ಕಣಿವೆ: ಕೊಡಗು ಜಿಲ್ಲೆಯ ಪ್ರಮುಖ ವಾಣಿಜ್ಯ ನಗರ ಕುಶಾಲನಗರ ಪಟ್ಟಣಕ್ಕೆ ಹೊರ ರಾಜ್ಯದಿಂದ ಮಕ್ಕಳನ್ನು ಹೊತ್ತು ತಿರುಗಿ ಭಿಕ್ಷೆ ಬೇಡುವ ಗುಂಪೊAದು ಧಾವಿಸಿದೆ.

ಆದರೆ ಈ ಗುಂಪಿನಲ್ಲಿ ಕಾಣಸಿಗುವ ಎಳೆಯ ಮಕ್ಕಳು ಹಾಗೂ ಆ ಮಕ್ಕಳನ್ನು ಕಂಕುಳಲ್ಲಿಟ್ಟು ಸಾಗುವ ಮಹಿಳೆಯರ ಬಗ್ಗೆ ಪಟ್ಟಣದ ಕೆಲವು ಸಾರ್ವಜನಿಕರಿಂದ ಬಹು ದೊಡ್ಡ ಗುಮಾನಿಯೂ ಕಾಡಿದೆ.

ಆ ಎಳೆಯ ಮಕ್ಕಳ ತಾಯಂದಿರು ಆ ಮಹಿಳೆಯರಾ? ಎಂಬ ಪ್ರಶ್ನೆಯೂ ಕೆಲವರನ್ನು ಕಾಡುತ್ತಿದೆ.

ಅಂದರೆ ಬೆಳಗಾದೊಡನೆ ಮಕ್ಕಳನ್ನು ಕಂಕುಳಲ್ಲಿನ ಗಂಟೊAದರಲ್ಲಿ ಹಾಕಿಕೊಂಡು ದಿನವಿಡೀ ಅಂಗಡಿ ಮುಂಗಟ್ಟುಗಳು, ಬಡಾವಣೆಗಳ ವಸತಿ ಪ್ರದೇಶಗಳು ಹಾಗೂ ಜನಸಂದಣಿಯ ಪ್ರದೇಶಗಳಲ್ಲಿ ಭಿಕ್ಷೆ ಬೇಡುವ ಈ ಮಹಿಳೆಯರನ್ನು ಒಮ್ಮೆ ಗಮನಿಸಿದಾಗ ಅವರ ಕಂಕುಳಲ್ಲಿ ಇರುವ ಎಳೆಯ ಮಕ್ಕಳ ಬಗ್ಗೆ ಆ ಹೆತ್ತೊಡಲ ಕರುಳ ಕರೆಯ ಸಂಬAಧ ಕಾಣಿಸುವುದೇ ಇಲ್ಲ.

ಅಂದರೆ ನೀಡುವವರು ಇರುವತನಕ ಬೇಡುವವರು ಇದ್ದೇ ಇರುತ್ತಾರಲ್ಲಾ..! ಹಾಗಾಗಿ ನಮ್ಮ ಕೆಲವು ಜನರ ಭಾವನೆಗಳನ್ನು ಹಣದ ರೂಪದಲ್ಲಿ ಕಸಿಯಲು ಭಿಕ್ಷೆ ಬೇಡಿಸುವ ಒಂದು ವ್ಯವಸ್ಥಿತ ಜಾಲವೇ ಈ ಮಹಿಳೆಯರ ಹಿಂದೆ ಇರಬಹುದಾದ ಗುಮಾನಿಯನ್ನು ಅಲ್ಲಗಳೆಯುವಂತಿಲ್ಲ.

ಏಕೆಂದರೆ ದಿನವಿಡೀ ಎಳೆಯ ಮಕ್ಕಳನ್ನು ಕಂಕುಳಲ್ಲಿ ಹೊತ್ತು ಸಾಗುವ ಸಂದರ್ಭ ಈ ಮಕ್ಕಳು ಕುಡಿಯಲು ಅಥವಾ ತಿನ್ನಲು ಅನ್ನಾಹಾರ ಅಥವಾ ಹಾಲಿಗಾಗಿ ಅಳುವುದಾಗಲೀ, ಛೀರುವುದಾಗಲೀ, ರಚ್ಚೇ ಹಿಡಿಯುವುದಾಗಲೀ ಅಥವಾ ಕಂಕುಳಿAದ ಕೆಳಗಿಳಿಸು ಎಂದು ಗಲಾಟೆ ಮಾಡುವುದಾಗಲೀ ಏನೇನೂ ಸಂಜ್ಞೆಗಳಿಲ್ಲದೇ ಸಂಪೂರ್ಣವಾಗಿ ಆ ಎಳೆಯ ಕಂದಮ್ಮಗಳು ಮೌನವಾಗಿರುವುದು ಕಂಡು ಬರುತ್ತದೆ.

ಅಂದರೆ ಆ ಎಳೆಯ ಮಕ್ಕಳ ಹೆತ್ತೊಡಲು ಬೇರೆಯವರು ಇರಬಹುದಾ..? ಭಿಕ್ಷಾಟನೆಗಾಗಿ ಬೇರೆಡೆಗಳಿಂದ ಮಕ್ಕಳನ್ನು ಕದ್ದು ಹೊತ್ತು ತಂದಿರಬಹುದಾ...? ಎಂಬ ಗುಮಾನಿ ಹಾಗೂ ಆತಂಕಗಳಿಗೆ ಸಂಬAಧ ಪಟ್ಟ ಇಲಾಖೆಗಳು ಉತ್ತರಿಸಬೇಕಿದೆ ಎಂಬದು ಸಾರ್ವಜನಿಕರ ಆಗ್ರಹವಾಗಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊAಡ ಕುಶಾಲನಗರದ ಉದ್ಯಮಿ ಹಾಗೂ ರೋಟರಿ ಸಂಸ್ಥೆಯ ಪದಾಧಿಕಾರಿ ಜಾನ್ ಪಿಲಿಕ್ಕಲ್, ಇಲ್ಲಿ ಮಕ್ಕಳೊಂದಿಗೆ ಭಿಕ್ಷೆ ಬೇಡುವ ಐದಾರು ಹೆಂಗಸರ ಬಗ್ಗೆ ನಮಗೆ ಸಂಶಯವಿದೆ. ಆ ಮಹಿಳೆಯರ ಬಳಿ ಇರುವ ಮಕ್ಕಳು ಅವರದ್ದೇ ಅಲ್ಲಾ ಎಂದು. ಆ ಮಕ್ಕಳು ಕಿರುಚದಂತೆ, ಗಲಾಟೆ ಮಾಡದಂತೆ ಯಾವುದಾದರೂ ಚುಚ್ಚುಮದ್ದು ಅಥವಾ ಮತ್ತೇನಾದರೂ ಮಾಡಿರುವ ಗುಮಾನಿಯಿದೆ. ನಾವು ಕಂಡAತೆ ಮಕ್ಕಳಿಗೂ ಆ ತಾಯಿಗೂ ಹೋಲಿಕೆಯೂ ಕಂಡು ಬರುತ್ತಿಲ್ಲ.

ಅಷ್ಟಕ್ಕೂ ಈ ಎಳೆಯ ಮಕ್ಕಳನ್ನು ತಂದು ಭಿಕ್ಷೆ ಬೇಡುವ ಬದಲು ಆ ಮಹಿಳೆಯರು ಏನಾದರೂ ಕೂಲಿ ಮಾಡಬಹುದಲ್ಲವಾ.

ಬೇಕಾದರೆ ನಾನೇ ನಿತ್ಯವೂ ಕೂಲಿ ಕೊಡಲು ಸಿದ್ಧನಿದ್ದೇನೆ. ಆ ಮಕ್ಕಳ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಮಾಡಬೇಕು. ಭಿಕ್ಷಾಟನೆ ಶಿಕ್ಷಾರ್ಹವಲ್ಲವೇ? ಇಲಾಖೆಗಳು ಏನು ಮಾಡುತ್ತಿವೆ ?

ಸಾರ್ವಜನಿಕರು ಕೂಡ ಇಂತಹ ಪ್ರಕರಣಗಳಿಗೆ ಓಗೊಡಬಾರದು. ಏನೋ ಮನಸ್ಸು ತಡೆಯಲ್ಲ ಎಂಬ ಕಾರಣಕ್ಕೆ ಮಕ್ಕಳಿಗೆ ತಿನ್ನಲು ಅಥವಾ ಕುಡಿಯಲು ಕೊಟ್ಟು ಸಂಬAಧಿತ ಮಹಿಳೆಯನ್ನು ಯಾವುದಾದರೂ ಕೂಲಿ ಕೆಲಸಕ್ಕೆ ಬಳಸಿಕೊಂಡು ಸಂಜೆಯ ಬಳಿಕ ಕೂಲಿಯ ಹಣ ಕೊಡುವ ಬಗ್ಗೆ ಚಿಂತಿಸಬಹುದು ಎಂದು ಹೇಳಿದ್ದಾರೆ.

ಅಷ್ಟಕ್ಕೂ ಪರ ಭಾಷಿಗ ಈ ಮಹಿಳೆಯರನ್ನು ಬಳಸಿಕೊಂಡು ಪೇಟೆ, ಪಟ್ಟಣ ಹಾಗೂ ನಗರಗಳಲ್ಲಿ ಭಿಕ್ಷಾಟನೆ ಮಾಡಿಸಿ ಹಣ ಮಾಡಬಹುದಾದ ಜಾಲದ ಬಗ್ಗೆ ಪೋಲೀಸರು ತನಿಖೆ ಮಾಡಿದರೆ ಎಲ್ಲವೂ ಬಯಲಾಗುತ್ತದೆ ಅಷ್ಟೆ.

ಏಕೆಂದರೆ ಭಿಕ್ಷಾಟನೆ ನೆಪದಲ್ಲಿ ಬೇರಾವ ಸಮಾಜ ಬಾಹಿರ ಚಟುವಟಿಕೆಗಳ ಬಗ್ಗೆಯೂ ಅಲ್ಲಗಳೆಯುವಂತಿಲ್ಲ ಅಲ್ಲವೇ...

-ಕೆ.ಎಸ್. ಮೂರ್ತಿ