ಗೋಣಿಕೊಪ್ಪಲು, ಫೆ. ೨೨: ದ.ಕೊಡಗಿನ ನಿಟ್ಟೂರು ಗ್ರಾಮವು ತಳಿರು ತೋರಣಗಳಿಂದ ಸಿಂಗಾರಗೊAಡು ಇದೇ ಮೊದಲ ಬಾರಿಗೆ ನಡೆಯುತ್ತಿರುವ ‘ನಮ್ಮ ಜನ - ನಮ್ಮ ಸಂಸ್ಕೃತಿ’ ಗಿರಿಜನೋತ್ಸವಕ್ಕೆ ವೇದಿಕೆ ಸಜ್ಜುಗೊಂಡಿದ್ದು ತಾ. ೨೩ ರಂದು (ಇಂದು) ರಾಜ್ಯದ ೧೩ ಜಿಲ್ಲೆಗಳ ೧೫೦ಕ್ಕೂ ಅಧಿಕ ಗಿರಿಜನ ಕಲಾವಿದÀರು ನೃತ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಕೊಡಗಿನ ವಿವಿಧ ಭಾಗದಿಂದ ಗಿರಿಜನರ ತಂಡಗಳು ಭಾಗವಹಿಸಲಿವೆ.

ನಿಟ್ಟೂರು ಪಂಚಾಯಿತಿಯ ನೂತನ ಅಧ್ಯಕ್ಷ ಚೆಕ್ಕೆರ ಸೂರ್ಯ ಅಯ್ಯಪ್ಪ, ಸದಸ್ಯ ಕಾಟಿಮಾಡ ಶರೀನ್ ಮುತ್ತಣ್ಣ, ವನವಾಸಿ ಕಲ್ಯಾಣ ಕೇಂದ್ರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ರಂಗಾಯಣ ದೊಂದಿಗೆ ಕೈ ಜೋಡಿಸಿ ಉತ್ತಮ ಕಾರ್ಯಕ್ರಮ ರೂಪಿಸಲು ಹಲವು ಸುತ್ತಿನ ಪೂರ್ವಭಾವಿ ಸಭೆಗಳನ್ನು ನಡೆಸಿ ಕಾರ್ಯಕ್ರಮ ಅಂದಗಾಣಿಸಲು ಸರ್ವ ಪ್ರಯತ್ನ ಮಾಡಿದ್ದಾರೆ.

ರಂಗಾಯಣ, ಮೈಸೂರು ವನವಾಸಿ ಕಲ್ಯಾಣ ಕೇಂದ್ರ ಕೊಡಗು ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಗಿರಿಜನ ಉಪಯೋಜನೆ, ನಿಟ್ಟೂರು ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ‘ನಮ್ಮ ಜನ -ನಮ್ಮ ಸಂಸ್ಕೃತಿ ಗಿರಿಜನೋತ್ಸವ ಕಾರ್ಯಕ್ರಮವು ಮುಂಜಾನೆ ೯ ಗಂಟೆಯಿAದ ಸಂಜೆ ೬ ಗಂಟೆಯವರೆಗೂ ನಡೆಯಲಿದೆ. ಹೊರ ಜಿಲ್ಲೆಯಿಂದ ಬರುವ ಕಲಾವಿದÀರಿಗೆ ಕೊಡಗಿನ ಆತಿಥ್ಯ ನೀಡಲು ನಿಟ್ಟೂರು ಗ್ರಾಮ ಪಂಚಾಯಿತಿಯ ನೂತನ ಆಡಳಿತ ಮಂಡಳಿ ನಿರ್ಧರಿಸಿದೆ. ಹೊರ ಜಿಲ್ಲೆಯಿಂದ ಆಗಮಿಸುವ ಕಲಾವಿದÀರಿಗೆ ಉಳಿದುಕೊಳ್ಳಲು ಸಮೀಪದ ವಸತಿ ಶಾಲೆಯ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಇವರಿಗೆ ಬೆಳಗಿನ ಉಪಹಾರ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಲು ಸಮಿತಿಯು ಕಾರ್ಯೋನ್ಮುಖವಾಗಿವೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಿರಿಜನರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವು ಆಯೋಜನೆಗೊಂಡಿದೆ.

ನೃತ್ಯೋತ್ಸವವನ್ನು ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ವೇದಿಕೆಯಲ್ಲಿ ೫೦೦ಕ್ಕೂ ಅಧಿಕ ಕುರ್ಚಿಗಳನ್ನು ಜೋಡಿಸಲಾಗಿದೆ. ಅಲ್ಲದೆ ನೃತ್ಯೋತ್ಸವ ನಡೆಸಲು ಸುಸಜ್ಜಿತ ವೇದಿಕೆ ನಿರ್ಮಾಣವಾಗಿದೆ. ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮದ ಯಶಸ್ವಿಗೆ ವಿವಿಧ ಸಮಿತಿಗಳು ಶ್ರಮಿಸುತ್ತಿವೆ.