ಮಡಿಕೇರಿ, ಫೆ. 21: ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಮಡಿಕೇರಿ ಮಿಡಲ್ ಗ್ರೌಂಡ್ ಕೊಡವ ಕೋಲ್ ಮಂದ್ನಲ್ಲಿ ಸಮಾಲೋಚನಗೆ ಸಭೆ, ಸತ್ಯಾಗ್ರಹ ನಡೆಯಿತು. ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಸೇರಿಸಬೇಕು ಮತ್ತು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು ಹಾಗೂ ಪ್ರತೀ ವರ್ಷ ಆಕ್ಸ್ಫರ್ಡ್ ಡಿಕ್ಷನರಿಯು ಜಗತ್ತಿನ ವಿವಿಧ ಭಾಷೆಗಳ 15 ಸಾವಿರ ಪದಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಕೊಡವ ಭಾಷೆಯ ಪದಗಳನ್ನೂ ಸೇರಿಸುವಂತೆ ಹಾಗೂ ಇತರ 18 ಹಕ್ಕೊತ್ತಾಯಗಳ ಪೂರೈಕೆಗೆ ಸಭೆಯಲ್ಲಿ ಒತ್ತಾಯ ಮಾಡಲಾಯಿತು.
ಕೊಡವ ಬುಡಕಟ್ಟು ಕುಲವನ್ನು ಎಸ್.ಟಿ. ಪಟ್ಟಿಗೆ ಸೇರಿಸಿ ಸಂವಿಧಾನ ಭದ್ರತೆ ನೀಡಬೇಕು, ಕೊಡವ ಭಾಷೆಯನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು, ಜಾಗತಿಕ ನಳಂದ ವಿಶ್ವವಿದ್ಯಾನಿಲಯ, ಇಂದಿರಾಗಾಂಧಿ ಬುಡಕಟ್ಟು ವಿಶ್ವವಿದ್ಯಾನಿಲಯ, ಜೆ.ಎನ್.ಯು. ವಿಶ್ವವಿದ್ಯಾನಿಲಯ, ತಿರುವನಂತ ಪುರಂನಲ್ಲಿರುವ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ದ್ರಾವಿಡಿಯನ್ ಲಿಂಗ್ವಿಸ್ಟಿಕ್ಸ್ ಮತ್ತು ಆಂದ್ರದ ದ್ರಾವಿಡ ವಿಶ್ವವಿದ್ಯಾನಿಲಯದಲ್ಲಿ ಕೊಡವ ಶಾಸ್ತ್ರ ಮತ್ತು ಕೊಡವ ಭಾಷೆಯ ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು, ಕೊಡವ ಭಾಷೆಯನ್ನು ಸಂವಿಧಾನದ 347 ನೇ ವಿಧಿಯ ಪ್ರಕಾರ ಪಠ್ಯ ಕ್ರಮದಲ್ಲಿ ಸೇರಿಸಬೇಕು ಹಾಗೂ ಇತರ ಒಟ್ಪು 18 ಬೇಡಿಕೆಗಳ ಪೂರೈಕೆಗೆ ಸತ್ಯಾಗ್ರಹದ ಮೂಲಕ ಸರಕಾರವನ್ನು ಒತ್ತಾಯಿಸಲಾಯಿತು.
ಸಿ.ಎನ್.ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ವಕೀಲ ಮತ್ತು ಬುಡಕಟ್ಟು ಕುರುಬ ಸಂರಕ್ಷಣೆ ಸಮಿತಿಯ ಅಧ್ಯಕ್ಷ ಲಕ್ಕವಳ್ಳಿ ಮಂಜುನಾಥ್ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬಾಚರಣಿಯಂಡ ಚಿಪ್ಪಣ್ಣ, ಬೊಟ್ಟಂಗಡ ಸವಿತಾ, ಬೊಟ್ಟಂಗಡ ಗಿರೀಶ್, ಬೊಟ್ಟಂಗಡ ದೇವಯ್ಯ, ಡಾ. ಬೊವ್ವೇರಿಯಂಡ ಉತ್ತಯ್ಯ, ಚಂದೀರ ರಾಜ, ಮಣವಟ್ಟೀರ ಸಿ. ಚಿಣ್ಣಪ್ಪ, ಚಂಬಂಡ ಜನತ್, ಕಾಟುಮಣಿಯಂಡ ಉಮೇಶ್, ಬೆಪ್ಪಾಡಿಯಂಡ ದಿನು, ಬೆಪ್ಪಾಡಿಯಂಡ ಬಿದ್ದಪ್ಪ, ಪುದಿಯೊಕ್ಕಡ ಕಾಶಿ, ಅಜ್ಜಿನಿಕಂಡ ಸನ್ನಿ, ಪಟ್ಟಮಾಡ ಕುಶ, ಮಂಡೇಪಂಡ ಮನೋಜ್, ಅವರೇಮಾಡಂಡ ಚಂಗಪ್ಪ, ನಂದೇಟಿರ ರವಿ, ಚೋಳಪಂಡ ನಾಣಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಪುಲ್ಲೇರ ಕಾಳಪ್ಪ, ಕಿರಿಯಮಾಡ ಶೆರೀನ್, ಪುಟ್ಟಿಚಂಡ ಡಾನ್ ದೇವಯ್ಯ, ಕಲಿಯಂಡ ಪ್ರಕಾಶ್, ನಂದಿನೆರವಂಡ ಸುಮಿತ್ರಾ, ನಂದಿನೆರವಂಡ ದಿನೇಶ್, ಬಡುವಂಡ ವಿಜಯ, ಮನೆಯಪಂಡ ಕಾಂತಿ ಸತೀಶ್, ಚೊಕ್ಕಂಡ ರೇಖಾ, ಕುಪ್ಪಾಡಿರ ಸಾಬು, ಅಜ್ಜಿಕುಟ್ಟೀರ ಲೋಕೇಶ್ ಭಾಗವಹಿಸಿದ್ದರು.