ಶನಿವಾರಸಂತೆ, ಫೆ. ೧೯: ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ದೊಡ್ಡಬಿಳಹ ಗ್ರಾಮದಲ್ಲಿ
ತಾ. ೧೭ರಂದು ರಾತ್ರಿ ಮಹಿಳೆಯೊಬ್ಬರು ಮನೆಯಲ್ಲಿದ್ದಾಗ, ಯಾರೋ ಬಾಗಿಲು ತಟ್ಟಿದ ಶಬ್ದಕ್ಕೆ ಬಾಗಿಲು ತೆರೆದಾಗ ಕುಡಿಯಲು ನೀರುಬೇಕು ಎಂದು ಕೇಳಿದ್ದಾರೆ.
ನೀರು ನೀಡಿದ ನಂತರ ಈರ್ವರು ಆರೋಪಿಗಳು ಹಣದ ವಿಷಯದಲ್ಲಿ ಜಗಳ ತೆಗೆದು, ಚಾಕುವಿನಿಂದ ಹಲ್ಲೆ ನಡೆಸಿ. ಕೊಲೆ ಬೆದರಿಕೆ ಹಾಕಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ದೊಡ್ಡಬಿಳಹ ಗ್ರಾಮದ ನಿವಾಸಿ ಶಿವಮ್ಮ (೬೮) ವಾಸದ ಮನೆಯಲ್ಲಿ ಒಬ್ಬರೆ ವಾಸವಿದ್ದು, ರಾತ್ರಿ ಯಾರೋ ಬಾಗಿಲು ತಟ್ಟಿದಾಗ, ಬಾಗಿಲು ತೆರೆದ ಸಂದರ್ಭ ಗ್ರಾಮದ ಇಬ್ಬರು ನಮಗೆ ನೀರು ಬೇಕು ಎಂದು ಕೇಳಿ ಕುಡಿಯಲು ನೀರುಕೊಟ್ಟು ನೀವುಗಳು ಇಷ್ಟೊತ್ತಿಗೆ ಏಕೆ ಬಂದಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಚಾಕುವಿನಿಂದ ತೊಡೆಯ ಭಾಗಕ್ಕೆ ಚುಚ್ಚಿ ಗಾಯಗೊಳಿಸಿ, ಎಳೆದಾಡಿ, ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು
ತಾ. ೧೮ರಂದು ಶಿವಮ್ಮ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಪ್ರಕರಣ ದಾಖಲಾಗಿದೆ.