ಎಂ.ಎA. ಚರಣ್ ಭರವಸೆ

ಕುಶಾಲನಗರ, ಫೆ ೧೯: ಕುಶಾಲನಗರ ಪಟ್ಟಣ ವ್ಯಾಪ್ತಿಯ ಕೆರೆ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರ ಚಿಂತನೆ ಹರಿಸಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಂ.ಎA. ಚರಣ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಶಾಲನಗರ ಪಟ್ಟಣದ ಐತಿಹಾಸಿಕ ಕೆರೆಗಳಾದ ತಾವರೆಕೆರೆ, ಸೋಮೇಶ್ವರ ಕೆರೆ, ಕುಂಬಾರಗುAಡಿ ಕೆರೆಗಳು ಸೇರಿದಂತೆ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯ ಕೆರೆಗಳನ್ನು ಗುರುತಿಸಿ ಅವುಗಳ ಗಡಿ ಗುರುತು ಕಾರ್ಯ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಇತ್ತೀಚೆಗೆ ನಡೆದ ಪ್ರಾಧಿಕಾರ ಸಭೆಯಲ್ಲಿ ಸ್ಥಳೀಯ ಸಂಘ-ಸAಸ್ಥೆಗಳ ಮೂಲಕ ಕೆರೆಗಳ ಅಭಿವೃದ್ಧಿಗೆ ಮನವಿ ಬಂದ ಮೇರೆಗೆ ಚರ್ಚಿಸಲಾಗಿ ಈ ಬಗ್ಗೆ ಕ್ರಿಯಾಯೋಜನೆ ರೂಪಿಸಿ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೆರೆಗಳ ವ್ಯಾಪ್ತಿಯ ಸರ್ವೆ ಕಾರ್ಯ ನಂತರ ಸ್ವಚ್ಛತೆ ಹಾಗೂ ಆವರಣ ಬೇಲಿ ನಿರ್ಮಾಣ ಮಾಡುವ ಮೂಲಕ ಕೆರೆಯ ರಕ್ಷಣೆ ಮಾಡಲು ಪ್ರಥಮ ಆದ್ಯತೆ ಕಲ್ಪಿಸಲಾಗುವುದು. ಎರಡನೇ ಹಂತವಾಗಿ ಆಯ್ದ ಕೆರೆಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಮಾಡಲು ಚಿಂತನೆ ಹರಿಸಲಾಗಿದೆ ಎಂದು ಚರಣ್ ತಿಳಿಸಿದ್ದಾರೆ. ಕುಶಾಲನಗರ ತಾವರೆಕೆರೆ ೩.೧೨ ಎಕರೆ ವ್ಯಾಪ್ತಿಯಲ್ಲಿ ವ್ಯಾಪಿಸಿದ್ದು ಸೋಮೇಶ್ವರ ಕೆರೆ ೧.೬೪ ಎಕರೆ ಪ್ರದೇಶದಲ್ಲಿರುವ ಬಗ್ಗೆ ದಾಖಲೆಗಳು ಕಂಡುಬAದಿದ್ದು ಹದ್ದುಬಸ್ತು ಗುರುತಿಸುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ಎಡಿಎಲ್‌ಆರ್ ಸರ್ವೆಗೆ ಯೋಜನಾ ಪ್ರಾಧಿಕಾರ ಮೂಲಕ ಕೋರಲಾಗುವುದು ಎಂದು ತಿಳಿಸಿದ್ದಾರೆ.ಕುಶಾಲನಗರ ವ್ಯಾಪ್ತಿಯ ಕೆರೆ ಅಭಿವೃದ್ಧಿಗೆ ಕ್ರಮ

ಎಂ.ಎA. ಚರಣ್ ಭರವಸೆ

ಕುಶಾಲನಗರ, ಫೆ ೧೯: ಕುಶಾಲನಗರ ಪಟ್ಟಣ ವ್ಯಾಪ್ತಿಯ ಕೆರೆ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರ ಚಿಂತನೆ ಹರಿಸಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಂ.ಎA. ಚರಣ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಶಾಲನಗರ ಪಟ್ಟಣದ ಐತಿಹಾಸಿಕ ಕೆರೆಗಳಾದ ತಾವರೆಕೆರೆ, ಸೋಮೇಶ್ವರ ಕೆರೆ, ಕುಂಬಾರಗುAಡಿ ಕೆರೆಗಳು ಸೇರಿದಂತೆ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯ ಕೆರೆಗಳನ್ನು ಗುರುತಿಸಿ ಅವುಗಳ ಗಡಿ ಗುರುತು ಕಾರ್ಯ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಇತ್ತೀಚೆಗೆ ನಡೆದ ಪ್ರಾಧಿಕಾರ ಸಭೆಯಲ್ಲಿ ಸ್ಥಳೀಯ ಸಂಘ-ಸAಸ್ಥೆಗಳ ಮೂಲಕ ಕೆರೆಗಳ ಅಭಿವೃದ್ಧಿಗೆ ಮನವಿ ಬಂದ ಮೇರೆಗೆ ಚರ್ಚಿಸಲಾಗಿ ಈ ಬಗ್ಗೆ ಕ್ರಿಯಾಯೋಜನೆ ರೂಪಿಸಿ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೆರೆಗಳ ವ್ಯಾಪ್ತಿಯ ಸರ್ವೆ ಕಾರ್ಯ ನಂತರ ಸ್ವಚ್ಛತೆ ಹಾಗೂ ಆವರಣ ಬೇಲಿ ನಿರ್ಮಾಣ ಮಾಡುವ ಮೂಲಕ ಕೆರೆಯ ರಕ್ಷಣೆ ಮಾಡಲು ಪ್ರಥಮ ಆದ್ಯತೆ ಕಲ್ಪಿಸಲಾಗುವುದು. ಎರಡನೇ ಹಂತವಾಗಿ ಆಯ್ದ ಕೆರೆಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಮಾಡಲು ಚಿಂತನೆ ಹರಿಸಲಾಗಿದೆ ಎಂದು ಚರಣ್ ತಿಳಿಸಿದ್ದಾರೆ. ಕುಶಾಲನಗರ ತಾವರೆಕೆರೆ ೩.೧೨ ಎಕರೆ ವ್ಯಾಪ್ತಿಯಲ್ಲಿ ವ್ಯಾಪಿಸಿದ್ದು ಸೋಮೇಶ್ವರ ಕೆರೆ ೧.೬೪ ಎಕರೆ ಪ್ರದೇಶದಲ್ಲಿರುವ ಬಗ್ಗೆ ದಾಖಲೆಗಳು ಕಂಡುಬAದಿದ್ದು ಹದ್ದುಬಸ್ತು ಗುರುತಿಸುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ಎಡಿಎಲ್‌ಆರ್ ಸರ್ವೆಗೆ ಯೋಜನಾ ಪ್ರಾಧಿಕಾರ ಮೂಲಕ ಕೋರಲಾಗುವುದು ಎಂದು ತಿಳಿಸಿದ್ದಾರೆ.