ಕಣಿವೆ, ಫೆ. ೨೦: ನಿರಾಶ್ರಿತ ಟಿಬೇಟನ್ನರು ವಾಸವಿರುವ ಬೈಲಕೊಪ್ಪದ ವಿವಿಧೆಡೆಗಳಲ್ಲಿರುವ ಹೊಟೇಲ್‌ಗಳ ಮೇಲೆ ಶನಿವಾರ ಮೈಸೂರು ಜಿಲ್ಲಾ ಕಂದಾಯ ಅಧಿಕಾರಿಗಳ ತಂಡ ದಾಳಿ ನಡೆಸಿತು.

‘ಶಕ್ತಿ’ ಪತ್ರಿಕೆಯಲ್ಲಿ ಪ್ರಕಟವಾದ ‘ಟಿಬೇಟನ್ನರ ಕ್ಯಾಂಪ್‌ಗಳಲ್ಲಿ ಜಾರಿಯಾಗದ ಗೋಹತ್ಯೆ ನಿಷೇಧ ಕಾನೂನು ‘ಹೊಟೇಲ್‌ಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಗೋಮಾಂಸ... ಎಂಬ ವರದಿಗೆ ಎಚ್ಚೆತ್ತ ಮೈಸೂರು ಜಿಲ್ಲೆಯ ಹುಣಸೂರು ಉಪವಿಭಾಗಾಧಿಕಾರಿ ವಿ. ವೀಣಾ ಅವರ ನಿರ್ದೇಶನದ ಮೇರೆಗೆ ಪಿರಿಯಾಪಟ್ಟಣ ತಹಶೀಲ್ದಾರ್ ಶ್ವೇತಾ ಅವರ ಮಾರ್ಗದರ್ಶನದಲ್ಲಿ ಹಾರನಹಳ್ಳಿ ಹೋಬಳಿ ಕಂದಾಯ ಅಧಿಕಾರಿ ಪ್ರದೀಪ್ ನೇತೃತ್ವದ ತಂಡ ಬೈಲಕೊಪ್ಪದ ಟಿಬೇಟನ್ನರ ಕಾಲನಿಗಳಲ್ಲಿ ವಿವಿಧೆಡೆ ಇರುವ ಮಾಂಸಾಹಾರಿ ಹೊಟೇಲ್‌ಗಳಿಗೆ ದಾಳಿಯಿಟ್ಟ ಸಂದರ್ಭ ಕೆಲವು ಹೊಟೇಲ್‌ಗಳಲ್ಲಿ ಸಿಬ್ಬಂದಿಗಳು ಗೋಮಾಂಸವನ್ನು ಬಚ್ಚಿಟ್ಟು ಯಾಮಾರಿಸಿದರು. ಕೆಲವು ಹೊಟೇಲ್‌ಗಳು ದಿಢೀರನೇ ಬಾಗಿಲು ಎಳೆದುಕೊಂಡವು. ಇನ್ನು ಕೆಲವು ಹೊಟೇಲ್‌ಗಳಲ್ಲಿ ಗೋಮಾಂಸವನ್ನು ಹೊಟೇಲ್ ತ್ಯಾಜ್ಯದೊಳಗೆ ಎಸೆದು ಜಾಣತನ ತೋರಿದರು.

‘ಶಕ್ತಿ’ಯಲ್ಲಿ ಪ್ರಕಟವಾದ ಬೈಲುಕೊಪ್ಪ ಮೂರನೇ ಕ್ಯಾಂಪಿನ ‘ಟಿಬೆಟ್ ಕಿಚನ್’ ಎಂಬ ಹೊಟೇಲ್‌ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ ಸಂದರ್ಭ ಹೊಟೇಲ್‌ನ ಮೆನು ಕಾರ್ಡಿನಲ್ಲಿ ವಿವಿಧ ಬಗೆಯ ಸವಿರುಚಿಗಳ ಗೋಮಾಂಸದ ಖಾದ್ಯಗಳು ಹಾಗೂ ಅವುಗಳಿಗೆ ವಿಧಿಸಿದ ದರಗಳ ಬಗ್ಗೆ ಇದ್ದಂತಹ ದಾಖಲೆ ದೊರಕಿತು. ಈ ಬಗ್ಗೆ ಅಧಿಕಾರಿಗಳು ಹೊಟೇಲ್ ಮಾಲೀಕ ತ್ಸೆರಿಂಗ್ ಎಂಬವರನ್ನು ಪ್ರಶ್ನಿಸಿದಾಗ, ನಾವು ಗೋಹತ್ಯೆ ನಿಷೇಧ ಕಾನೂನು ಜಾರಿಯಾಗುವ ಮೊದಲೇ ಈ ಮೆನು ಕಾರ್ಡ್ ಪ್ರಿಂಟ್ ಆಗಿತ್ತು ಎಂದು ಸಮರ್ಥಿಸಿಕೊಂಡರು.

ಬಳಿಕ ಇವರದ್ದೇ ಮಾಲೀಕತ್ವದ ಗೋಲ್ಡನ್ ಟೆಂಪಲ್ ಬಳಿ ಇದ್ದ ಹೊಟೇಲ್‌ಗೆ ದಾವಿಸುವಷ್ಟರಲ್ಲಿ ದಾಳಿಯ ಮಾಹಿತಿ ರವಾನೆ ಯಾದೊಡನೆ ಆ ಹೊಟೇಲ್‌ಗೆ ಬೀಗ ಜಡಿಯಲಾಗಿತ್ತು.

ಇನ್ನು ಆಸುಪಾಸಿನ ಕೆಲವು ಹೊಟೇಲ್‌ಗಳ ಮೇಲೆ ದಾಳಿಯಿಟ್ಟು ಗೋಮಾಂಸವನ್ನು ಅಡುಗೆ ಕೋಣೆಗಳಲ್ಲಿ ಶೋಧಿಸಲಾಯಿತು.

ಈ ಸಂದರ್ಭ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಪಿರಿಯಾಪಟ್ಟಣ ತಹಶೀಲ್ದಾರ್ ಶ್ವೇತಾ, ಬೈಲಕೊಪ್ಪದ ಟಿಬೇಟನ್ ಕ್ಯಾಂಪಿನಲ್ಲಿನ ಹೊಟೇಲ್ ಗಳಲ್ಲಿ ಗೋಮಾಂಸ ಬಿಕರಿಯಾಗುತ್ತಿದ್ದ ಬಗ್ಗೆ ಮಡಿಕೇರಿಯ ‘ಶಕ್ತಿ’ ದೈನಿಕದಲ್ಲಿ ಮಾಹಿತಿ ನೋಡಿ ನಮ್ಮ ಕಂದಾಯ ಅಧಿಕಾರಿಗಳ ತಂಡವನ್ನು ರಚಿಸಿ ತಪಾಸಣೆ ನಡೆಸಲಾಗಿದೆ. ತಪ್ಪಿತಸ್ಥ ಹೊಟೇಲ್ ಮಾಲೀಕರ ವಿರುದ್ಧ ಬೈಲುಕೊಪ್ಪ ಠಾಣೆಗೆ ದೂರು ನೀಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಅಲ್ಲದೇ ಬೈಲಕೊಪ್ಪದ ಹೊಟೇಲ್‌ಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾವಹಿಸುವಂತೆ ಟಿಬೇಟನ್ ಶಿಬಿರದ ಸೆಟಲ್‌ಮೆಂಟ್ ಅಧಿಕಾರಿ ತ್ಸೆರಿಂಗ್ ತುಪ್ಟೇನ್ ಅವರಿಗೂ ನಿರ್ದೇಶನ ನೀಡುವುದಾಗಿ ತಹಶೀಲ್ದಾರ್ ಶ್ವೇತಾ ಹೇಳಿದರು.

ಕಂದಾಯ ಅಧಿಕಾರಿ ಪ್ರದೀಪ್ ತಪಾಸಣೆ ನಡೆಸಲಾಗಿದೆ. ತಪ್ಪಿತಸ್ಥ ಹೊಟೇಲ್ ಮಾಲೀಕರ ವಿರುದ್ಧ ಬೈಲುಕೊಪ್ಪ ಠಾಣೆಗೆ ದೂರು ನೀಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಅಲ್ಲದೇ ಬೈಲಕೊಪ್ಪದ ಹೊಟೇಲ್‌ಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾವಹಿಸುವಂತೆ ಟಿಬೇಟನ್ ಶಿಬಿರದ ಸೆಟಲ್‌ಮೆಂಟ್ ಅಧಿಕಾರಿ ತ್ಸೆರಿಂಗ್ ತುಪ್ಟೇನ್ ಅವರಿಗೂ ನಿರ್ದೇಶನ ನೀಡುವುದಾಗಿ ತಹಶೀಲ್ದಾರ್ ಶ್ವೇತಾ ಹೇಳಿದರು.

ಕಂದಾಯ ಅಧಿಕಾರಿ ಪ್ರದೀಪ್