ಕೂಡಿಗೆ, ಫೆ. ೧೬: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮದಲ್ಲಿ ತೊರೆನೂರು ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ನೂತನ ಗರ್ಭಗುಡಿ ಲೋಕಾರ್ಪಣೆ ಮತ್ತು ಶಿಲಾಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಕಲಶ ಪೂಜಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಗ್ರಾಮದ ಕಾವೇರಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಲಾಯಿತು. ಪವಿತ್ರ ಕಳಸ ಹೊತ್ತ ೫೦೦ಕ್ಕೂ ಅಧಿಕ ಮಹಿಳೆಯರು ಗ್ರಾಮದ ಮುಖ್ಯ ಬೀದಿ ಮೂಲಕ ದೇವಾಲಯ ದವರೆಗೆ ಮೆರವಣಿಗೆ ನಡೆಸಿದರು. ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.

ಡೊಳ್ಳು ಕುಣಿತ, ನಂದಿ ಧ್ವಜ, ವೀರಗಾಸೆ, ಮಂಗಳವಾದ್ಯದೊAದಿಗೆ ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡರು. ದೇವಾಲಯ ಅರ್ಚಕ ಟಿ.ಎಲ್. ಸೋಮಶೇಖರ್ ತಂಡದಿAದ ಪೂಜೆ ನಡೆಯಿತು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ, ಉಪಾಧ್ಯಕ್ಷ ಟಿ.ಟಿ. ಪ್ರಕಾಶ, ಕಾರ್ಯದರ್ಶಿ ಟಿ.ಹೆಚ್. ಸೋಮಾಚಾರಿ, ಖಜಾಂಚಿ ಟಿ.ಬಿ. ಜಗದೀಶ, ನಿರ್ದೇಶಕರಾದ ಟಿ.ಸಿ. ಶಿವಕುಮಾರ, ಟಿ.ಕೆ. ಪಾಂಡುರAಗ, ಶಿವಾನಂದ, ಚಂದ್ರಶೇಖರ ಸೇರಿದಂತೆ ಸಲಹಾ ಸಮಿತಿ ಸದಸ್ಯರು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.