ಸುಂಟಿಕೊಪ್ಪ, ಫೆ. ೧೫: ಗರಗಂದೂರಿನ ಶ್ರೀ ಕುರುಂಭ ಭಗವತಿ ಭದ್ರಕಾಳಿ ದೇವಸ್ಥಾನದ ವಾರ್ಷಿಕೋತ್ಸವ ತಾ. ೧೬ ರಿಂದ ೧೮ ರವರೆಗೆ ನೆರವೇರಲಿದೆ.
ತಾ. ೧೬ ರಂದು ಬೆಳಿಗ್ಗೆ ೯ ಗಂಟೆಗೆ ಗಣಪತಿ ಹೋಮ ಮತ್ತು ದುರ್ಗಾಪೂಜೆ, ತಾ.೧೭ ರಂದು ಸಂಜೆ ೫ ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, ಸಂಜೆ ೬ ಗಂಟೆಯಿAದ ೯ ಗಂಟೆಯವರೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಣೆ, ೯.೩೦ ಗಂಟೆಗೆ ಶ್ರೀ ವಸೂರಿ ದೇವಿಯ ವೆಳ್ಳಾಟಂ ನಡೆಯಲಿದೆ.
ತಾ.೧೮ ರಂದು ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಶ್ರೀದೇವಿಯ ವಸೂರಿಮಲೆಯ ತೆಯ್ಯಂ, ೧೨.೩೦ ರಿಂದ ಶ್ರೀ ಕುರುಂಭ ಭಗವತಿ ವೆಳಚ್ಚಪಾಡ್ ಕೋಮರಂ ತುಳ್ಳಲ್, ಮಧ್ಯಾಹ್ನ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.