ವೀರಾಜಪೇಟೆ ವರದಿ, ಫೆ. ೨೨: ಕೂರ್ಗ್ ಕಾವೇರಿ ಬ್ರಿಗೇಡಿರ‍್ಸ್ (ಸಿ.ಸಿ.ಬಿ) ಪ್ರಾಯೋಜಿತ ಐದನೇ ವರ್ಷದ ಕಾಲ್ಚೆಂಡು ಪಂದ್ಯಾಟದ ಕಿರೀಟವನ್ನು ಇಕ್ಯುಅರ್ ಎಫ್.ಸಿ. ತಂಡ ಮುಡಿಗೇರಿಸಿಕೊಂಡಿತು. ಅಂತಿಮ ಹಂತಕ್ಕೆ ನಾಲ್ಕು ತಂಡಗಳು ಅರ್ಹತೆ ಪಡೆದವು. ಪ್ರಥಮ ಸೆಮಿಫೈನಲ್ ಚಾಮುಂಡಿ ಎಫ್.ಸಿ. ಒಂಟಿಅAಗಡಿ ಮತ್ತು ಇಕ್ಯುಅರ್ ಬೆಂಗಳೂರು ನಡುವೆ ನಡೆದು, ೫-೧ ಗೋಲುಗಳಿಂದ ಇಕ್ಯುಅರ್ ತಂಡ ವಿಜಯವಾಯಿತು.

ದ್ವಿತೀಯ ಸೆಮಿಫೈನಲ್‌ನಲ್ಲಿ ಹಲ್ ಶೀಬಾಬ್ ಕಣ್ಣೂರು ಮತ್ತು ಕೆಎಲ್.೧೦ ಮಲಪುರಂ ತಂಡಗಳ ನಡುವೆ ಪಂದ್ಯಾಟದಲ್ಲಿ ೨-೧ ಗೋಲುಗಳಿಂದ ಕೆ.ಎಲ್ ೧೦ ಮಲಪುರಂ ತಂಡವು ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು.

ಫೈನಲ್‌ನಲ್ಲಿ ಇಕ್ಯುಅರ್ ಬೆಂಗಳೂರು ಮತ್ತು ಕೆ.ಎಲ್ ೧೦ ಮಲಪುರಂ ಕೇರಳ ತಂಡಗಳಲ್ಲಿ ನಡೆದು ಉಭಯ ತಂಡಗಳು ಯಾವುದೇ ಗೋಲು ಗಳಿಸಲು ಶಕ್ತವಾಗಲಿಲ್ಲಾ. ಪೆನಾಲ್ಟಿ ಶೂಟ್‌ಔಟ್ ನಲ್ಲಿ ೧-೦ ಗೋಲುಗಳಿಂದ ಇಕ್ಯುಅರ್ ಬೆಂಗಳೂರು ತಂಡವು ಜಯಗಳಿಸಿತು.

ಮೂರು ದಿನಗಳವರೆಗೆ ನಡೆದ ಹೊನಲು ಬೆಳಕಿನ ರಾಷ್ಟçಮಟ್ಟದ ಕಾಲ್ಚೆಂಡು ಪಂದ್ಯಾಟದಲ್ಲಿ ಸ್ಥಳೀಯ ಕ್ಲಬ್‌ಗಳು ವಿದೇಶಿ ಅತಿಥಿ ಆಟಗಾರ ರನ್ನು ಪರಿಚಯಿಸುವಲ್ಲಿ ಸಫಲ ವಾಯಿತು. ಅರಸು ನಗರದ ಸುದಿ ಫ್ರೆಂಡ್ಸ್ ತಂಡದಲ್ಲಿ ಸೂಡಾನ್ ದೇಶದ ಆಟಗಾರ, ತಂಡದ ಪರವಾಗಿ ಅತಿಥಿ ಆಟಗಾರನಾಗಿ ಆಟವಾಡಿದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಿಲ್ಲಾ ಫುಟ್ಬಾಲ್ ಅಸೋಸೀಯೇಷನ್‌ನ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಶಿಸ್ತು ಬದ್ಧತೆಯಿಂದ ಕಾರ್ಯಕ್ರಮಗಳು ಆಯೋಜನೆಗೊಂಡಲ್ಲಿ ಪಂದ್ಯಾಟವು ಯಶಸ್ಸು ಸಾಧಿಸುತ್ತದೆ. ಕಾಲ್ಚೆಂಡು ಪಂದ್ಯಾಟವನ್ನು ಸತತ ನಾಲ್ಕು ವರ್ಷ ಗಳಿಂದ ನಡೆಸುತ್ತಿರುವುದು ಕ್ರೀಡೆಗೆ ಗೌರವ ತಂದುಕೊಟ್ಟಿದೆ ಎಂದರು.

ಅAತರ್‌ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ ಜಿಲ್ಲೆಯು ಪುಟ್ಟದಾಗಿದ್ದರು, ಕ್ರೀಡೆಯಲ್ಲಿ ಉತ್ತಮವಾದ ಸಾಧನೆ ಮಾಡಿದೆ. ಹಾಕಿ ಕ್ರೀಡೆಯೊಂದಿಗೆ ಇತರ ಕ್ರೀಡೆಗಳಿಗೂ ಸಮಾನವಾಗಿ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ಬೆಳವಣಿಗೆಯಾಗಿದೆ ಎಂದರು.

ಕಾರ್ಯಕ್ರಮನ್ನು ಉದ್ದೇಶಿಸಿ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಪಟ್ಟಣ ಪಂಚಾಯಿತಿ ಸದಸ್ಯ ರಾಜೇಶ್ ಪದ್ಮನಾಭ ಮತ್ತು ಅಂತರರಾಷ್ಟಿçÃಯ ಫುಟ್ಬಾಲ್ ಆಟಗಾರ ಮೊಹಮ್ಮದ್ ರಫೀಕ್ ಮಾತನಾಡಿದರು.

ವೇದಿಕೆಯಲ್ಲಿ ಸುಂಟಿಕೊಪ್ಪದ ಉದ್ಯಮಿ ಮತ್ತು ಕ್ರೀಡಾಪಟು ಇಬ್ರಾಹಿಂ, ವೀರಾಜಪೇಟೆಯ ಉದ್ಯಮಿ ಪ್ರಾಯೋಜಕ ಬಿ.ಜೆ. ಬೋಪಣ್ಣ ಮತ್ತು ಸಿ.ಸಿ.ಬಿ. ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭ ಕ್ರೀಡಾ ರಂಗ ದಲ್ಲಿ ಸಾದನೆ ಗೈದ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿ ಯೇಷನ್ ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ರಾಷ್ಟçಮಟ್ಟದ ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ ಫುಟ್ಬಾಲ್ ಕ್ರೀಡಾ ಪಟು ಸುಂಟಿಕೊಪ್ಪದ ಮೊಹಮ್ಮದ್ ರಫೀಕ್, ಅಂತರ ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.

ದೇಶದ ನಾನಾ ರಾಜ್ಯ ಹಾಗೂ ಜಿಲ್ಲೆ ಸೇರಿದಂತೆ ಒಟ್ಟು ೪೨ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್‌ಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಬೆಂಗಳೂರಿನ ಮಹೇಶ್ ಬಾಬು, ಮತ್ತು ಕೆವೀನ್ ಅವರು ಪಂದ್ಯಾಟದ ತೀರ್ಪುಗಾರ ರಾಗಿ ಕಾರ್ಯ ನಿರ್ವಹಿಸಿದರು. ಪುಲ್ವಾಮದಲ್ಲಿ ಮೃತಪಟ್ಟ ವೀರ ಯೋಧರಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಲಾಯಿತು.

ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಲಾಯಿತು. ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳು ಹಾಗೂ ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.