ನಾಪೋಕ್ಲು, ಫೆ. ೧೬ : ಸಮೀಪದ ಮೂಟೇರಿ ಶ್ರೀ ಉಮಾಮಹೇಶ್ವರಿ ದೇವಳವನ್ನು ಸುಮಾರು ೧.೫೦ ಕೋಟಿ ರೂ.ವೆಚ್ಚದಲ್ಲಿ ಪುನರ್ ನಿರ್ಮಿಸಲು ಉದ್ದೇಶಿಸಿದ್ದು, ಅದರಂತೆ ಗರ್ಭಗುಡಿ ಕಾಮಗಾರಿಗೆ ತಕ್ಕರು ಹಾಗೂ ಬೆಂಗಳೂರು ಲೋಕಾಯುಕ್ತ ನ್ಯಾಯಾಧೀಶರಾದ ವಾಜಂಡ ಬೋಪಯ್ಯ ಶಿಲಾನ್ಯಾಸ ನೆರವೇರಿಸಿದರು. ಈಗಾಗಲೇ ದೇವಾಲಯದ ಅಭಿವೃದ್ಧಿಗಾಗಿ ಉಸ್ತುವಾರಿ ಮಂತ್ರಿ ವಿ. ಸೋಮಣ್ಣನವರು ಸುಮಾರು
೫೦ ಲಕ್ಷ ಕೊಡುಗೆಯನ್ನು ನೀಡುತ್ತೇನೆಂದು ಭರವಸೆ
ನೀಡಿದ್ದಾರೆ.
ಈ ಸಂದರ್ಭದಲ್ಲಿ ದೇವಳ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ತಕ್ಕಮುಖ್ಯಸ್ಥರು, ಗ್ರಾಮಸ್ಥರು ಹಾಜರಿದ್ದರು.