ಮಡಿಕೇರಿ, ಫೆ. ೧೭: ಭಾರತಕ್ಕೆ ಸ್ವಾತಂತ್ಯ ತಂದುಕೊಟ್ಟ.., ಬಾಪೂಜಿ ಎಂದೇ ಕರೆಯಲ್ಪಡುವ ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳನ್ನು ಸರಕಾರಿ ಕಚೇರಿಗಳಲ್ಲಿ, ಶಾಲೆಗಳಲ್ಲಿ ಸಂಘ-ಸAಸ್ಥೆಗಳ ಕಚೇರಿಗಳಲ್ಲಿ ತೂಗಿ ಹಾಕಿ ಗೌರವ ಸಲ್ಲಿಸುತ್ತಾರೆ. ರಾಷ್ಟçಪಿತನಿಗೆ ಗೌರವ ಸಲ್ಲಿಸುವ ಸಲುವಾಗಿ ನಗರ, ಪಟ್ಟಣ ಪ್ರದೇಶಗಳಲ್ಲಿ ಗಾಂಧಿ ಮಂಟಪದೊAದಿಗೆ ಗಾಂಧೀಜಿಯ ಪ್ರತಿಮೆ, ಪುತ್ಥಳಿಗಳನ್ನು ನಿರ್ಮಿಸಲಾಗಿದೆ. ಗಾಂಧೀಜಿಯ ಪ್ರತಿಮೆ, ಪುತ್ಥಳಿಯನ್ನು ಕಂಡರೆ ಭಾರತೀಯರು ಗೌರವದಿಂದ ನಮಿಸುತ್ತ ಅವರ ಸೇವೆಯನ್ನು ಸ್ಮರಿಸುತ್ತಾರೆ. ಆದರೆ., ಮಡಿಕೇರಿಯಲ್ಲಿರುವ ಗಾಂಧಿಮAಟಪವನ್ನು ಮರೆಮಾಚಿ ಪ್ರತಿಮೆಯನ್ನು ಕಾಣದಂತೆ ಮಾಡಲಾಗಿದೆ..!ಸ್ವಾತಂತ್ರö್ಯ ಸಂಗ್ರಾಮದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಕೊಡಗು ಜಿಲ್ಲೆಗೆ ಬಂದಿದ್ದ ಸಂದರ್ಭ ರಾಜಾಸೀಟು ಬಳಿಯಿರುವ ಮೈದಾನದಲ್ಲಿ ಸಾರ್ವಜನಿಕ ಭಾಷಣ ಮಾಡಿದ್ದರು. ನಂತರದಲ್ಲಿ ಈ ಒಂದು ನೆನಪಿಗಾಗಿ ಆ ಪ್ರದೇಶಕ್ಕೆ ಗಾಂಧಿ ಮೈದಾನವೆಂದು ಹೆಸರಿಸಿ ಅಲ್ಲಿಯೇ ಒಂದು ಮಂಟಪದೊAದಿಗೆ ಗಾಂಧೀಜಿಯ ಪ್ರತಿಮೆಯನ್ನೂ ನಿರ್ಮಿಸಲಾಗಿದೆ. ಆ ಪ್ರದೇಶದಲ್ಲಿ ಹಾದು ಹೋಗುವ ರಸ್ತೆಗೆ ಮಹಾತ್ಮ ಗಾಂಧಿ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಅಲ್ಲದೇ ಗಾಂಧೀಜಿಯ ಚಿತಾಭಸ್ಮ ಕೂಡ ಜಿಲ್ಲಾ ಖಜಾನೆಯಲ್ಲಿದೆ.
ಇಂದಿಗೂ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ಪ್ರವಾಸಿಗರು (ಮೊದಲ ಪುಟದಿಂದ) ಒಮ್ಮೆಯಾದರೂ ಗಾಂಧಿ ಮಂಟಪದತ್ತ ಕಣ್ಣು ಹಾಯಿಸದೇ ಇರಲಾರರು. ಆದರೆ, ಇದೀಗ ಗಾಂಧಿ ಮಂಟಪವನ್ನೇ ಮರೆಮಾಚಲಾಗಿದೆ. ಕರ್ನಾಟಕ ಸರಕಾರ, ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ತೆರೆಯಲಾಗಿರುವ ಕಾವೇರಿ ವಸ್ತçಸಿರಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಗಾಂಧಿ ಮಂಟಪವನ್ನು ಮರೆಮಾಚಿದೆ.
ಸಾಮಾನ್ಯವಾಗಿ ಮಳಿಗೆಗಳನ್ನು ಬಾಲಭವನದ ಆವರಣ ಅಥವಾ ಗಾಂಧಿ ಮೈದಾನದಲ್ಲಿ ತೆರೆಯಲಾಗುತ್ತಿತ್ತು. ಆದರೆ, ನಗರಸಭೆ ವತಿಯಿಂದ ರೇಸ್ ಕೋರ್ಸ್ ರಸ್ತೆಯಲ್ಲಿ ತಡೆಗೋಡೆ ನಿರ್ಮಿಸುವ ಸಂಬAಧ ತೆಗೆದ ಮಣ್ಣನ್ನು ತಂದು ಮೈದಾನದಲ್ಲಿ ರಾಶಿ ಹಾಕಲಾಗಿದೆ. ಮತ್ತೊಂದೆಡೆ ಪೈಪ್ ಇನ್ನಿತರ ಸಾಮಗ್ರಿಗಳನ್ನು ರಾಶಿ ಹಾಕಿ ಮೈದಾನವೇ ಇಲ್ಲದಂತೆ ಮಾಡಲಾಗಿದೆ. ಹಾಗಾಗಿ ಗಾಂಧಿ ಮಂಟಪದ ಎದುರು ಮಳಿಗೆ ನಿರ್ಮಿಸಲಾಗಿದೆ.
ಮಳಿಗೆ ತೆರೆಯಲಾಗಿರುವ ಜಾಗ ಗಾಂಧಿ ಸ್ಮಾರಕ ನಿರ್ಮಾಣಕ್ಕೆ ಮೀಸಲಿರಿಸಲಾಗಿದ್ದು, ಬೇಲಿ ಅಳವಡಿಸಲಾಗಿದೆ. ಅದನ್ನು ಸಂರಕ್ಷಣೆ ಮಾಡಬೇಕಾದ ಸರಕಾರಿ ಇಲಾಖೆಗಳೇ ಈ ರೀತಿ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ಕೇಳಿ ಬರುತ್ತಿದೆ. ಮಳಿಗೆ ಪಕ್ಕದಲ್ಲೇ ನಗರದಲ್ಲಿ ವಿವಿಧ ಕಾಮಗಾರಿ ಕೆಲಸಗಳಿಗೆ ಬಂದಿರುವ ಕಾರ್ಮಿಕರು ಬಿಡಾರ ಹಾಕಿಕೊಂಡು ವಾತಾವರಣವೇ ಕೊಳಚೆ ಪ್ರದೇಶದಂತಾಗಿದೆ. ಇದು ಒಂದು ರೀತಿಯಲ್ಲಿ ರಾಷ್ಟçಪಿತನಿಗೆ ಅವಮಾನ ಮಾಡಿದಂತಾಗಿದೆ.
ಜಿಲ್ಲಾಡಳಿತ ಹಾಗೂ ಗಾಂಧೀಜಿಯ ಚಿತಾಭಸ್ಮ ರಕ್ಷಣೆಯೊಂದಿಗೆ ಸದ್ಭಾವನಾ ದಿನಾಚರಣೆ ಸಂಬAಧ ಸ್ಥಾಪನೆಗೊಂಡಿರುವ ಸರ್ವೋದಯ ಸಮಿತಿ ಇತ್ತ ಗಮನ ಹರಿಸಿ ಇನ್ನು ಮುಂದಕ್ಕಾದರೂ ಈ ರೀತಿಯ ಅವಮಾನಗಳಾಗದಂತೆ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. -ಸಂತೋಷ್