ಕಾರ್ಯಕ್ರಮದ ಕುರಿತು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಯಿತು. ಈ ಬಗ್ಗೆ ಮಾಹಿತಿಯನ್ನು ಅಡ್ಡಂಡ ಕಾರ್ಯಪ್ಪ ನೀಡಿದರು. ಮುಂಜಾನೆ ೯ ಗಂಟೆಯಿAದ ಕಾರ್ಯಕ್ರಮ ಆರಂಭಗೊಳ್ಳಲಿದ್ದು ವೇದಿಕೆ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿವರ್ಯರು ಭಾಗವಹಿಸಲಿದ್ದಾರೆ. ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿ ಬರಲಿದ್ದು ಸಾವಿರಾರು ಸಂಖ್ಯೆಯಲ್ಲಿ ಜಿಲ್ಲೆಯ ಗಿರಿಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ವಿವರಿಸಿದರು.
ವನವಾಸಿ ಕಲ್ಯಾಣ ಕೇಂದ್ರದ ಪ್ರಮುಖರಾದ ಚೆಕ್ಕೇರ ಮನು ಕಾವೇರಪ್ಪ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಗಿರಿಜನರು ಇಂತಹ ಕಾರ್ಯಕ್ರಮದಲ್ಲಿ ಭಾಗಿಗಳಾಗಲು ವಿಶೇಷ ಆಸಕ್ತಿ ವಹಿಸಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ವ್ಯವಸ್ಥೆ ಕಲ್ಪಿಸಬೇಕು. ಊಟೋಪಚಾರಗಳು ಶಿಸ್ತುಬದ್ಧವಾಗಬೇಕು. ದೂರದ ಜಿಲ್ಲೆಯಿಂದ ಆಗಮಿಸುವ ಕಲಾವಿದರಿಗೆ ಗೌರವ ನೀಡಬೇಕೆಂದು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಅಯ್ಯಪ್ಪ ಈ ವಿಶೇಷ ಕಾರ್ಯಕ್ರಮವು ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವುದರಿಂದ ಪಂಚಾಯಿತಿಯು ವಿಶೇಷ ಆಸಕ್ತಿ ವಹಿಸಿ ಕಾರ್ಯಕ್ರಮದ ಯಶಸ್ವಿಗೆ ದುಡಿಯಲಿದೆ. ಸಕಲ ವ್ಯವಸ್ಥೆಗಳಿಗೆ ಪಂಚಾಯಿತಿಯ ಸಹಕಾರವಿದೆ ಎಂದರು. ಕೊಡವ ಸಾಹಿತ್ಯ ಆಕಾಡೆಮಿಯ ನಿರ್ದೇಶಕ ಪಡಿಞರಂಡ ಪ್ರಭುರವರನ್ನು ಕಾರ್ಯಕ್ರಮದ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಇವರೊಂದಿಗೆ ಪಂಚಾಯಿತಿ ಸದಸ್ಯರಾದ ಕಾಟಿಮಾಡ ಶರೀನ್ಮುತ್ತಣ್ಣ, ತಾ.ಪಂ.ಸದಸ್ಯ ಪ್ರಕಾಶ್, ತಿತಿಮತಿ ಪಂಚಾಯಿತಿಯ ಉಪಾಧ್ಯಕ್ಷೆ ವಿಜಯ, ಇವರುಗಳಿಗೆ ಕಾರ್ಯಕ್ರಮದ ವಿಶೇಷ ಜವಾಬ್ದಾರಿಗಳನ್ನು ವಹಿಸಲಾಯಿತು. ಗಿರಿಜನ ಕಲ್ಯಾಣ ಇಲಾಖೆಯ ಸಹಕಾರ ಪಡೆಯುವಂತೆ ಸಭೆ ತೀರ್ಮಾನ ಕೈಗೊಂಡಿತ್ತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜೆ.ಕೆ.ಸಾಸು, ವನವಾಸಿ ಕಲ್ಯಾಣ ಉಪಾಧ್ಯಕ್ಷರ ಚಟ್ಟಂಗಡ ಮಂದಣ್ಣ, ಮುದ್ದಿಯಡ ಮಂಜು, ತಿತಿಮತಿಯ ಅನೂಪ್ ಕುಮಾರ್, ಪ್ರಮುಖರಾದ ಕೃಷ್ಣ, ಜಿ.ಟಿ.ಬೋಪಯ್ಯ, ಕೊಟ್ಟಂಗಡ ಮಂಜುನಾಥ್, ಮುಕ್ಕಾಟೀರ ಸೋಮಯ್ಯ, ಪೊನ್ನಿಮಾಡ ಸಂತೋಷ್, ಮುಂತಾದವರು ಭಾಗವಹಿಸಿದ್ದರು. ಪಡಿಜ್ಞರಂಡ ಪ್ರಭುಕುಮಾರ್ ಸ್ವಾಗತಿಸಿ ವಂದಿಸಿದರು.
(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಫೆ.೧೫: ದ.ಕೊಡಗಿನ ನಿಟ್ಟೂರು ಗ್ರಾಮಕ್ಕೆ ಫೆ.೨೩ರಂದು ಮೊದಲ ಬಾರಿಗೆ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ೧೩ ಜಿಲ್ಲೆಗಳ ೧೫೦ಕ್ಕೂ ಅಧಿಕ ಆದಿವಾಸಿ ಕಲಾವಿದರು ಆಗಮಿಸುವ ಮೂಲಕ ನೃತ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗಿಗಳಾಗಲಿದ್ದಾರೆ. ದೇಶದ ಗಮನ ಸೆಳೆಯಲಿರುವ ಈ ಕಾರ್ಯಕ್ರಮಕ್ಕೆ ಗ್ರಾಮೀಣ ಭಾಗದ ನಿಟ್ಟೂರು ಗ್ರಾಮವು ಅಲಂಕೃತಗೊAಡು ಹೊರ ಜಿಲ್ಲೆಯಿಂದ ಬರುವ ಕಲಾವಿದÀರಿಗೆ ಸ್ವಾಗತ ನೀಡಲು ಕಾತುರದಿಂದ ಕಾಯುತ್ತಿದೆ. ನಿಟ್ಟೂರು ಪಂಚಾಯಿತಿಯ ನೂತನ ಅಧ್ಯಕ್ಷ ಚೆಕ್ಕೆರ ಸೂರ್ಯ ಅಯ್ಯಪ್ಪ, ಸದಸ್ಯ ಕಾಟಿಮಾಡ ಶರೀನ್ ಮುತ್ತಣ್ಣ, ವನವಾಸಿ ಕಲ್ಯಾಣ ಕೇಂದ್ರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ರಂಗಾಯಣದೊAದಿಗೆ ಕೈ ಜೋಡಿಸಿ ಉತ್ತಮ ಕಾರ್ಯಕ್ರಮ ರೂಪಿಸಲು ಹಲವು ಸುತ್ತಿನ ಪೂರ್ವಭಾವಿ ಸಭೆಗಳನ್ನು ನಡೆಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ದುಡಿಯುತ್ತಿದ್ದಾರೆ.
ರಂಗಾಯಣ, ಮೈಸೂರು ವನವಾಸಿ ಕಲ್ಯಾಣ ಕೇಂದ್ರ ಕೊಡಗು ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಗಿರಿಜನ ಉಪಯೋಜನೆ, ನಿಟ್ಟೂರು ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಫೆ.೨೩ರಂದು ‘ನಮ್ಮ ಜನ -ನಮ್ಮ ಸಂಸ್ಕೃತಿ ಗಿರಿಜನೋತ್ಸವ ನಡೆಯಲಿದ್ದು ಕಾರ್ಯಕ್ರಮವು ಮುಂಜಾನೆ ೯ ಗಂಟೆಯಿAದ ಸಂಜೆ ೬ ಗಂಟೆಯವರೆಗೂ ನಡೆಯಲಿದೆ. ಹೊರ ಜಿಲ್ಲೆಯಿಂದ ಬರುವ ಕಲಾವಿದರಿಗೆ ಕೊಡಗಿನ ಆತಿಥ್ಯ ನೀಡಲು ನಿಟ್ಟೂರು ಗ್ರಾಮ ಪಂಚಾಯ್ತಿಯ ನೂತನ ಆಡಳಿತ ಮಂಡಳಿ ವಿಶೇಷ ರೀತಿಯಲ್ಲಿ ಸಜ್ಜಾಗಿದ್ದು ಕಲಾವಿದರಿಗೆ ಉಳಿದುಕೊಳ್ಳಲು ಕೊಠಡಿ ವ್ಯವಸ್ಥೆ, ಊಟೋಪಚಾರದ ಬಗ್ಗೆ ಸಿದ್ಧತೆಗಳು ಭರದಿಂದ ಸಾಗಿವೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಿರಿಜನರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವೂ ಆಯೋಜನೆಗೊಂಡಿದೆ.
ವಿವಿಧ ನೃತ್ಯೋತ್ಸವವನ್ನು ವೀಕ್ಷಿಸಲು ನಾಗರಿಕರಿಗೆ ಸಾವಿರ ಸಂಖ್ಯೆಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿದ್ದು ಸುಸಜ್ಜಿತ ವೇದಿಕೆ ನಿರ್ಮಾಣಕ್ಕೆ ತಯಾರಿ ನಡೆದಿದೆ. ಆದಿವಾಸಿಗಳಲ್ಲಿ ಸಾಮಾಜಿಕ ಅರಿವಿನ ಕುರಿತು ನಾಟಕ ಪ್ರದರ್ಶನವು ಕೂಡ ಕಾರ್ಯಕ್ರಮದಲ್ಲಿ ಮೂಡಿ ಬರಲಿದೆ. ಮುಂಜಾನೆ ೯ ಗಂಟೆಗೆ ವಿವಿಧ ಜಿಲ್ಲೆಯ ಕಲಾ ತಂಡಗಳು ಕಾಲಬೈರವೇಶ್ವರ ದೇವಾಲಯ ಆವರಣದಿಂದ ಮೆರವಣಿಗೆಯಲ್ಲಿ ಆಗಮಿಸಿ ಅತಿಥಿಗಳನ್ನು ಬರಮಾಡಿಕೊಳ್ಳುವ ಕಾರ್ಯಕ್ರಮವು ನಡೆಯಲಿದೆ.