ಮುಳ್ಳೂರು, ಫೆ. ೧೮: ಸಮೀಪದ ಕೊಡ್ಲಿಪೇಟೆ ಹೋಬಳಿಯಲ್ಲಿರುವ ದೊಡ್ಡಕುಂದ ಗ್ರಾಮದ ಶ್ರೀ ಮಾರಿಯಮ್ಮ ನೂತನ ದೇವಸ್ಥಾನ ಉದ್ಘಾಟನೆ ಮತ್ತು ದೇವರ ಪುನರ್ ಪ್ರತಿಷ್ಠಾಪನಾ ಪೂಜಾ ಮಹೋತ್ಸವ ಸಂಪನ್ನಗೊAಡಿತು.

ನೂತನ ದೇವಸ್ಥಾನ ಉದ್ಘಾಟನೆ ಮತ್ತು ದೇವರ ಪುನರ್ ಪ್ರತಿಷ್ಠಾಪನಾ ಪೂಜಾ ಮಹೋತ್ಸವದ ಅಂಗವಾಗಿ ಮುಂಜಾನೆ ಪ್ರಾತಃಕಾಲದಲ್ಲಿ ದೇವಸ್ಥಾನದ ದೇವರ ಮೂರ್ತಿಯನ್ನು ವಾದ್ಯಗೋಷ್ಠಿಯೊಂದಿಗೆ ಗಂಗಾಸ್ನಾನಕ್ಕೆ ಕೊಂಡೊಯ್ಯಲಾಯಿತು. ಗಂಗಾಸ್ನಾನ ಬಳಿಕ ದೇವಸ್ಥಾನದಲ್ಲಿ ವಿವಿಧ ಪೂಜೆಗಳನ್ನು ನೆರವೇರಿಸಿದ ನಂತರ ಪುನರ್ ಪ್ರತಿಷ್ಠಾಪಿಸಲಾಯಿತು. ದೇವಸ್ಥಾನ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಶ್ರೀ ಮಾರಿಯಮ್ಮ ಮತ್ತು ಯಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಜವರೇಗೌಡ ಮಾಸ್ಟರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಲ್ಪಿ ಎಸ್.ಎಸ್. ವರಪ್ರಸಾದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಯಾಡಗೊಟ್ಟ ಗ್ರಾ.ಪಂ. ಉಪಾಧ್ಯಕ್ಷೆ ಪಾವನಾ ಗಗನ್, ಸದಸ್ಯರುಗಳಾದ ಎಂ.ಎA. ಹನೀಫ್, ಲೀನಾ ಪರಮೇಶ್, ದಾನಿ ಜೆ.ಕೆ. ತೇಜಕುಮಾರ್, ಪ್ರಮುಖರಾದ ಡಿ.ಆರ್. ಲಿಂಗರಾಜ್, ಹೊನ್ನಪ್ಪ, ಮೋಹನ್‌ಕುಮಾರ್, ನಂದೀಶ್ ಮುಳ್ಳುರು, ದೌಲತ್ ಹುಸೈನ್, ಬಿ.ವಿ.ಮೋಹನ್, ದೇವಸ್ಥಾನ ಸಮಿತಿ ಕಾರ್ಯದರ್ಶಿ ಡಿ.ಆರ್. ವೇದಕುಮಾರ್, ಉಪಾಧ್ಯಕ್ಷ ಮಹೇಶ್ ಮುಂತಾದವರು ಹಾಜರಿದ್ದರು.