ವೀರಾಜಪೇಟೆ, ಫೆ. ೨೦: ವೀರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬಾಲಕರಿಗೆ ಫುಟ್ಬಾಲ್ ಹಾಗೂ ಬಾಲಕಿಯರಿಗೆ ಥ್ರೋ ಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.
ಕಾಲೇಜಿನ ಅಂತಿಮ ಬಿ.ಬಿ.ಎ. ವಿದ್ಯಾರ್ಥಿಗಳು ಕ್ರೀಡಾಕೂಟವನ್ನು ಆಯೋಜಿಸಿದ್ದರು. ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್ ಪಂದ್ಯಾವಳಿಗೆ ಚಾಲನೆ ನೀಡಿದರು.
ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಮದಲೈ ಮುತ್ತು ವಿಜೇತರಿಗೆ ಟ್ರೋಫಿಯನ್ನು ವಿತರಿಸಿದರು. ಫುಟ್ಬಾಲ್ ಪಂದ್ಯಾಟದಲ್ಲಿ ಅತಿಥೇಯ ಅಂತಿಮ ಬಿ.ಬಿ.ಎ. ವಿದ್ಯಾರ್ಥಿಗಳು ವಿನ್ನರ್ ಟ್ರೋಫಿಯನ್ನು ಹಾಗೂ ದ್ವಿತೀಯ ಬಿ.ಬಿ.ಎ. ವಿದ್ಯಾರ್ಥಿಗಳು ರನ್ನರ್ ಟ್ರೋಫಿಯನ್ನು ಪಡೆದುಕೊಂಡರು. ವೈಯಕ್ತಿಕ ವಿಭಾಗದಲ್ಲಿ ಉತ್ತಮ ಗೋಲ್ ಕೀಪರ್ ಟ್ರೋಫಿಯನ್ನು ಹಂಸೀರ್, ಉತ್ತಮ ತಂಡ ರಕ್ಷಣೆ ಟ್ರೋಫಿಯನ್ನು ಪ್ರಜ್ವಲ್, ಉತ್ತಮ ಸ್ಕೋರ್ ಟ್ರೋಫಿಯನ್ನು ಕೌಶಿಕ್ ಹಾಗೂ ಉತ್ತಮ ಆಟಗಾರ ಟ್ರೋಫಿಯನ್ನು ದ್ವಿತೀಯ ಬಿ.ಬಿ.ಎ.ಯ ಮೊಹಮ್ಮದ್ ಸಾಯೀದ್, ಮ್ಯಾನ್ ಆಫ್ ದ ಸೀರೀಸ್ ಟ್ರೋಫಿಯನ್ನು ಟ್ರೋಫಿಯನ್ನು ದ್ವಿತೀಯ ಬಿ.ಬಿ.ಎ.ಯ ಮೊಹಮ್ಮದ್ ಸಾಯೀದ್, ಮ್ಯಾನ್ ಆಫ್ ದ ಸೀರೀಸ್ ಟ್ರೋಫಿಯನ್ನು ಬಿ.ಕಾಂ. ಎ ತಂಡವು ವಿನ್ನರ್ಸ್ ಪ್ರಶಸ್ತಿಯನ್ನು ಪಡೆದರೆ, ಅಂತಿಮ ಬಿ.ಸಿ.ಎ ತಂಡದವರು ರನ್ನರ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.