ಸೋಮವಾರಪೇಟೆ, ಫೆ. ೧೫: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಆರ್. ಮೋಹನ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿ ಅನಿಲ್ ಪಾಲ್ಗೊಂಡು ಮಾತನಾಡಿ, ಸಂಘದ ಸದಸ್ಯರೆಲ್ಲರೂ ಅಪಘಾತ ವಿಮೆಯನ್ನು ಮಾಡಿಸಿಕೊಳ್ಳಬೇಕು. ೧೮ರಿಂದ ೬೦ ವರ್ಷದವರೆಗಿನ ಚಾಲಕರಿಗೆ ಅಟಲ್‌ಬಿಹಾರಿ ಪಿಂಚಣಿ ಯೋಜನೆಯಿದ್ದು, ಇದರಲ್ಲಿ ನೋಂದಾಯಿಸಿಕೊAಡಲ್ಲಿ ತಾವು ಹೂಡಿದ ಮೊತ್ತದಷ್ಟೆ ಸರ್ಕಾರವು ಹಣವನ್ನು ತಮ್ಮ ಖಾತೆಗೆ ಹೂಡಲಿದ್ದು, ಇದರಿಂದ ೬೦ ವರ್ಷದ ನಂತರ ಮಾಸಿಕ ಪಿಂಚಣಿ ಪಡೆಯಲು ಅನುಕೂಲ ವಾಗುವುದು. ಆದ್ದರಿಂದ ತಪ್ಪದೆ ಎಲ್ಲರೂ ನೋಂದಾಯಿಸಿಕೊಳ್ಳಬೇಕೆAದರು.

ಅಧ್ಯಕ್ಷ ಮೋಹನ್ ಮಾತನಾಡಿ, ಸಂಘದ ಸದಸ್ಯರು ಸಾರ್ವಜನಿಕರೊಂದಿಗೆ ಬಾಡಿಗೆ ತೆರಳುವಾಗ ಸೌಜನ್ಯದಿಂದ ವರ್ತಿಸಿ..ಎಲ್ಲರೂ ತಪ್ಪದೆ ಖಾಕಿ ಯೂನಿಫಾರ್ಮನ್ನು ಧರಿಸಬೇಕೆಂದರು.

ಸಭೆಯಲ್ಲಿ ಈಗಾಗಲೇ ಸಾಕಷ್ಟು ಬಾರಿ ಸರ್ಕಾರ ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದರಿಂದ ಈಗಿರುವ ಬಾಡಿಗೆಯಲ್ಲಿ ಆಟೋ ನಡೆಸಲು ಸಾಧ್ಯವಿಲ್ಲ. ಕೂಡಲೇ ಬಾಡಿಗೆ ದರವನ್ನು ಪರಿಷ್ಕರಣೆ ಮಾಡಬೇಕೆಂದು ಸಭೆ ನಿರ್ಧರಿಸಿತು.

ಇದೇ ಸಂದರ್ಭ ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ವಿಜೇತರಾದ ಸಂಘದ ಸದಸ್ಯರಾದ ಜಿ.ಆರ್. ವಿನೋದ್, ಟಿ.ಆರ್. ಪ್ರವೀಣ್, ಎಂ.ಕೆ. ರುದ್ರಪ್ಪ, ಬಿ.ಕೆ. ವಿರೂಪಾಕ್ಷ ಹಾಗೂ ಕೆ. ಭಾಸ್ಕರ್ ಅವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎ. ಫಾರೂಕ್, ಪ್ರಧಾನ ಕಾರ್ಯದರ್ಶಿ ಎಚ್.ಕೆ. ಗಂಗಾಧರ್, ಉಪ ಕಾರ್ಯದರ್ಶಿ ಬಿ.ಎಸ್. ಜನಾರ್ಧನ್, ಖಜಾಂಚಿ ಕೆ.ಪಿ. ಸುರೇಶ್ ಸೇರಿದಂತೆ ಹಿಂದಿನ ಸಾಲಿನ ಅಧ್ಯಕ್ಷರುಗಳು, ಸಲಹೆಗಾರರು ಹಾಗೂ ನಿರ್ದೇಶಕರುಗಳು ಉಪಸ್ಥಿತರಿದ್ದರು.