ಶ್ರೀಮಂಗಲ, ಫೆ. ೨೦: ಇಷ್ಟು ದಿನ ಜಾನುವಾರುಗಳ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಳ್ಳುತ್ತಿದ್ದ ಹುಲಿರಾಯ, ಇದೀಗ ಬಾಲಕನ ಪ್ರಾಣ ತೆಗೆದಿದೆ. ಕುಮುಟೂರು ಗ್ರಾಮದ ಕೋಟ್ರಂಗಡ ಬಿದ್ದಪ್ಪ ಅವರ ಲೈನ್ ಮನೆಯಲ್ಲಿರುವ ಪಣಿಯರವರ ಬಸವ ಅವರ ಮಗ ಅಯ್ಯಪ್ಪ (೧೬) ಹುಲಿ ದಾಳಿಗೆ ಬಲಿಯಾದ ಬಾಲಕ. ಇಂದು ಸಂಜೆ ಕೋಟ್ರಂಗಡ ಅಶ್ವತ್ ಅವರ ತೋಟದಲ್ಲಿ ಸೌದೆ ಮಾಡುತ್ತಿದ್ದ ಸಂದರ್ಭ ಹುಲಿ ಅಯ್ಯಪ್ಪನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಏಕಾಏಕಿ ದಾಳಿ ಮಾಡಿದ ವ್ಯಾಘ್ರ, ಬಾಲಕನ ತಲೆಯ ಹಿಂಭಾಗಕ್ಕೆ ಹೊಡೆದು ಕುತ್ತಿಗೆಯಿಂದ ರಕ್ತವನ್ನು ಹೀರಿದೆ. ಈ ಸಂದÀರ್ಭ ಬಾಲಕನ ತಂದೆ ಬಸವ ಜೋರಾಗಿ ಕೂಗಿದ್ದು ಇದನ್ನು ಕೇಳಿಸಿಕೊಂಡ ಹತ್ತಿರದ ತೋಟದ ಮಾಲೀಕ ಕೋಟ್ರಂಗಡ ವಿನಯ್ ಕೂಗುತ್ತಾ ಸ್ಥಳಕ್ಕೆ ಧಾವಿಸಿ ಬಂದದನ್ನು ಗಮನಿಸಿದ ಹುಲಿ ಬಾಲಕನ ದೇಹವನ್ನು ತಿನ್ನದೆ ಬಿಟ್ಟು ಓಡಿದೆ. ಶ್ರೀಮಂಗಲ ಜೂನಿಯರ್ ಕಾಲೇಜಿನಲ್ಲಿ ೮ನೇ ತರಗತಿಗೆ ಪ್ರವೇಶ ಪಡೆದಿರುವ ಅಯ್ಯಪ್ಪ ಪೋಷಕರಿಗೆ ಏಕೈಕ ಪುತ್ರನಾಗಿದ್ದು ಪೋಷಕರ ಗೋಳಾಟ ಮುಗಿಲು ಮುಟ್ಟಿದೆ. ಮುಂಜಾನೆ ಮತ್ರಂಡ ರಘು ಪೆಮ್ಮಯ್ಯರವರ ಹಸು ಮೇಲೆ ದಾಳಿ ಮಾಡಿದ ಸ್ಥಳದಿಂದ ಕೇವಲ ಅಂದಾಜು ನೂರು ಮೀಟರ್ ದೂರದಲ್ಲಿ ಮತ್ತೆ ಈ ದಾಳಿ ನಡೆದಿದ್ದು ಹುಲಿ ಸುತ್ತಮುತ್ತ ಸಂಚರಿಸುತ್ತಿರುವ ಗುಮಾನಿ ಇದೆ. ಇದರಿಂದ ಜನರು ಭಯಬೀತರಾಗಿದ್ದಾರೆ.ಆಕ್ರೋಶ: ಕಳೆದ ಒಂದೆರಡು ತಿಂಗಳಿAದ ಹಲವು ಜಾನುವಾರು ಗಳನ್ನು ಕೊಂದಿರುವ ಹುಲಿ ಇಂದು ಮನುಷ್ಯನನ್ನೇ ಕೊಂದು ಹಾಕಿದ್ದು ಇದೀಗ ಈ ನರಭಕ್ಷಕ ಹುಲಿಯ ಬಗ್ಗೆ ಈ ಭಾಗದ ಜನರು ಆತಂಕಕ್ಕಿಡಾಗಿದ್ದು ಅರಣ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳ ಮೇಲೆ ಜನ ಆಕ್ರೋಶÀಗೊಂಡಿದ್ದಾರೆ.

ಸ್ಥಳಕ್ಕೆ ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ, ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷ ಅಜ್ಜಮಾಡ ಜಯ, ಸದಸ್ಯ ಮಾದೀರ ಸುಧಿ ಪೊನ್ನಪ್ಪ, ಶ್ರೀಮಂಗಲ ನಾಗರಿಕ ಹೋರಾಟ

(ಮೊದಲ ಪುಟದಿಂದ) ಸಮಿತಿಯ ಅಧ್ಯಕ್ಷ ಮಚ್ಚಮಾಡ ಕಾರ್ಯಪ್ಪ, ಮುಖಂಡರಾದ ಕೋಟ್ರಂಗಡ ತಿಮ್ಮಯ್ಯ, ಕೊಡಗು ವನ್ಯ ಜೀವಿ ಸಂಘದ ಉಪಾಧ್ಯಕ್ಷ ಕುಂಞAಗಡ ಬೋಸ್ ಮಾದಪ್ಪ,ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಕೊಡಗು ಬೆಳೆಗಾರ ಒಕ್ಕೂಟದ ಜಂಟಿ ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ ಮತ್ತಿತರರು ಹಾಜರಿದ್ದು, ಸ್ಥಳದಲ್ಲಿರುವ ನೂರಾರು ಗ್ರಾಮಸ್ಥರು ಶಾಸಕರಾಧಿಯಾಗಿ ಎಲ್ಲಾ ಜನಪ್ರತಿನಿಧಿಗಳು ಹಾಗೂ ಹಿರಿಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮಕೈಗೊಳ್ಳುವುದರೊಂದಿಗೆ ಪರಿಹಾರ ನೀಡಿ ನರ ಭಕ್ಷಕ ಹುಲಿಯನ್ನು ಕೊಲ್ಲಲು ಅನುಮತಿ ನೀಡುವವರೆಗೆ ಮೃತದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.