ಮಡಿಕೇರಿ, ಫೆ. ೧೬: ಸಿದ್ದಾಪುರದ ದೇವಿಕಾಡ್ ಹಾಗೂ ಆನಂದಪುರ ತೋಟಗಳಿಂದ ಸುಮಾರು ೨,೫೦೦ ಕೆಜಿ ಹಸಿ ಅಡಿಕೆಯನ್ನು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವುದರಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇಂದು ಬೆಳಿಗ್ಗೆ ಸುಮಾರು ೭ ಗಂಟೆಗೆ ಗ್ರಾಮಾಂತರ ಠಾಣಾ ಉಪನಿರೀಕ್ಷಕ ಸಿದ್ದಲಿಂಗ ಭೀಮ್‌ರಾವ್ ಅವರು ಸಿಬ್ಬಂದಿಗಳೊAದಿಗೆ ಅಮ್ಮತ್ತಿ ಬಳಿ ಗಸ್ತು ತಿರುಗುತ್ತಿದ್ದ ವೇಳೆ, ಕಳವು ಮಾಡಿದ್ದ ಅಡಿಕೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಆರೋಪಿಗಳಾದ ಸಿದ್ದಾಪುರದ ಶರಣು (೨೨), ಕಣ್ಣಂಗಾಲ ಗ್ರಾಮದ ಎಮ್. ಗೋಪಾಲಕೃಷ ್ಣ(೨೧) ಹಾಗೂ ರಾಜೇಶ್ (೩೫) ಅವರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಮ್ಮತ್ತಿಯ ಗ್ರೀನ್ಸ್ ಅಂಗಡಿ ಹಾಗೂ ಸಿದ್ದಾಪುರದ ಪಿ.ವಿ ಟ್ರೇರ‍್ಸ್ ಗೆ ರೂ.೧.೫ ಲಕ್ಷಕ್ಕೆ ಅಡಿಕೆ ಮಾರಾಟ ಮಾಡಿದ್ದು, ರೂ.೧.೫ ಲಕ್ಷ ಹಣ ಹಾಗೂ ಕೃತ್ಯಕ್ಕೆ ಬಳಸಿದ ವಾಹನ (ಕೆ.ಎ.೫೩ಎಮ.೨೯೨೩) ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ವೀರಾಜಪೇಟೆ ಡಿ.ವೈ.ಎಸ್.ಪಿ ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಶ್ರೀಧರ್ ಅವರ ನೇತೃತ್ವದಲ್ಲಿ, ವೀರಾಜಪೇಟೆ ಗ್ರಾಮಾಂತರ ಠಾಣಾ ಪಿ.ಎಸ್.ಐ ಸಿದ್ದಲಿಂಗ ಭೀಮ್‌ರಾಮ್ ಹಾಗೂ ಸಿಬ್ಬಂದಿಗಳಾದ ಶ್ರೀಧರ್, ತೀರ್ಥ ಕುಮಾರ, ನೆಹರು, ರಾಮಪ್ಪ, ಪ್ರದೀಪ್, ಗಿರೀಶ್, ಮುಸ್ತಾಫಾ ಹಾಗೂ ಜೀಪು ಚಾಲಕ ಸಂದೀಪ್ ಭಾಗವಹಿಸಿದ್ದರು.