ಆಲೂರು-ಸಿದ್ದಾಪುರ, ಫೆ. ೧೭: ಸಮೀಪದ ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿ ನಿಯರಿಗೆ ಲೈಂಗಿಕ ದೌರ್ಜನ್ಯ ಹಾಗೂ ಪೋಕ್ಸೋ ಕಾಯಿದೆ ಕುರಿತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು.

ಶನಿವಾರಸಂತೆ ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿ, ವಿದ್ಯಾರ್ಥಿನಿಯರು ಶಾಲೆ, ಕಾಲೇಜಿಗೆ ಬರುವಾಗ ಮತ್ತು ಮನೆಗೆ ಹೋಗುವಾಗ ಬಸ್ಸಿನಲ್ಲಿ, ಆಟೋಗಳಲ್ಲಿ ಯಾವುದಾದರೂ ಸಮಸ್ಯೆ ಎದರಿಸುತ್ತಿದ್ದರೆ ಮಾಹಿತಿ ನೀಡಲು ತಿಳಿಸಲಾಯಿತು. ಪ್ರತಿಯೊಬ್ಬರೂ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಯನ್ನು ಹೊಂದಿರಬೇಕೆAಬ ಉದ್ದೇಶದಿಂದ ವಿದ್ಯಾರ್ಥಿನಿಯರಿಗೆ ದೂರವಾಣಿ ಸಂಖ್ಯೆ ನೀಡಲಾಯಿತು. ಮಾಹಿತಿ ಕಾರ್ಯಕ್ರಮದಲ್ಲಿ ಲೈಂಗಿಕ ದೌರ್ಜನ್ಯ ನಡೆಯುವ ಬಗ್ಗೆ ಮತ್ತು ಇದನ್ನು ತಡೆಗಟ್ಟಲು ೨೦೧೨ರಲ್ಲಿ ಜಾರಿಗೊಳಿಸಿರುವ ಪೋಕ್ಸೋ ಕಾಯಿದೆ ಬಗ್ಗೆ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿಕೊಡಲಾಯಿತು.

ಇತ್ತೀಚೆಗೆ ಪೊಲೀಸ್ ಇಲಾಖೆಯಿಂದ ಹೊಸದಾಗಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಶನಿವಾರಸಂತೆ ಪೊಲೀಸ್ ಠಾಣೆಗೆ ನಿರ್ಭಯ ಎಂಬ ಶೀರ್ಷಿಕೆಯಡಿ ಹೊಸ ಬೈಕ್ ಅನ್ನು ನೀಡಿದ್ದು ಈಗಾಗಲೇ ಇದು ಕಾರ್ಯಾ ಚರಣೆಯಲ್ಲಿದೆ ಎಂದು ಪೊಲೀಸರು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದರು. ಪೊಲೀಸ್ ಸಿಬ್ಬಂದಿ ಸವಿತಾ ಕುಮಾರಸ್ವಾಮಿ, ನಿರ್ಭಯ ಬೈಕ್ ಚಾಲಕ ಪ್ರದೀಪ್ ಕುಮಾರ್, ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶಶಿಕಲಾ ಮುಂತಾದವರು ಹಾಜರಿದ್ದರು.