ಕುಶಾಲನಗರ, ಫೆ. ೨೦: ಕುಶಾಲನಗರ ಮಡಿಕೇರಿ ರಸ್ತೆಯ ರಾಷ್ಟಿçÃಯ ಹೆದ್ದಾರಿ ೨೭೫ ರ ತಾವರೆಕೆರೆ ಮತ್ತು ಗಂಧದಕೋಟಿ ಬಳಿ ರಸ್ತೆಯನ್ನು ಎತ್ತರಿಸುವ ಯೋಜನೆ ಸದ್ಯದಲ್ಲಿಯೇ ಚಾಲನೆಗೊಳ್ಳಲಿದೆ. ಮಳೆಗಾಲ ಸಂದರ್ಭ ಈ ವ್ಯಾಪ್ತಿಯಲ್ಲಿ ಕಾವೇರಿ ಉಕ್ಕಿ ಹರಿದು ಪ್ರವಾಹ ಉಂಟಾಗಿ ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಕಾರಣ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ರಾಷ್ಟಿçÃಯ ಹೆದ್ದಾರಿ ಅಭಿವೃದ್ಧಿ ಅಧಿಕಾರಿ ಚಂದ್ರಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.
ಮೈಸೂರು-ಬಂಟ್ವಾಳ ರಸ್ತೆಯ ಕುಶಾಲನಗರದ ತಾವರೆಕೆರೆ ಬಳಿಯಿಂದ ಸರಕಾರಿ ಪಾಲಿಟೆಕ್ನಿಕ್ ತನಕ ಸುಮಾರು ೧.೫ ಕಿ.ಮೀ. ವ್ಯಾಪ್ತಿಯ ರಸ್ತೆ ಅಭಿವೃದ್ಧಿ ನಡೆಯಲಿದೆ. ಸುಮಾರು ೨ ಮೀಟರ್‌ಗಳಷ್ಟು ರಸ್ತೆಯನ್ನು ಎತ್ತರ ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದ್ದು ತಾವರೆಕೆರೆ ಮತ್ತು ಗಂಧದಕೋಟಿ ಬಳಿ ಎರಡು ಕಿರು ಸೇತುವೆಗಳನ್ನು ನಿರ್ಮಿಸಲಾಗುವುದು. ಈ ಮೂಲಕ ಮೇಲ್ಭಾಗದಿಂದ ಹರಿದು ಬರುವ ನೀರು ನದಿಗೆ ಹರಿಯಲು ಯಾವುದೇ ತೊಡಕುಂಟಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಮಡಿಕೇರಿ-ಕುಶಾಲನಗರ ರಸ್ತೆ ಡಾಂಬರೀಕರಣ ಕಾಮಗಾರಿ ಈಗಾಗಲೆ ನಡೆಯುತ್ತಿದ್ದು ಈ ವ್ಯಾಪ್ತಿಯಲ್ಲಿ ರಸ್ತೆ ಎತ್ತರಗೊಳಿಸಿದ ತಕ್ಷಣ ಡಾಂಬರೀಕರಣ ನಡೆಯಲಿದೆ. ಮುಂದಿನ ವಾರದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಚಂದ್ರಪ್ಪ ಮಾಹಿತಿ ನೀಡಿದ್ದಾರೆ.
ತಾವರೆಕೆರೆಯ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಉಂಟಾಗದAತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.