗಳಿವೆ. ಆದರೆ, ಜೆಡಿಎಸ್‌ನಲ್ಲಿರುವ ಭಿನ್ನಮತ, ಗೊಂದಲಗಳು ಬಹಿರಂಗವಾಗುತ್ತಿದೆ. ಕೆಲವರು ಪಕ್ಷ ಒಡೆಯಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ಜಿಲ್ಲಾಧ್ಯಕ್ಷರನ್ನು ಕೆಲವರು ಬೆದರಿಸಿದ ಪರಿಣಾಮವಾಗಿ ಇಬ್ಬರು ನಾಯಕರನ್ನು ಪಕ್ಷ ಕಳೆದುಕೊಂಡಿದೆ. ಗಣೇಶ್ ಅವರು ಸಮರ್ಥವಾಗಿ ಪಕ್ಷ ಸಂಘಟಿಸುತ್ತಿ ದ್ದಾರೆ ಎಂದು ಅಭಿಪ್ರಾಯಪಟ್ಟರು.
ವೀರಾಜಪೇಟೆ ಪಟ್ಟಣ ಪಂಚಾಯ್ತಿ ಸದಸ್ಯ ಮತೀನ್ ಮಾತನಾಡಿ, ಪಕ್ಷಕ್ಕೆ ಕಾರ್ಯಕರ್ತರ ಕೊರತೆ ಇಲ್ಲ ನಾಯಕರ ಕೊರತೆ ಇದೆ. ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭ ಜಿಲ್ಲಾ ನಾಯಕರನ್ನು ಅವಮಾನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖರಾದ ಎಂ.ಎA ಷರೀಫ್ ಮಾತನಾಡಿ, ರಾಜ್ಯದಲ್ಲಿ ಜೆ.ಡಿ.ಎಸ್. ಅಧಿಕಾರದಲ್ಲಿದ್ದ ಸಂದರ್ಭ ಸಚಿವರು ಗಳು ಸಕರಾತ್ಮಕವಾಗಿ ಸ್ಪಂದಿಸುತ್ತಿರ ಲಿಲ್ಲ ಎಂದು ದೂರಿದರು.
ಜಿಲ್ಲಾಧ್ಯಕ್ಷರ ಮುಂದುವರಿಕೆ..?
ಮುಖ್ಯ ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಸಚಿವ ಬಿ.ಬಿ ನಿಂಗಯ್ಯ ಮಾತನಾಡಿ, ಈಗಾಗಲೇ ಕಾರ್ಯಕರ್ತರು ಕೆ.ಎಂ.ಬಿ. ಗಣೇಶ್ ಅವರೇ ಜಿಲ್ಲಾಧ್ಯಕ್ಷರಾಗಿ ಮುಂದುವರೆ ಯಬೇಕೆಂಬ ಮನವಿ ಮಾಡಿದ್ದಾರೆ. ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಮನಸ್ಥಿತಿಗೆ ಪೂರಕವಾಗಿ ಸಮಿತಿ ರಚಿಸಲಾಗು ತ್ತದೆ. ಸಂಘಟನೆಗೆ ಕಾರ್ಯಕರ್ತರು ಒತ್ತು ನೀಡಬೇಕೆಂದು ಕರೆ ನೀಡಿದರು.
ಜೆ.ಡಿ.ಎಸ್ ಜನಪರ ಪಕ್ಷವಾಗಿದೆ. ರಾಜಕೀಯ ಮೇಲಾಟದಲ್ಲಿ ಅಧಿಕಾರ ಕಳೆದುಕೊಂಡಿದೆ. ಅಧಿಕಾರ ಅನುಭವಿಸಿದವರು ಪಕ್ಷ ಬಿಟ್ಟಿದ್ದಾರೆ. ಕೋಮುವಾದಿ ಪಕ್ಷವಾದ ಬಿ.ಜೆ.ಪಿ ಯನ್ನು ಸೋಲಿಸಲು ಜಾತ್ಯತೀತ ಪಕ್ಷಗಳು ಒಂದಾಗಬೇಕು. ರಾಷ್ಟಿçÃಕರಣ ಮಾಡದೆ ಖಾಸಗೀಕರಣವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕೇಂದ್ರ ಸರ್ಕಾರದ ತಪ್ಪನ್ನು ಟೀಕಿಸಿದರೆ ರಾಷ್ಟçದ್ರೋಹಿ ಗಳೆಂದು ಬಿಂಬಿಸುವ ಕೆಲಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಕೆ.ಎಂ.ಬಿ ಗಣೇಶ್ ಮಾತನಾಡಿ, ಕೊರೊನಾ, ಪ್ರಾಕೃತಿಕ ವಿಕೋಪ ಪರಿಸ್ಥಿತಿಯಲ್ಲಿ ಜನರ ಸಮಸ್ಯೆಗೆ ಸ್ಪಂದನ ನೀಡಿದ್ದೇವೆ. ೨೦೧೮ರಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ನೆರೆ ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಒದಗಿಸಿ, ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಿದ್ದಾರೆ. ೨೦೨೩ರಲ್ಲಿ ಕುಮಾರ ಸ್ವಾಮಿ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ದುಡಿಯಬೇಕು. ಮುಂದಿನ ಜಿಲ್ಲಾ, ತಾಲೂಕು ಪಂಚಾಯ್ತಿ, ನಗರಸಭೆ ಚುನಾವಣೆ ಗೆಲುವಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ದಾವಣಗೆರೆ ತಾಲೂಕು ಅಧ್ಯಕ್ಷ ಹಾಗೂ ವೀಕ್ಷಕ ಅಮಾನುಲ್ಲಾ ಮಾತನಾಡಿ, ಮುಸ್ಲಿಮರಿಗೆ ರಾಜಕೀಯ ಸ್ಥಾನಮಾನ ನೀಡಿರುವ ಏಕೈಕ ಪಕ್ಷ ಜೆ.ಡಿ.ಎಸ್ ಆಗಿದೆ. ಸ್ವಾರ್ಥಿಗಳು ಪಕ್ಷ ತೊರೆಯುತ್ತಿದ್ದಾರೆ. ಸ್ವಾಭಿಮಾನಿಗಳು ಪಕ್ಷದಲ್ಲಿ ಉಳಿದುಕೊಂಡಿದ್ದಾರೆ ಎಂದರು. ಶಿವಮೊಗ್ಗ ಜಿಲ್ಲಾಧ್ಯಕ್ಷ ಶ್ರೀಕಾಂತ್ ಸೇರಿದಂತೆ ಪಕ್ಷದ ಪ್ರಮುಖರು ಈ ಸಂದರ್ಭ ಹಾಜರಿದ್ದರು.