ಕುಶಾಲನಗರ, ಫೆ. ೧೭: ಕೊಡಗು ಪ್ರೆಸ್ಕ್ಲಬ್ನ ೨೧ನೇ ವಾರ್ಷಿಕೋತ್ಸವ ಪ್ರೆಸ್ಕ್ಲಬ್ ಡೇ ನಿನ್ನೆ ಕುಶಾಲನಗರದಲ್ಲಿ ಸಂಭ್ರಮದಿAದ ನೆರವೇರಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಮಾತನಾಡಿ, ವೈಯಕ್ತಿಕ ದ್ವೇಷ, ಕಲ್ಪನೆಗಳನ್ನು ಹೊರತುಪಡಿಸಿ ವರದಿಗಳು ಪ್ರಕಟವಾಗುವಂತೆ ಪತ್ರಿಕಾ ಮಾಧ್ಯಮಗಳು ಎಚ್ಚರಿಕೆ ವಹಿಸಬೇಕಾಗಿರುವುದು ಅಗತ್ಯವಾಗಿದೆ. ವರದಿ ಸಂದರ್ಭ ರಚನಾತ್ಮಕ ಟೀಕೆ ಹೊರತು ವೈಯಕ್ತಿಕ ತೇಜೋವಧೆ ಸಲ್ಲದು ಎಂದರಲ್ಲದೆ, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಪತ್ರಿಕಾ ಮಾಧ್ಯಮಗಳು ಹೆಚ್ಚಿನ ಕಾಳಜಿ ತೋರಬೇಕಾಗಿದೆ ಎಂದರು. ಪತ್ರಕರ್ತ ಯಾವುದೇ ಸಂದರ್ಭದಲ್ಲಿಯೂ ಆಂತರಿಕ ಶಕ್ತಿ ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದ ರಾಜೇಂದ್ರ ಅವರು, ಪತ್ರಿಕಾ ವೃತ್ತಿ ಒಂದು ರೀತಿಯ ಸಮಾಜ ಸೇವೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಇದೇ ಸಂದರ್ಭ ಮಾತನಾಡಿದ ಅವರು ಜೀವನದಿ ಕಾವೇರಿ ಸಂರಕ್ಷಣೆ ಉಳಿವಿನ ಬಗ್ಗೆ ಪತ್ರಕರ್ತರ ಶ್ರಮ ಇರಲಿ. ಕಾವೇರಿ ಮೂಲಕ್ಷೇತ್ರ ವಿಚಾರದಲ್ಲಿ ಪತ್ರಕರ್ತರ ಸಂಘ ಮತ್ತು ಪ್ರೆಸ್ಕ್ಲಬ್ಗಳ ಮೂಲಕ ನಿರಂತರ ಸಂವಾದ ಕಾರ್ಯಕ್ರಮಗಳು ನಡೆಯಬೇಕು ಎಂದು ಆಶಿಸಿದ ರಾಜೇಂದ್ರ, ಮಳೆಗಾಲ ಸಂದರ್ಭ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖದ್ದಾಗಬೇಕಾಗಿದೆ ಎಂದರು. ಜಿಲ್ಲಾಡಳಿತ, ಸರಕಾರಗಳು ಈ ನಿಟ್ಟಿನಲ್ಲಿ ಕೂಡಲೆ ಕ್ರಿಯಾ ಯೋಜನೆಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಯಾವುದೇ ಸಂದರ್ಭ ಟೀಕೆಗಳನ್ನು ಆರೋಗ್ಯಕರವಾಗಿ ಸ್ವೀಕರಿಸಬೇಕು. ಹಿರಿಯ ಪತ್ರಕರ್ತರ ಮಾರ್ಗದರ್ಶನದ ಅಗತ್ಯತೆ ಯುವ ಪತ್ರಕರ್ತರಿಗೆ ಇರುವುದಾಗಿ ತಿಳಿಸಿದ ಅವರು ಪ್ರೆಸ್ಕ್ಲಬ್ ಕಾರ್ಯಕ್ರಮಗಳ ಮೂಲಕ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದರು.
ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ವೈಯಕ್ತಿಕ ಬದುಕು ದುಸ್ತರವಾಗಿದೆ. ಪತ್ರಕರ್ತರ ಮೂಲಕ ಸಮಾಜ ಎಲ್ಲವನ್ನೂ ಬಯಸುತ್ತದೆ. ಅದೇ ರೀತಿ ಸಮಾಜ ಕೂಡ ಪತ್ರಕರ್ತರ ಶ್ರೇಯೋಭಿವೃದ್ಧಿ ಬಗ್ಗೆ ಕಾಳಜಿ ಹೊಂದಬೇಕಿದೆ ಎಂದರು.
ಪ್ರಶಸ್ತಿ ಪ್ರದಾನ - ಸನ್ಮಾನ
ಇದೇ ಸಂದರ್ಭ ಪರಿಣಾಮಕಾರಿ ವರದಿ ಪ್ರಶಸ್ತಿಗೆ ಭಾಜನರಾದ ಶಕ್ತಿಯ ಉಪ ಸಂಪಾದಕ ಕಾಯಪಂಡ ಶಶಿ ಸೋಮಯ್ಯ ಅವರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ರಾಜ್ಯ ಪ್ರಶಸ್ತಿ ವಿಜೇತ ಕರುಣ್ ಕಾಳಯ್ಯ, ಜಿಲ್ಲಾ ಪ್ರಶಸ್ತಿ ವಿಜೇತರಾದ ಎಚ್.ಕೆ. ಜಗದೀಶ್, ಸುನಿಲ್ ಪೊನ್ನೇಟಿ, ಕಿಶೋರ್ ನಾಚಪ್ಪ, ಕುಡೆಕಲ್ ಸಂತೋಷ್, ಎಚ್.ಟಿ. ಅನಿಲ್, ನವೀನ್ ಸುವರ್ಣ, ವಿಘ್ನೇಶ್ ಭೂತನಕಾಡು, ಸತೀಶ್ ನಾರಾಯಣ್, ಹಿರಿಕರ ರವಿ, ಆರ್. ಸುಬ್ರಮಣಿ, ಕೆ.ಎ. ಆದಿತ್ಯ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
(ಮೊದಲ ಪುಟದಿಂದ) ಪ್ರೆಸ್ಕ್ಲಬ್ ವತಿಯಿಂದ ಆಯೋಜಿಸಿದ್ದ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯ ಬೆಸ್ಟ್ ಬ್ಯಾಟ್ಸ್ಮೆನ್ ವಿನೋದ್, ಬೆಸ್ಟ್ (ಮೊದಲ ಪುಟದಿಂದ) ಪ್ರೆಸ್ಕ್ಲಬ್ ವತಿಯಿಂದ ಆಯೋಜಿಸಿದ್ದ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯ ಬೆಸ್ಟ್ ಬ್ಯಾಟ್ಸ್ಮೆನ್ ವಿನೋದ್, ಬೆಸ್ಟ್ ಮಕ್ಕಳ ತಂಡಕ್ಕೆ ಬಹುಮಾನ ವಿತರಿಸಲಾಯಿತು.
ವಿವಿಧ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ಲೋಕೇಶ್ ಸಾಗರ್, ವಿಶ್ವ ಕುಂಬೂರು, ಎಸ್. ಮಹೇಶ್, ವಿ.ವಿ. ಅರುಣ್ ಕುಮಾರ್, ಹರೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಪ್ರೆಸ್ಕ್ಲಬ್ ಮೂಲಕ ನಡೆಸಲಾಗಿದ್ದ ಕ್ರಿಕೆಟ್ ಪಂದ್ಯಾಟದ ಬಹುಮಾನವನ್ನು ಈ ಸಂದರ್ಭ ವಿತರಿಸಲಾಯಿತು.
ಅಪರಾಹ್ನದಿಂದ ವಿವಿಧ ಸ್ಪರ್ಧೆಗಳಲ್ಲಿ ಸದಸ್ಯರು ಭಾಗಿಗಳಾಗಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಕ್ಲಬ್ನ ವಾರ್ಷಿಕ ಮಹಾಸಭೆ ನಡೆದು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭ ಪ್ರೆಸ್ಕ್ಲಬ್ ಹಿರಿಯ ಉಪಾಧ್ಯಕ್ಷ ಲೋಕೇಶ್ ಸಾಗರ್, ಪದಾಧಿಕಾರಿಗಳಾದ ಆರ್. ಸುಬ್ರಮಣಿ, ವಿಘ್ನೇಶ್, ರಜಿತ್, ಕೆ.ಕೆ. ನಾಗರಾಜಶೆಟ್ಟಿ, ಎಂ.ಎ. ಅಜೀಜ್ ಮತ್ತು ನಿರ್ದೇಶಕರು ಇದ್ದರು.