ನಾಪೋಕ್ಲು, ಫೆ. ೧೯: ಜಿಲ್ಲೆಯಲ್ಲಿರುವ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಮೈಕ್ರೋ ಎ.ಟಿ.ಎಂ. ನೀಡಲು ಕ್ರಮ ಕೈಗೊಳ್ಳ ಲಾಗುವದು ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಹೇಳಿದರು.

ನೆಲಜಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸುಮಾರು ರೂ. ೧.೩೫ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬ್ಯಾಂಕ್ ಕಚೇರಿ ಮತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮೈಕ್ರೋ ಎ.ಟಿ.ಎಂ.ನಿAದ ಗ್ರಾಮೀಣ ಪ್ರದೇಶದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆಯಾಯ ಕೃಷಿ ಪತ್ತಿನ ಸಹಕಾರ ಸಂಘದ ಎ.ಟಿ.ಎಂ ನಿಂದ ದಿನಕ್ಕೆ ೨೦ ಸಾವಿರ ರೂ. ಪಡೆಯಬಹುದು. ದಿನಕ್ಕೆ ಮೂರು ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದು ಎಂದು ಮಾಹಿತಿ ನೀಡಿದರು.

ದಕ್ಷ ಆಡಳಿತ ಮಂಡಳಿ ಮತ್ತು ಪ್ರಾಮಾಣಿಕ ಮತ್ತು ಪರಿಶ್ರಮದ ಸಿಬ್ಬಂದಿಗಳಿAದ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಎಲ್ಲಾ ಸೌಲಭ್ಯವಿರುವ ಕಟ್ಟಡ ನಿರ್ಮಿಸಿಕೊಟ್ಟಿರುವದು ಶ್ಲಾಘನೀಯ ಎಂದರು. ರಾಜ್ಯದಲ್ಲಿ ೫೪೪೦ ಕೃಷಿ ಪತ್ತಿನ ಸಹಕಾರ ಸಂಘಗಳಿವೆ; ಅವುಗಳಲ್ಲಿ ನಾಲ್ಕು ಜಿಲ್ಲೆಯಲ್ಲಿರುವ ಸಂಘಗಳು ಮಾತ್ರ ಉತ್ತಮ ಸಾಧನೆ ಮಾಡಿವೆ. ಅದರಲ್ಲಿ ಕೊಡಗು ಜಿಲ್ಲೆ ಸೇರಿರುವದು ಹೆಮ್ಮೆ ಎನಿಸಿದೆ ಎಂದರು.

ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಪ್ರಾಮಾಣಿಕ ಮತ್ತು ಪರಿಶ್ರಮದ ಸಿಬ್ಬಂದಿಗಳಿAದ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಎಲ್ಲಾ ಸೌಲಭ್ಯವಿರುವ ಕಟ್ಟಡ ನಿರ್ಮಿಸಿಕೊಟ್ಟಿರುವದು ಶ್ಲಾಘನೀಯ ಎಂದರು. ರಾಜ್ಯದಲ್ಲಿ ೫೪೪೦ ಕೃಷಿ ಪತ್ತಿನ ಸಹಕಾರ ಸಂಘಗಳಿವೆ; ಅವುಗಳಲ್ಲಿ ನಾಲ್ಕು ಜಿಲ್ಲೆಯಲ್ಲಿರುವ ಸಂಘಗಳು ಮಾತ್ರ ಉತ್ತಮ ಸಾಧನೆ ಮಾಡಿವೆ. ಅದರಲ್ಲಿ ಕೊಡಗು ಜಿಲ್ಲೆ ಸೇರಿರುವದು ಹೆಮ್ಮೆ ಎನಿಸಿದೆ ಎಂದರು.

ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಪ್ರಾಮಾಣಿಕ ಮತ್ತು ಪರಿಶ್ರಮದ ಸಿಬ್ಬಂದಿಗಳಿAದ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಎಲ್ಲಾ ಸೌಲಭ್ಯವಿರುವ ಕಟ್ಟಡ ನಿರ್ಮಿಸಿಕೊಟ್ಟಿರುವದು ಶ್ಲಾಘನೀಯ ಎಂದರು. ರಾಜ್ಯದಲ್ಲಿ ೫೪೪೦ ಕೃಷಿ ಪತ್ತಿನ ಸಹಕಾರ ಸಂಘಗಳಿವೆ; ಅವುಗಳಲ್ಲಿ ನಾಲ್ಕು ಜಿಲ್ಲೆಯಲ್ಲಿರುವ ಸಂಘಗಳು ಮಾತ್ರ ಉತ್ತಮ ಸಾಧನೆ ಮಾಡಿವೆ. ಅದರಲ್ಲಿ ಕೊಡಗು ಜಿಲ್ಲೆ ಸೇರಿರುವದು ಹೆಮ್ಮೆ ಎನಿಸಿದೆ ಎಂದರು.

ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ದೇಶದಲ್ಲಿ ೩೫೦೦೦ ಸಂಘಗಳಿವೆ. ಸಂಘಗಳಿಗೆ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಸವಲತ್ತುಗಳನ್ನು ಕಲ್ಪಿಸಲಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಿದ ಸಂಘಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದರು.

ವಾಣಿಜ್ಯ ಮಳಿಗೆ ಉದ್ಘಾಟಿಸಿ ಮಾತನಾಡಿದ ನಬಾರ್ಡ್ ಸಂಸ್ಥೆಯ ನಿವೃತ್ತ ಸಹಾಯಕ ಮಹಾಪ್ರಬಂಧಕ ಮುಂಡAಡ ನಾಣಯ್ಯ ಮಾತನಾಡಿ ಕಟ್ಟಡ ನಿರ್ಮಿಸಿದರೆ ಸಾಲದು ಸಂಸ್ಥೆಯ ಒಳಗೆ ಪ್ರಾಮಾಣಿಕತೆಯಿಂದ ಕೆಲಸಮಾಡಬೇಕು. ಗ್ರಾಮೀಣ ರೈತರಿಗೆ ಆಸರೆಯಾಗಬೇಕು ಎಂದು ಕಿವಿಮಾತು ಹೇಳಿದರು. ಆಡಳಿತ ಮಂಡಳಿ ಸಭಾಂಗಣವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸೂರು ಸತೀಶ್ ಜೋಯಪ್ಪ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಚಿರೋಟಿರ ಎಂ. ಪೂಣಚ್ಚ, ಬೊಟ್ಟೋಳಂಡ ಎಂ. ಗಣಪತಿ, ಬೊಟ್ಟೋಳಂಡ ಡಿ. ಬಿದ್ದಯ್ಯ, ಬದ್ದಂಜ್ಜೆಟ್ಟಿರ ಸಿ. ಕುಂಞಪ್ಪ, ಮಂಡೀರ ಕಾಳಪ್ಪ, ಚಿರೋಟಿರ ಎಂ. ತಮ್ಮಯ್ಯ, ನುಚ್ಚಿಮಣಿಯಂಡ ಎಂ. ಉತ್ತಪ್ಪ, ಮಂಡೀರ ಎಂ. ಪೊನ್ನಣ್ಣ, ಮತ್ತು ಅಪ್ಪಚ್ಚಿರ ಎಂ. ಕಮಲ ಮುತ್ತಣ್ಣ ಅವರನ್ನು ಆಡಳಿತ ಮಂಡಳಿಯಿAದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚೀಯಕಪೂವಂಡ ಅಪ್ಪಚ್ಚು ವಹಿಸಿದ್ದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ತೆಕ್ಕಡ ಪೊನ್ನಪ್ಪ, ಎಲ್ಲಾ ನಿರ್ದೇಶಕರು, ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ, ಸಿಬ್ಬಂದಿ ಇದ್ದರು. ಅಲ್ಲಾರಂಡ ಪ್ರೀತು ಕುಮಾರಿ ಪ್ರಾರ್ಥನೆ, ಸಂಘದ ಅಧ್ಯಕ್ಷ ಚೀಯಕಪೂವಂಡ ಅಪ್ಪಚ್ಚು ಸ್ವಾಗತ, ಕಟ್ಟಡ ಸಲಹಾ ಸಮಿತಿ ಸದಸ್ಯ ಮುಕ್ಕಾಟಿರ ವಿನಯ್ ನಿರೂಪಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಯು. ಮುತ್ತಮ್ಮ ವಂದಿಸಿದರು.