ಗೋಣಿಕೊಪ್ಪ ವರದಿ, ಫೆ. ೨೦: ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಸಂಘದ ವತಿಯಿಂದ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪೊನ್ನಂಪೇಟೆ ಪ್ರೀಮಿಯರ್ ಕ್ರಿಕೆಟ್ ಲೀಗ್‌ನ ಶನಿವಾರದ ಪಂದ್ಯಗಳಲ್ಲಿ ೯ ತಂಡಗಳು ಗೆಲುವು ಪಡೆದುಕೊಂಡಿದ್ದು, ತಾ. ೨೧ ರಂದು (ಇಂದು) ಮಧ್ಯಾಹ್ನ ೩ ಗಂಟೆಗೆ ಫೈನಲ್ ಹಣಾಹಣಿ ನಡೆಯಲಿದೆ. ಲೀಗ್ ಹಂತದ ಪಂದ್ಯಗಳಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಲು ತಂಡಗಳು ಹೋರಾಟ ನಡೆಸಿದವು. ನಾಕ್‌ಔಟ್ ಪಂದ್ಯ ಭಾನುವಾರ ನಡೆಯಲಿವೆ.

ಫಲಿತಾಂಶ: ಅವೆಂಜರ್ಸ್ ತಂಡವು ವೈಸಿಪಿ ವಿರುದ್ಧ ೫ ವಿಕೆಟ್ ಗೆಲುವು ದಾಖಲಿಸಿತು. ಸೈಕ್ಲೋನ್ ಕ್ರಿಕೆಟರ್ಸ್ ತಂಡವು ಡೈಮಂಡ್ ಸ್ಟಾರ್ಸ್ ವಿರುದ್ಧ ೫ ವಿಕೆಟ್‌ಗಳ ಜಯ ಸಾಧನೆ ಮಾಡಿತು. ಬ್ಲಾö್ಯಕ್ ಕೋಬ್ರಾಸ್ ತಂಡವು ಆಲ್ ಸ್ಟಾರ್ಸ್ ತಂಡವನ್ನು ೧೦ ವಿಕೆಟ್‌ಗಳಿಂದ ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ಎ.ಜೆ. ಬಾಯ್ಸ್ ತಂಡಕ್ಕೆ ಬೋಜಿ ಕ್ರಿಕೆಟರ್ಸ್ ವಿರುದ್ದ ೭ ರನ್‌ಗಳ ಗೆಲುವು ದೊರೆಯಿತು. ಅವೆಂಜರ್ಸ್ ತಂಡವು ಸೂಪರ್ ಕಿಂಗ್ಸ್ ತಂಡದ ವಿರುದ್ಧ ೨೫ ರನ್‌ಗಳ ಗೆಲುವು ಪಡೆಯಿತು. ಸೈಕ್ಲೋನ್ ಕ್ರಿಕೆಟರ್ಸ್ ತಂಡವು ಆರ್ ಕೆ ಬುಲ್ಡರ್ಸ್ ವಿರುದ್ಧ ೫ ರನ್‌ಗಳ ಜಯ ಸಾಧನೆ ಮಾಡಿತು. ಆಲ್‌ಸ್ಟಾರ್ಸ್ ತಂಡವು ವೈಸಿಪಿ ತಂಡವನ್ನು ೫ ರನ್‌ಗಳಿಂದ ಸೋಲಿಸಿತು. ಬೋಜಿ ಕ್ರಿಕೆಟರ್ಸ್ಗೆ ಡೈಮಂಡ್ ಸ್ಟಾರ್ಸ್ ವಿರುದ್ಧ ೨ ರನ್‌ಗಳ ರೋಚಕ ಗೆಲುವು ದೊರೆಯಿತು. ಬ್ಲಾö್ಯಕ್ ಕೋಬ್ರಾಸ್ ತಂಡವು ಅವೆಂಜರ್ಸ್ ವಿರುದ್ಧ ೨ ರನ್‌ಗಳ ಗೆಲುವು ಪಡೆಯಿತು.