ಮಡಿಕೇರಿ, ಫೆ. ೨೧: ರಾಷ್ಟಿçÃಯ ಜಾದೂಗಾರರ ದಿನಾಚರಣೆಯ ಪ್ರಯುಕ್ತ ತಾ. ೨೩ ರಂದು ನಗರದ ಟೌನ್‌ಹಾಲ್‌ನಲ್ಲಿ ಜಾದೂ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಕ್ರಮ್ ಜಾದೂಗಾರ್ ತಿಳಿಸಿದರು. ಪದ್ಮಶ್ರೀ ಪಿ.ಸಿ. ಸೊರ್ಕಾರ್ ಅವರ ಜನ್ಮ ದಿನವನ್ನು ರಾಷ್ಟಿçÃಯ ಜಾದೂಗಾರರ ದಿನಾಚರಣೆಯನ್ನಾಗಿ ಭಾರತಾದ್ಯಂತ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾದೂಗಾರರ ದಿನಾಚರಣೆ ಆಚರಿಸುತ್ತಿದ್ದೇವೆ. ‘ವಿಕ್ರಮ್ ಇನ್ಸಿಟ್ಯೂಟ್ ಆಫ್ ಮ್ಯಾಜಿಕ್ ಆಂಡ್ ಅಲೈಡ್ ಆರ್ಟ್ಸ್ ಸಂಸ್ಥೆಯ ಅಡಿಯಲ್ಲಿ’ ಪಿ.ಸಿ. ಸೊರ್ಕಾರ್ ಸಂಸ್ಕರಣೆ ಹಾಗೂ ಜಾದೂ ಪ್ರದರ್ಶನ’ ಉಚಿತ ಕಾರ್ಯಕ್ರಮ ಸಂಜೆ ೬.೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಜಾದೂ ಮೂಲಕ ಉದ್ಘಾಟಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಬೆಂಗಳೂರಿನ ಜಾದೂಗಾರ ಪ್ರೊ. ಚಂದ್ರಶೇಖರ್ ಹಾಗೂ ಕಾಮಿಡಿ ಜಾದೂಗಾರನಾಗಿ ಪ್ರಖ್ಯಾತಿ ಹೊಂದಿರುವ ಜಾದೂಗಾರ ರಾವ್ ಬದ್ರಿನಾಥ್ ಕಾರ್ಯಕ್ರಮ ನೀಡಲಿದ್ದಾರೆ.