ಸುಂಟಿಕೊಪ್ಪ, ಫೆ. ೨೧: ನಾಕೂರು-ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ೨೧ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟ ಹಾಗೂ ಡ್ಯಾನ್ಸ್ ಮೇಳ ಕಾರ್ಯಕ್ರಮವನ್ನು ತಾ. ೨೮ ರಂದು ಆಯೋಜಿಸಲಾಗಿದೆ. ಕಾನ್‌ಬೈಲ್ ಸರಕಾರಿ ಮಾದರಿ ಪ್ರಾಥಮಿಕ ಮೈದಾನದಲ್ಲಿ ತಾ. ೨೮ ರಂದು ಪುರುಷರಿಗೆ ಮುಕ್ತ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿದ್ದು ಪ್ರಥಮ ಸ್ಥಾನ ಪಡೆದ ತಂಡಕ್ಕೆ ಟೋಫಿ ಹಾಗೂ ನಗದು ರೂ. ೧೦,೫೦೦, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ರೂ. ೭,೫೦೦, ತೃತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ರೂ. ೫,೫೦೦ ನಗದು ನೀಡಲಾಗುವುದು. ರಸ್ತೆ ಓಟ, ಮಹಿಳೆಯರಿಗೆ ಪಾಸಿಂಗ್‌ದ ಬಾಲ್ ಮತ್ತು ಬಾಂಬಿAಗ್‌ದ ಸಿಟಿ ಇತರ ಕ್ರೀಡೆಗಳೊಂದಿಗೆ ಹಗ್ಗ-ಜಗ್ಗಾಟ ಸ್ಥಳೀಯ ಮಹಿಳೆಯರಿಗೆ ಮತ್ತು ಪುರುಷರಿಗೆ, ೫ ವರ್ಷದ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ, ಗೋಣಿಚೀಲ ಜಿಗಿತ ಇನ್ನಿತರ ಗ್ರಾಮೀಣ ಕ್ರೀಡಾಕೂಟ ಹಾಗೂ ಸಂಜೆ ೬ ಗಂಟೆಯಿAದ ಡ್ಯಾನ್ಸ್ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ೧೦ ಗಂಟೆಯೊಳಗೆ ಕ್ರೀಡಾ ತಂಡಗಳು ಆಗಮಿಸತಕ್ಕದ್ದು ನಂತರ ಆಗಮಿಸುವ ತಂಡಗಳನ್ನು ಪರಿಗಣಿಸಲಾಗುವುದಿಲ್ಲ. ಕ್ರೀಡಾಕೂಟ ಹಾಗೂ ಡ್ಯಾನ್ಸ್ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ತಂಡಗಳು ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ ಕುಂಞಕೃಷ್ಣ ೯೪೮೧೧೧೪೬೧೭, ಕಾರ್ಯದರ್ಶಿ ವಿನೋದ್ ೮೪೮೦೦೫೨೧೭೧, ಇವರುಗಳನ್ನು ಸಂಪರ್ಕಿಸಬಹುದಾಗಿದೆ.