ಹೆಬ್ಬಾಲೆ, ಫೆ. ೧೯: ಯುವ ಜನಾಂಗ ಸಾಮಾಜಿಕ ಜಾಲತಾಣಗಳ ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ಅರಿಯದೇ ಅವುಗಳ ಪ್ರಭಾವಕ್ಕೆ ಸಿಲುಕುತ್ತಿದ್ದಾರೆ ಎಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಹೇಳಿದರು.
ಚೈಲ್ಡ್ ಲೈನ್ ಸಂಸ್ಥೆ ವತಿಯಿಂದ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಕ್ಕಳ ಪೋಷಣೆ ಮತ್ತು ರಕ್ಷಣೆ ಅಗತ್ಯತೆ ಕುರಿತ ವಿಶೇಷ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾಹಿತಿಗಳನ್ನು ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಹರಡಲು ಸಾಮಾಜಿಕ ಜಾಲತಾಣ ಒಂದು ಮಾಧ್ಯಮ ವಾಗಿದೆ. ಅಂತರ್ಜಾಲವು ಮಾಧ್ಯಮ ವಾಗಿದ್ದರೆ, ಫೇಸ್ಬುಕ್, ಇನ್ಸಾ÷್ಟಗ್ರಾಮ್, ವಾಟ್ಸಾಪ್ಗಳು ವೇದಿಕೆ ಗಳಾಗಿವೆ. ಆದರೆ ಈ ವೇದಿಕೆಗಳಲ್ಲಿ ಯೋಗ್ಯವಾದ ಮಾಹಿತಿ ಹೆಬ್ಬಾಲೆ, ಫೆ. ೧೯: ಯುವ ಜನಾಂಗ ಸಾಮಾಜಿಕ ಜಾಲತಾಣಗಳ ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ಅರಿಯದೇ ಅವುಗಳ ಪ್ರಭಾವಕ್ಕೆ ಸಿಲುಕುತ್ತಿದ್ದಾರೆ ಎಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಹೇಳಿದರು.
ಚೈಲ್ಡ್ ಲೈನ್ ಸಂಸ್ಥೆ ವತಿಯಿಂದ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಕ್ಕಳ ಪೋಷಣೆ ಮತ್ತು ರಕ್ಷಣೆ ಅಗತ್ಯತೆ ಕುರಿತ ವಿಶೇಷ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾಹಿತಿಗಳನ್ನು ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಹರಡಲು ಸಾಮಾಜಿಕ ಜಾಲತಾಣ ಒಂದು ಮಾಧ್ಯಮ ವಾಗಿದೆ. ಅಂತರ್ಜಾಲವು ಮಾಧ್ಯಮ ವಾಗಿದ್ದರೆ, ಫೇಸ್ಬುಕ್, ಇನ್ಸಾ÷್ಟಗ್ರಾಮ್, ವಾಟ್ಸಾಪ್ಗಳು ವೇದಿಕೆ ಗಳಾಗಿವೆ. ಆದರೆ ಈ ವೇದಿಕೆಗಳಲ್ಲಿ ಯೋಗ್ಯವಾದ ಮಾಹಿತಿ ಸಂಸ್ಥೆಗಳ ಮೂಲಕ ಮಕ್ಕಳ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದೆ. ಆದರೆ, ಫೌಂಡೇಶನ್ ಆರಂಭವಾಗಿ ಹಲವು ವರ್ಷವಾದರು ಚೈಲ್ಡ್ಲೈನ್ ಸಂಸ್ಥೆ ಹಾಗೂ ಅದರ ಕಾರ್ಯ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಆದರೆ, ಚೈಲ್ಡ್ಲೈನ್ ಫೌಂಡೇಷನ್ನಿAದ ಪ್ರತಿ ವರ್ಷ ಮಕ್ಕಳ ಮೈತ್ರಿ ಸಪ್ತಾಹ ನಡೆಸುವ ಮೂಲಕ ಮಕ್ಕಳ ರಕ್ಷಣೆ ಹಾಗೂ ಹಕ್ಕುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಶಿಕ್ಷಕ ಮೆ.ನಾ. ವೆಂಕಟನಾಯಕ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಮಾನಗಳಿಸಬೇಕು. ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣಗಳಿಗೆ ದಾಸರಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್.ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಂತರ ಪೊಲೀಸ್ ಠಾಣೆಯ ಪ್ರೊಬೆಷನರಿ ಎಸ್ಐ ಶ್ರವಣ್, ಸಿಬ್ಬಂದಿ ಶನತ್, ಉಪನ್ಯಾಸಕ ಎಂ.ಕೆ. ವಿಜಯ ಕುಮಾರ್, ಮಕ್ಕಳ ಸಹಾಯವಾಣಿ ಕಾರ್ಯಕರ್ತರಾದ ಯೋಗೇಶ್, ಪ್ರವೀಣ್, ಕುಸುಮಾ ಹಾಗೂ ಶಿಕ್ಷಕ ವೃಂದ ಹಾಜರಿದ್ದರು.