ನಾಪೋಕ್ಲು, ಫೆ. ೨೦: ಪೊಲೀಸ್ ಇಲಾಖಾ ವತಿಯಿಂದ ನಾಪೋಕ್ಲು ಪಟ್ಟಣದಲ್ಲಿ ೩೨ನೇ ರಾಷ್ಟಿçÃಯ ರಸ್ತೆ ಸುರಕ್ಷಾ ಮಾಸಿಕ ಜಾಥಾ ನಡೆಯಿತು.

ಅದಕ್ಕೂ ಮುನ್ನ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಆರ್. ಕಿರಣ್, ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ತಿಳಿದುಕೊಳ್ಳುವದು ಮುಖ್ಯ. ಯಾರೇ ಅಪರಾಧ ಮಾಡಿದರೂ ಅದು ಅಪರಾಧವೇ. ಅದಕ್ಕೆ ಕಾನೂನಿನಡಿಯಲ್ಲಿ ಶಿಕ್ಷೆಯಿದೆ. ಸ್ವಸ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಪಾತ್ರ ಮುಖ್ಯ. ಎಲ್ಲರೂ ಕಾನೂನನ್ನು ಚಾಚುತಪ್ಪದೇ ಪಾಲಿಸಿದರೆ, ಅಪರಾಧಗಳನ್ನು ಬಹಳಷ್ಟು ಕಡಿಮೆ ಮಾಡಲು ಸಾಧ್ಯ ಎಂದರು.

ಈ ಸಂದರ್ಭ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲೆ ಪಿ.ಕೆ. ನಳಿನಿ, ಶಿಕ್ಷಕ ಶಿವಕುಮಾರ್, ಎಎಸ್‌ಐ ಗೋಪಾಲಕೃಷ್ಣ, ಸಿಬ್ಬಂದಿಗಳಾದ ಗಣೇಶ್, ಹರ್ಷವರ್ಧನ್, ಮಹದೇವನಾಯಕ್ ಮತ್ತಿತರರು ಇದ್ದರು.