ಕೂಡಿಗೆ, ಫೆ. ೧೬: ಸೇವಾ ಮನೋಭಾವದಿಂದ ಉತ್ತಮವಾದ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಲು ಮತ್ತು ಎಲ್ಲಾ ವ್ಯವಸ್ಥೆ ಒಂದೇ ಅರಿವಿನಲ್ಲಿ ತಿಳಿಯಲು ಸಾಧ್ಯವಾಗಬೇಕು ಎಂಬ ಹಿನ್ನೆಲೆ ರಾಜ್ಯದ ಎಲ್ಲಾ ಸಹಕಾರಿ ಕ್ಷೇತ್ರಗಳನ್ನು ಒಂದೇ ಸಾಫ್ಟ್ವೇರ್ನಡಿ ತರುವ ಚಿಂತನೆ ರಾಜ್ಯಮಟ್ಟದಲ್ಲಿ ನಡೆಯುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.ಅವರು ತೊರೆನೂರು ಗ್ರಾಮದ ಸಹಕಾರ ಸಂಘದ ನೂತನ ಹೆಚ್ಚುವರಿ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ರಾಜ್ಯದ ೫೪೦೦ ಸಹಕಾರ ಸಂಘಗಳು ಮತ್ತು ೨೧ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ್ನು ಒಂದೇ ಸಾಫ್ಟ್ವೇರ್ನಲ್ಲಿ ತರುವ ಚಿಂತನೆಯನ್ನು ನಡೆಸಿ ಈಗಾಗಲೇಮುಖ್ಯಮಂತ್ರಿಗಳೊAದಿಗೆ ಚರ್ಚೆ ನಡೆಸಲಾಗಿದೆ ಎಂದರು.ಕಳೆದ ಎರಡು ವರ್ಷಗಳ ಸಾಲಮನ್ನಾ ಯೋಜನೆಯ ೨೯೫ ಕೋಟಿ ಹಣ ಮರುಪಾವತಿ ಆಗಬೇಕಾಗಿದೆ. ಅದನ್ನು ಸದ್ಯದಲ್ಲಿ ಸರಿಪಡಿಸಲಾಗುವುದು. ಅಲ್ಲದೆ ಕೊಡಗು ಜಿಲ್ಲೆಯ ೪೫೦೦ ರೈತರ ಸಾಲಮನ್ನಾ ಯೋಜನೆಯ ಹಣವನ್ನು ಈ ಸಾಲಿನಲ್ಲಿ ಜಿಲ್ಲಾ ಕೇಂದ್ರ ಬ್ಯಾಂಕ್ನ ಮೂಲಕ ನೀಡಲಾಗುವುದು ಎಂದರು. ಸಹಕಾರ ಇಲಾಖೆಯ ಮುಖೇನ ರೈತರ ಅಭಿವೃದ್ಧಿಗೆ ಪೂರಕವಾಗಿ ಅನುಕೂಲವಾಗುವ ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನು ಒದಗಿಸ ಲಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ೧೫,೫೦೦ ಕೋಟಿ ಹಣವನ್ನು ಈ ಸಾಲಿನಲ್ಲಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆತ್ಮನಿರ್ಭರ್ ಯೋಜನೆಯ ಅಡಿಯಲ್ಲಿ ರಾಜ್ಯದ ರೈತರ ಅನುಕೂಲದ ದೃಷ್ಟಿಯಿಂದ ೩೬ ಕೋಟಿ ವೆಚ್ಚದ ಯೋಜನೆಯು ಸಿದ್ಧವಾಗಿದೆ; ಈಗಾಗಲೇ ೩೦ ಕೋಟಿ ಹಣ ಬಿಡುಗಡೆಯಾಗಿದೆ. ಇದರಲ್ಲಿ ರಾಜ್ಯದ ೨೪ ಲಕ್ಷ ರೈತರಿಗೆ ೧೨ ಕೋಟಿ ವಿನಿಯೋಗಿಸಲಾಗುವುದು ಎಂದರು. ಈ ಸಾಲಿನಲ್ಲಿ ತೊರೆನೂರು ಗ್ರಾಮದ ನೂತನ ಕಟ್ಟಡದ ಮೇಲಂತಸ್ತಿನ ಕಟ್ಟಡಕ್ಕೆ ೩೦ ಲಕ್ಷ ರೂ.ಗಳನ್ನು ನೀಡುವ ಭರವಸೆ ನೀಡಿದರು. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಹಕಾರ ಸಂಘಗಳನ್ನು ತೆರೆೆಯುವ ಚಿಂತನೆಯೂ ಇದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ನಗರಾಭಿವೃದ್ಧಿ ಸಚಿವ
(ಮೊದಲ ಪುಟದಿಂದ) ಭೈರತಿ ಬಸವರಾಜು ಅವರು ಮಾತನಾಡಿ, ಸಹಕಾರ ಸಂಘಗಳು ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ಸಹಕಾರಿಗಳ ಪ್ರಯತ್ನ ಬಹುಮುಖ್ಯವಾಗಿರುತ್ತದೆ. ಇಂದಿನ ಪೈಪೋಟಿ ಯುಗದಲ್ಲಿ ಸಹಕಾರ ಸಂಘಗಳು ರೈತರ ಪ್ರಗತಿಗೆ ಪೂರಕವಾಗಿರುವುದರಿಂದ ರಾಜ್ಯದ ಎಲ್ಲಾ ಸಹಕಾರಿ ಸಂಘಗಳು ಉತ್ತಮ ಸ್ಥಿತಿಯಲ್ಲಿದ್ದು, ರೈತರ ಅಭಿವೃದ್ಧಿಗೆ ಸಹಕಾರಿಯಾಗುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು. ಇವುಗಳ ಸದುಪಯೋಗವನ್ನು ಆಯಾ ಗ್ರಾಮದ ರೈತರು ಪಡೆದುಕೊಳ್ಳುವ (ಮೊದಲ ಪುಟದಿಂದ) ಭೈರತಿ ಬಸವರಾಜು ಅವರು ಮಾತನಾಡಿ, ಸಹಕಾರ ಸಂಘಗಳು ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ಸಹಕಾರಿಗಳ ಪ್ರಯತ್ನ ಬಹುಮುಖ್ಯವಾಗಿರುತ್ತದೆ. ಇಂದಿನ ಪೈಪೋಟಿ ಯುಗದಲ್ಲಿ ಸಹಕಾರ ಸಂಘಗಳು ರೈತರ ಪ್ರಗತಿಗೆ ಪೂರಕವಾಗಿರುವುದರಿಂದ ರಾಜ್ಯದ ಎಲ್ಲಾ ಸಹಕಾರಿ ಸಂಘಗಳು ಉತ್ತಮ ಸ್ಥಿತಿಯಲ್ಲಿದ್ದು, ರೈತರ ಅಭಿವೃದ್ಧಿಗೆ ಸಹಕಾರಿಯಾಗುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು. ಇವುಗಳ ಸದುಪಯೋಗವನ್ನು ಆಯಾ ಗ್ರಾಮದ ರೈತರು ಪಡೆದುಕೊಳ್ಳುವ (ಮೊದಲ ಪುಟದಿಂದ) ಭೈರತಿ ಬಸವರಾಜು ಅವರು ಮಾತನಾಡಿ, ಸಹಕಾರ ಸಂಘಗಳು ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ಸಹಕಾರಿಗಳ ಪ್ರಯತ್ನ ಬಹುಮುಖ್ಯವಾಗಿರುತ್ತದೆ. ಇಂದಿನ ಪೈಪೋಟಿ ಯುಗದಲ್ಲಿ ಸಹಕಾರ ಸಂಘಗಳು ರೈತರ ಪ್ರಗತಿಗೆ ಪೂರಕವಾಗಿರುವುದರಿಂದ ರಾಜ್ಯದ ಎಲ್ಲಾ ಸಹಕಾರಿ ಸಂಘಗಳು ಉತ್ತಮ ಸ್ಥಿತಿಯಲ್ಲಿದ್ದು, ರೈತರ ಅಭಿವೃದ್ಧಿಗೆ ಸಹಕಾರಿಯಾಗುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು. ಇವುಗಳ ಸದುಪಯೋಗವನ್ನು ಆಯಾ ಗ್ರಾಮದ ರೈತರು ಪಡೆದುಕೊಳ್ಳುವ ಸದಸ್ಯ ಜಯಣ್ಣ, ಕುಶಾಲನಗರ ಎ.ಪಿ.ಸಿ.ಎಂ.ಎಸ್.ನ ಅಧ್ಯಕ್ಷ ಕುಮಾರಪ್ಪ, ಉಪಾಧ್ಯಕ್ಷ ಜಗದೀಶ್, ಕೂಡಿಗೆ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್, ಕುಶಾಲನಗರ ಸಹಕಾರ ಸಂಘದ ಅಧ್ಯಕ್ಷ ಶರವಣಕುಮಾರ್, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ, ಸಹಾಯಕ ನಿಬಂಧಕ ರವಿಕುಮಾರ್, ತೊರೆನೂರು ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್. ಚಂದ್ರಪ್ಪ, ತೊರೆನೂರು ಸಹಕಾರ ಸಂಘದ ಉಪಾಧ್ಯಕ್ಷ ಡಿ.ಆರ್. ಪ್ರೇಮ್ ಕುಮಾರ್, ಸಂಘದ ನಿರ್ದೇಶಕರು, ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಸಹಕಾರಿಗಳನ್ನು ಮತ್ತು ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಪಾಂಡುರAಗ ಸ್ವಾಗತಿಸಿ, ವರದಿ ವಾಚನವನ್ನು ಹೆಚ್.ಬಿ. ಚಂದ್ರಪ್ಪ ಮಂಡಿಸಿದರು. ಪ್ರಾಸ್ತಾವಿಕವಾಗಿ ಕೃಷ್ಣೆÉÃಗೌಡ ಮಾತನಾಡಿದರು.
- ಕೆ.ಕೆ. ನಾಗರಾಜಶೆಟ್ಟಿ.