ಸೋಮವಾರಪೇಟೆ,ಫೆ.೨೧: ಸೋಮವಾರಪೇಟೆ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳ ಸಭೆ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿಗೆ ಕೊಡಗು ಜಿಲ್ಲೆಯಿಂದ ಆಯ್ಕೆಯಾದ ವಿಜಯಲಕ್ಷಿö್ಮÃ ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸುಬ್ರಮಣಿ ವಹಿಸಿದ್ದರು. ಮಂಡಲ ಬಿಜೆಪಿ ಅಧ್ಯಕ್ಷ ಮನು ಕುಮಾರ್ ರೈ, ಮಹಿಳಾ ಮೋರ್ಚಾ ಉಪಾಧ್ಯಕ್ಷರುಗಳಾದ ಭಾನುಮತಿ ಆದರ್ಶ, ವಿದ್ಯಾ ಶುಭಕರ್, ಜ್ಯೋತಿ ಮಿಥುನ್, ಸವಿತಾ ಮೂಡಲಗಿರಿ, ಪ್ರಧಾನ ಕಾರ್ಯದರ್ಶಿಗಳಾದ ತಂಗಮ್ಮ, ವೇದಾವತಿ ಮೋಹನ್, ಕಾರ್ಯದರ್ಶಿಗಳಾದ ಪವಿತ್ರ ಶೇಷಾದ್ರಿ, ಲೀಲಾವತಿ, ಅರುಣಕುಮಾರಿ, ಖಜಾಂಜಿ ದ್ರಾಕ್ಷಾಯಿಣಿ ಶಿವಾನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು