ಸೂಕ್ತ ನಿರ್ವಹಣೆ ಅಗತ್ಯ : ಚಾರುಲತ
ತಿಮ್ಮಯ್ಯ ಸ್ಮಾರಕ ಭವನ ನಿರ್ಮಾಣ ಹಲವು ಕೋಟಿಗಳ ವೆಚ್ಚದಲ್ಲಿ ಕಾರ್ಯಗತವಾಗಿದೆ. ಇದೀಗ ಇದರ ಸೂಕ್ತ ನಿರ್ವಹಣೆಯೂ ಅಗತ್ಯವಾಗಿದ್ದು, ಕೆಲವು ತಿಂಗಳ ಕಾಲ ಸೂಕ್ತ ನಿರ್ವಹಣೆಗೆ ಹಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಇದಕ್ಕಾಗಿ ರೂ. ೧೦ ಲಕ್ಷ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ಚಾರುಲತ ಸೋಮಲ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಯೋಜನೆಗೆ ಸಂಬAಧಿಸಿದ ಉಳಿಕೆ ಮೊತ್ತಕ್ಕೂ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಿಗುವ ಭರವಸೆ ವ್ಯಕ್ತಪಡಿಸಿದ ಅವರು ಇತ್ತೀಚೆಗೆ ನಿರ್ವಹಣೆಗೆ ಸಂಬAಧಿಸಿದAತೆ ಸಭೆ ನಡೆಸಲಾಗಿದ್ದು, ಜಿಲ್ಲಾಮಟ್ಟದ ಅಧಿಕಾರಿಗಳನ್ನು ಒಳಗೊಂಡAತೆ ಸಮಿತಿ ರಚಿಸಲಾಗಿದ್ದು, ಸಮಿತಿಯ ಅನುಮೋದನೆಗಾಗಿ ಸರಕಾರಕ್ಕೆ ಮನವಿ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು. ಸಮಿತಿಗೆ ಖಾಸಗಿಯವರ ಸೇರ್ಪಡೆ ಬಗ್ಗೆ ಮುಂದಿನ ದಿನದಲ್ಲಿ ತೀರ್ಮಾನವಾಗಲಿರುವುದಾಗಿ ಅವರು ಹೇಳಿದರು.