ವೀರಾಜಪೇಟೆ, ಫೆ. ೨೧: ರೂ. ೫ ಲಕ್ಷ ವೆಚ್ಚದಲ್ಲಿ ದುರಸ್ತಿ ಹಾಗೂ ಅಭಿವೃದ್ಧಿಗೊಳಿಸಿರುವ ಕದನೂರು ಗ್ರಾಮದ ಭಗವತಿ ದೇವಸ್ಥಾನದಿಂದ ಅಮ್ಮಣಿಚಂಡ ಕುಟುಂಬದ ಐನ್‌ಮನೆಗೆ ಹೋಗುವ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕೋವಿಡ್-೧೯ನ ಪರಿಸ್ಥಿತಿಯಿಂದ ಗ್ರಾಮಾಂತರ ಪ್ರದೇಶದ ರಸ್ತೆ ಅಭಿವೃದ್ಧಿ ವಿಳಂಬವಾಗಿದ್ದು, ಇದೀಗ ಆದ್ಯತೆಯ ಮೇರೆ ರಸ್ತೆ ಅಭಿವೃದ್ಧಿಗಾಗಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮಸ್ಥರು ರಸ್ತೆ ಕಾವiಗಾರಿ ಸಂದರ್ಭದಲ್ಲಿ ಎಲ್ಲಾ ರೀತಿಯಿಂದಲೂ ಸಹಕರಿಸಬೇಕು.

ಗ್ರಾಮದ ಆಯ್ದ ಸ್ಥಳಗಳಲ್ಲಿ ರಸ್ತೆ ದುರಸ್ತಿ, ಹೊಸ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸ ಲಾಗಿದ್ದು, ಮುಂಗಾರು ಮಳೆಯ ಮುನ್ನ ಅಗತ್ಯ ಸ್ಥಳಗಳಲ್ಲಿ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ರಘು ನಾಣಯ್ಯ, ಮಲ್ಲಂಡ ಮಧುದೇವಯ್ಯ, ಹಿರಿಯರಾದ ರಾಜಾನಂಜಪ್ಪ, ಕಟ್ಟಿ ಬೆಳ್ಳಿಯಪ್ಪ, ವಿಜು ಕುಶಾಲಪ್ಪ, ನವೀನ್ ಅಯ್ಯಪ್ಪ, ಕದನೂರು ಗ್ರಾ.ಪಂ. ಉಪಾಧ್ಯಕ್ಷೆ ಮಮತ, ಸದಸ್ಯೆ ಕಮಲಾಕ್ಷಿ ಇನ್ನಿತರರು ಹಾಜರಿದ್ದರು.

ಕದನೂರು ಗ್ರಾಮದ ಭಗವತಿ ದೇವಸ್ಥಾನದ ಬಳಿಯ ಮುಖ್ಯ ರಸ್ತೆಯಿಂದ ಕಾಣತಂಡ ಕುಟುಂಬದ ಐನ್‌ಮನೆಗೆ ಹೋಗುವ ರೂ. ೫ ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ಇದೇ ಸಂದರ್ಭ ಉದ್ಘಾಟಿಸಿದರು. ಕಾಣತಂಡ ಕುಟುಂಬದ ಮೊಣ್ಣಪ್ಪ, ಧನುಬೋಪಣ್ಣ, ಪೊನ್ನಪ್ಪ, ಅಶೋಕ್, ವಿವೇಕ್ ಹಾಗೂ ಪೂವಯ್ಯ ಇತರರು ಹಾಜರಿದ್ದರು.