ಮಡಿಕೇರಿ ಫೆ. ೨೧: ಮದೆ ಗ್ರಾ.ಪಂ ವ್ಯಾಪ್ತಿಯ ದೇವರ ಕೊಲ್ಲಿಯ ಶಾಲೆ ಹಿಂಭಾಗದ ಸಂಪರ್ಕ ರಸ್ತೆಯನ್ನು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಿದರು.

ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆಯ ಡಾಂಬರೀಕರಣಕ್ಕೆ ವೀಣಾ ಅಚ್ಚಯ್ಯ ಅವರು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ತಮ್ಮ ಅನುದಾನದಲ್ಲಿ ರೂ. ಲಕ್ಷ ನೀಡಿ ಭಾಗದ ಜನರ ಬೇಡಿಕೆಗೆ ಸಂದ್ಪಿಸಿದರು.

ಸಂದರ್ಭ ವೀಣಾ ಅಚ್ಚಯ್ಯ ಅವರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗ್ರಾ.ಪಂ. ಅಧ್ಯಕ್ಷರಿಗೂ ಹಾಗೂ ಸದಸ್ಯರುಗಳಿಗೆ ಆಡಳಿತದ ಬಗ್ಗೆ ಕಿವಿಮಾತು ಹೇಳಿದರಲ್ಲದೆ ಜನಸಾಮಾನ್ಯರ ಒಳಿತಿಗಾಗಿ ಶ್ರಮಿಸುವಂತೆ ಕರೆ ನೀಡಿದರು.

ಮದೆ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ಚೆಂಬು ಗ್ರಾ.ಪಂ. ಅಧ್ಯಕ್ಷೆ ಕುಸುಮ ಯೋಗೀಶ್ವರ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮದೆ ಗ್ರಾ.ಪಂ. ಸದಸ್ಯರಾದ ಅಗಸ್ಟೀನ್ ಜಯರಾಜ್, ಸೈಯದ್ ಅಲ್ವಿ, ವಿಮಲಾಕ್ಷಿ, ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಕಾಂಗ್ರೆಸ್ ಮುಖಂಡರುಗಳಾದ ಎನ್.ಜಿ ಉಮೇಶ್ ಕೊಯಿನಾಡು, ರಮೇಶ್, ಕೆ.ಆರ್. ರಾಜೇಶ್, ಚಂಬು ವಲಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಭಾರತಿ ಕುಶಲ ಅಡ್ಚಿಲ್ಕಜೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.