ಮಡಿಕೇರಿ, ಫೆ. ೨೨: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ತರಬೇತಿ ಆರಂಭಿಸಲು ಸರ್ಕಾರದಿಂದ ಅನುಮತಿ ದೊರೆತಿದ್ದು, ಪ್ರಸಕ್ತ ವರ್ಷವೇ ತರಗತಿಗಳು ಆರಂಭವಾಗಲಿದೆ.೧೦೦ ಸರ್ಕಾರಿ ಸೀಟುಗಳು ಈ ತರಬೇತಿಗಾಗಿ ಮೀಸಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಬಹುದಾಗಿದೆ. ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಪ್ರಕ್ರಿಯೆ ನಡೆಯಲಿದ್ದು, ಬಿಎಸ್ಸಿ ನರ್ಸಿಂಗ್ ಕೋರ್ಸ್ ತರಬೇತಿಗಾಗಿ ಹೊರ ಜಿಲ್ಲೆಗಳನ್ನು ಅವಲಂಭಿಸಬೇಕಾಗಿದ್ದ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ.

ನಾಲ್ಕುವರೆ ವರ್ಷದ ತರಬೇತಿ ಇದಾಗಿದ್ದು, ಈ ತರಬೇತಿಯಲ್ಲಿ ಆಸ್ಪತ್ರೆಗಳ ಬೆಡ್ ನಿರ್ವಹಣೆಯಿಂದ ಮೊದಲ್ಗೊಂಡು ರೋಗಿಗಳ ಸ್ಥಿತಿಗತಿಯ ಬಗ್ಗೆ ನಿಗಾವಹಿಸುವುದು ಸೇರಿದಂತೆ ರೋಗಿಗಳಿಗೆ ಔಷಧಿ ವಿತರಣೆ ಇವುಗಳೆಲ್ಲದರ ಬಗ್ಗೆ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಆರಂಭದಿAದಾಗಿ ವೈದ್ಯಕೀಯ ಕಾಲೇಜಿನ (ಮೊದಲ ಪುಟದಿಂದ) ಗುಣಮಟ್ಟ ಮತ್ತಷ್ಟು ಏರಿಕೆಯಾಗಲಿದೆ. ಈಗಾಗಲೇ ಕಾಲೇಜಿನಲ್ಲಿ ಎಂಬಿಬಿಎಸ್, ಪ್ಯಾರಮೆಡಿಕಲ್ ಕೋರ್ಸ್ ನಡೆಯುತ್ತಿದ್ದು, ಇದೀಗ ಬಿಎಸ್ಸಿ ನರ್ಸಿಂಗ್ ಕೋರ್ಸ್ ಸೇರ್ಪಡೆಗೊಳ್ಳುವ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳು ಕೂಡ ಈ ತರಬೇತಿಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತಿದೆ.

ಬಿಎಸ್ಸಿ ನರ್ಸಿಂಗ್ ಕೋರ್ಸ್ ಆರಂಭಿಸುವ ಸಂಬAಧ ಈಗಾಗಲೇ ಸರ್ಕಾರ ಅನುಮತಿ ನೀಡಿದೆ. ಪ್ರಸಕ್ತ ವರ್ಷವೇ ತರಬೇತಿ ಆರಂಭವಾಗಲಿದ್ದು, ಅರ್ಜಿ ಆಹ್ವಾನ ಕೌನ್ಸಿಲಿಂಗ್ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿದ್ದಂತೆ ಜಿಲ್ಲೆಯ ಮೆಡಿಕಲ್ ಕಾಲೇಜಿನಲ್ಲಿ ತರಗತಿಗಳು ಆರಂಭಗೊಳ್ಳಲಿವೆ. ಈ ತರಬೇತಿಗೆ ಅಗತ್ಯವಾದ ಬೋಧಕ ಸಿಬ್ಬಂದಿಯೂ ತಮ್ಮ ಕಾಲೇಜಿನಲ್ಲಿ ಇದ್ದಾರೆ. ಮೊದಲ ವರ್ಷದ ತರಬೇತಿ ಮೆಡಿಕಲ್ ಕಾಲೇಜಿನಲ್ಲಿ ನಡೆಯಲಿದ್ದು, ಎರಡನೇ ವರ್ಷದಿಂದ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ತರಬೇತಿ ಮುಂದುವರೆಯಲಿದೆ. ವಿದ್ಯಾರ್ಥಿಗಳಿಗೆ ವಸತಿ ನಿಲಯ ವ್ಯವಸ್ಥೆಗೆ ಸಂಬAಧಿಸಿದAತೆ ಈಗಾಗಲೇ ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ವೈದ್ಯಕೀಯ ಕಾಲೇಜಿನ ಡೀನ್ ಡಾ. ಕಳ್ಳಿಚಂಡ ಕಾರ್ಯಪ್ಪ ತಿಳಿಸಿದ್ದಾರೆ.