ಶನಿವಾರಸಂತೆ, ಫೆ. ೨೧: ಸಮೀಪದ ಬ್ಯಾಡಗೊಟ್ಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಸದಸ್ಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಲಾಯಿತು. ಸಂಪನ್ಮೂಲ ವ್ಯಕ್ತಿ ಎಸ್.ಎಂ. ಸುರೇಶ್ ತರಬೇತಿಯ ನೇತೃತ್ವ ವಹಿಸಿದ್ದು, ಶಿಕ್ಷಕಿಯರಾದ ತೇಜಾವತಿ ಹಾಗೂ ರಿಜ್ವಾನಾ ಬಾನು ತರಬೇತಿ ಕುರಿತು ಮಾಹಿತಿ ನೀಡಿದರು. ಎಸ್ಡಿಎಂಸಿ ಅಧ್ಯಕ್ಷೆ ರಾಣಿ ಪವಿತ್ರಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಫೀಕ್, ಸದಸ್ಯರಾದ ಇಸಾಕ್, ತೀರ್ಥಾ, ಮಿಶ್ರಿಯಾ, ನಸೀಮಾ, ಆಸ್ಮಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಭಾಗ್ಯ ಪ್ರಾಸ್ತಾವಿಕ ನುಡಿಯಾಡಿದರು.