ಮಡಿಕೇರಿ, ಫೆ. ೧೯: ವೀರಾಜಪೇಟೆಯ ಹ್ಯುಮಾನಿಟಿ ಟ್ರಸ್ಟ್ ವತಿಯಿಂದ ತಾ. ೨೪ ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಸದಸ್ಯ ಎಫ್. ಮೊಹ್ಸನ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಹಾಗೂ ಜೀವದಾರ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ತಾ.೨೪ ರಂದು ಬೆಳಿಗ್ಗೆ ೯ ಗಂಟೆಯಿAದ ಸಂಜೆ ೩ ಗಂಟೆವರೆಗೆ ವೀರಾಜಪೇಟೆಯ ದೊಡ್ಡಟ್ಟಿ ಚೌಕಿ, ಶ್ರೀ ಕೃಷ್ಣ ಕಂಫರ್ಟ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸತತ ಎರಡು ವರ್ಷಗಳಿಂದ ಹ್ಯುಮಾನಿಟಿ ಬ್ಲಡ್ ಡೋನರ್ಸ್ ವಾಟ್ಸಪ್ ಗ್ರೂಪ್ ಮುಖಾಂತರ ಅವಶ್ಯಕತೆ ಇರುವವರಿಗೆ ರಕ್ತದಾನ ವ್ಯವಸ್ಥೆಯನ್ನು ನಿರ್ವಹಿಸಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದು, ಮೊದಲ ಬಾರಿಗೆ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳ ಲಾಗಿದೆ ಎಂದರು. ಮಹಿಳಾ ರಕ್ತದಾನಿ ಗಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿ ಗಾಗಿ ೯೪೪೯೧೭೪೦೨೯, ೯೬೧೧೦೭೧೪೩೭, ೯೯೬೪೫೫೫೫೬೪, ೯೫೯೧೨೫೨೬೧೮, ೭೬೭೬೯೮೪೫೩೩ ಸಂಪರ್ಕಿಸುವAತೆ ತಿಳಿಸಿದರು. ಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಎಸ್.ಎ. ಸಫೀಕ್ ಅಹಮ್ಮದ್, ಉಪಾಧ್ಯಕ್ಷ ಎಂ.ಎ. ಮಹಮ್ಮದ್ ಆಸೀಂ, ಕಾರ್ಯದರ್ಶಿ ಹೆಚ್. ಫೈಝಲ್, ಖಜಾಂಚಿ ಹಬಿಬುಲ್ಲ ಇದ್ದರು.