ಮಡಿಕೇರಿ, ಫೆ. ೧೯: ಪೂರ್ಣಗೊಂಡ ಅಭಿವೃದ್ಧಿ ಕಾಮಗಾರಿಯ ಬಾಕಿ ಹಣ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಕೊಡಗು ಜಿಲ್ಲಾ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘದ ವತಿಯಿಂದ ಕೆಲಸ ಸ್ಥಗಿತಗೊಳಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

೬೦ಕ್ಕೂ ಹೆಚ್ಚು ಪ್ರತಿಭಟನಾ ನಿರತರು ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾಧ್ಯಕ್ಷ ರವಿ ಚಂಗಪ್ಪ ಮಾತನಾಡಿ, ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಮೂಲಕ ಗುತ್ತಿಗೆ ಪಡೆದು ಅಭಿವೃದ್ಧಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಇದುವರೆಗೂ ಬಿಲ್ ಪಾವತಿಯಾಗಿಲ್ಲ. ಅತಿವೃಷ್ಟಿ ಸಂದರ್ಭ ಜಿಲ್ಲೆಯ ಗುತ್ತಿಗೆದಾರರು ಜಿಲ್ಲಾಡಳಿತದೊಂದಿಗೆ ನಿರತರು ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾಧ್ಯಕ್ಷ ರವಿ ಚಂಗಪ್ಪ ಮಾತನಾಡಿ, ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಮೂಲಕ ಗುತ್ತಿಗೆ ಪಡೆದು ಅಭಿವೃದ್ಧಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಇದುವರೆಗೂ ಬಿಲ್ ಪಾವತಿಯಾಗಿಲ್ಲ. ಅತಿವೃಷ್ಟಿ ಸಂದರ್ಭ ಜಿಲ್ಲೆಯ ಗುತ್ತಿಗೆದಾರರು ಜಿಲ್ಲಾಡಳಿತದೊಂದಿಗೆ ಪ್ಯಾಕೇಜ್ ಯೋಜನೆಯಡಿಯ ರೂ. ೪೫ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಸೇರಿದಂತೆ ರೂ. ೧೨ ಕೋಟಿಯ ಮಳೆಹಾನಿ ಕಾಮಗಾರಿ, ರೂ ೩ಕೋಟಿ ವೆಚ್ಚದ ಸೇತುವೆ, ರೂ. ೨ ಕೋಟಿಯ ರಸ್ತೆ ನಿರ್ವಹಣೆ, ಕಟ್ಟಡ ನಿರ್ವಹಣೆಯ ರೂ. ೫ ಕೋಟಿ ಹಣ ಕೂಡ ಇನ್ನೂ ಗುತ್ತಿಗೆದಾರರ ಕೈಸೇರಿಲ್ಲ. ಹಣ ಬಿಡುಗಡೆಯಾಗ ದಿರಲು ಅಧಿಕಾರಿಗಳು ಕಾರಣರಾಗಿ ದ್ದಾರೆ ಎಂದು ದೂರಿದರು. ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿಗೂ ಮುನ್ನ ಶೇ. ೫೦ ರಷ್ಟು ಅನುದಾನ ನೀಡುವಂತೆ ನಮಗೂ ಶೇ. ೨೫ ರಷ್ಟು ಅನುದಾನ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ಲಾರೆನ್ಸ್, ಮಡಿಕೇರಿ ತಾಲೂಕು ಅಧ್ಯಕ್ಷ ರಾಜೀವ್ ಲೋಚನ, ವೀರಾಜಪೇಟೆ ತಾಲೂಕು ಅಧ್ಯಕ್ಷ ವಿಜು ಸುಬ್ರಮಣಿ, ಜಿಲ್ಲಾ ಕಾರ್ಯದರ್ಶಿ ರವಿ ಕುಮಾರ್, ಖಜಾಂಜಿ ರವೀಂದ್ರ ರೈ ಸೇರಿದಂತೆ ಇನ್ನಿತರರು ಇದ್ದರು.