ಭಾಗಮಂಡಲ, ಫೆ. ೧೭: ಸಮೀಪದ ತಣ್ಣಿಮಾನಿ ಗ್ರಾಮದ ನಿವಾಸಿ ಕುದುಕುಳಿ ಪುರುಷೋತ್ತಮ (೬೦) ಎಂಬವರು ನಿನ್ನೆ ದಿನ ಮರದಿಂದ ಬಿದ್ದು ಗಂಭೀರ ಗಾಯಗಳಾಗಿ ಮೃತಪಟ್ಟಿದ್ದು, ಈ ಬಗ್ಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುರುಷೋತ್ತಮ ಕೂಲಿ ಕೆಲಸಕ್ಕೆ ಬೇರೆ ಕಡೆಗೆ ತೆರಳುತ್ತಿದ್ದರು. ಸಂತೆಯ ದಿನವಾದ್ದರಿಂದ ನಿನ್ನೆ ತೋಟದಲ್ಲಿ ಕಾಳು ಮೆಣಸು ಕೀಳಲು ಹೋಗಿದ್ದರು. ಕಾಳುಮೆಣಸು ಕಿಳುವ ಸಂದರ್ಭ ಮರದಿಂದ ಬಿದ್ದು ಗಂಭೀರ ಗಾಯಗಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಮಗ ರವಿಚಂದ್ರ ಸ್ವಂತ ಕೆಲಸದ ನಿಮಿತ್ತ ನಾಪೋಕ್ಲಿಗೆ ತೆರಳಿದ್ದು, ಹಿಂತಿರುಗಿ ಬಂದಾಗ ತಂದೆಯವರನ್ನು ಕಾಣದೆ ಸುತ್ತಮುತ್ತ ಹುಡುಕಿದ್ದು ಸಂಜೆಯ ವೇಳೆ ತೋಟದ ಬದಿಯಲ್ಲಿ ತಂದೆ ಕೈಕಾಲುಗಳಿಗೆ ಗಂಭೀರ ಗಾಯ ಮಾಡಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದು ಮೃತಪಟ್ಟಿರುವುದು ಕಂಡುಬAದಿದೆ. ಕಾನೂನು ಕ್ರಮ ಕೈಗೊಳ್ಳುವಂತೆ ಮಗ ರವಿಚಂದ್ರ ದೂರು ಸಲ್ಲಿಸಿದ್ದು ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಕಾನೂನು ಕಮ್ರ ಕೈಗೊಂಡಿದ್ದಾರೆ.
- ಕೆ.ಡಿ.ಸುನಿಲ್