ನಾಪೆÇೀಕ್ಲು, ಫೆ. 21: ನಾಪೆÇೀಕ್ಲು ಪಟ್ಟಣ ಸೇರಿದಂತೆ ಹಳೇತಾಲೂಕು, ಬೇತು, ಕೊಳಕೇರಿ, ಕುಂಜಿಲ, ಕಕ್ಕಬ್ಬೆ, ವಯಕೋಲ್, ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಪುಲಿಕೋಟು ಗ್ರಾಮಗಳಿಗೆ ತಾ. 21 ಸಂಜೆ 5 ಗಂಟೆ ತನಕ ಅಂದಾಜು ಅರ್ಧ ಇಂಚಿನಿಂದ ಒಂದು ಇಂಚಿನವರೆಗೆ ಮಳೆ ಸುರಿಯಿತು.

ಹವಾಮಾನ ವರದಿಯಲ್ಲಿ ಮಳೆ ಸುರಿಯುವದಾಗಿ ತಿಳಿದು ಬಂದಿದ್ದರಿಂದ ಬೆಳೆಗಾರರು ಕಾಫಿ ಬಗ್ಗೆ ಜಾಗೃತರಾಗಿದ್ದರು. ಆದರೂ, ಮಳೆಯ ರಭಸದಿಂದ ಅಲ್ಲಲ್ಲಿ ಕಾಫಿ ರಾಶಿಗೆ ನೀರು ನುಗ್ಗಿರುವದು ಕಂಡು ಬಂತು. ಕಾಫಿ ಕುಯ್ಲು ಮುಗಿದಿರುವ ಬೆಳೆಗಾರರು ಮಳೆಯಿಂದ ಸಂತಸಗೊಂಡರೆ, ಇನ್ನೂ ಕುಯ್ಲು ಮುಗಿಯದ ಬೆಳೆಗಾರರು ಕಂಗಾಲಾದರು.