ಪೊನ್ನಂಪೇಟೆ, ಫೆ. ೨೦: ನಬಾರ್ಡ್ ಹಾಗೂ ಮೈಸೂರಿನ ಓಡಿಪಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜೀವನಾಧಾರಿತ ಕೌಶಲ್ಯ ತರಬೇತಿ ಶಿಬಿರವನ್ನು ಪೊನ್ನಂಪೇಟೆಯ ಸಂತ ಅಂಥೋಣಿ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಶಿಬಿರದ ಉದ್ಘಾಟನೆಯನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತ ನೆರವೇರಿಸಿದರು.

ಎರಡು ತಿಂಗಳು ನಡೆಯಲಿರುವ ತರಬೇತಿಯಲ್ಲಿ ಎಂಬ್ರಾಯಿಡರಿ, ಜರಿ ಹಾಗೂ ಆಭರಣ ತಯಾರಿಕೆಯ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡಲಾಗುವುದು.

ಈ ಸಂದರ್ಭ ಓಡಿಪಿ ಸಂಸ್ಥೆಯ ಸಂಯೋಜಕರಾದ ಜಾನ್ ರಾಡ್ರಿಗಸ್, ಗ್ರಾ.ಪಂ. ಸದಸ್ಯ ಅನಿಷ್, ಓಡಿಪಿ ಜಿಲ್ಲಾವಲಯ ಸಂಯೋಜಕಿ ಜಾಯ್ ಮೆನೇಜಸ್, ಮೈಸೂರು ಮಹಿಳೋದಯ ಮಹಾ ಒಕ್ಕೂಟದ ಉಪಾಧ್ಯಕ್ಷೆ ಗೀತಾ, ಓಡಿಪಿ ಸಂಸ್ಥೆಯ ಅಕ್ಷಯ್, ರೀಟಾ ಜೋಸೆಫ್, ಹೊಲಿಗೆ ಶಿಕ್ಷಕಿ ಯಶೋಧ, ಶ್ರೀ ಕಾವೇರಿ ಕೇಂದ್ರ ಸಮಿತಿ ಅಧ್ಯಕ್ಷೆ ಧರಣಿ ಹಾಗೂ ತರಬೇತಿ ಪಡೆಯಲಿರುವ ೩೦ ಮಹಿಳೆಯರು ಹಾಜರಿದ್ದರು.