ಸುAಟಿಕೊಪ್ಪ,ಫೆ.೧೮ : ಗರಗಂದೂರಿನ ಶ್ರೀ ಕುರುಂಭ ಭಗವತಿ ಭದ್ರಕಾಳಿ ದೇವಸ್ಥಾನದ ೧೪ನೇ ವಾರ್ಷಿಕ ಮಹೋತ್ಸವ ಸಂಪನ್ನಗೊAಡಿತು. ಕಳೆದ ೩ ದಿನಗಳಿಂದ ನಡೆದ ಪೂಜಾ ಕೈಂಕರ್ಯದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ವಿಶೇಷ ಪೂಜೆ ದೈವಕೋಲ ಕೊನೆಯ ದಿನ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪ, ತಳಿರು ತೋರಣ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು.

ತಾ.೧೮ ರಂದು ಬೆಳಿಗ್ಗೆ ೯. ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಶ್ರೀದೇವಿಯ ವಸೂರಿಮಲೆಯ ತೆಯ್ಯಂ ಮತ್ತು ೧೨.೩೦ರಿಂದ ಶ್ರೀ ಕುರುಂಭ ಭಗವತಿ ವೆಳಚ್ಚಪಾಡ್ ಕೋಮರಂ ತುಳ್ಳಲ್ ದೈವಕೋಲ ನೇರವೇರಿಸುವುದರೊಂದಿಗೆ ವಾರ್ಷಿಕೋತ್ಸವಕ್ಕೆ ತೆರೆ ಎಳೆಯಲಾಯಿತು.