ತಪೋಭೂಮಿ ಗುಹ್ಯದಲ್ಲಿ ಕಾವೇರಿ-ಅಗಸ್ತö್ಯ ಸಂಧಾನ

ತುಲೆಗೆ ರವಿಯದಲ್ಕೆ ಸಹ್ಯಜೆ

ಯೊಳಗವಧಿಯಾಗೊಂದು ತಿಂಗಳ

ಕಳೆದ ಪೆಣ್ಗಳು ಪುರುಷರಹರಿದಕೊಂಟೆ ಸಂಶಯವು

ಪೊಲತ ಸಹ್ಯಜೆಗೊಂದು ಗಂಗೆಯೆ

ತುಲೆಗೆ ಪ್ರತಿವರ್ಷದಲ್ಲಿಹಳಾ

ಸ್ಥಳದಿನೋಳ್ಪರ ಕಣ್ಮನಕ್ಕಾನಂದಮೀವುತ್ತ (ಕವಿರಂಗ ವಿರಚಿತ)

ಈ ಕವೇರಜಯೇ ಪುರಾತನ

ದಾಕೆಯ ಮಹಾಲಕ್ಷಿö್ಮಯಹುದಹು

ದೀಕೆಯೇ ಸಾಕ್ಷಾಜ್ಜಗದ್ಯೋನಿ ಸ್ವರೂಪಿಣಿಯು

ಈಕೆ ಸೃಷ್ಟಿ ಲಯಂಗಳ

ಸೋಕಿ ಮಾಳ್ಪುದರಂ ಜಗನ್ಮಯ

ಳೀಕೆ ಜಗಕಂ ಬೀಜವೇ ತಾನಾದಳಿದು ನೆಲೆಯು (ಕವಿರಂಗ ವಿರಚಿತ)

ಕಾವೇರಿ ಹೊರಟ ಮೇಲೆ ಬಂದ ಅಗಸ್ತö್ಯರು, ಕಮಂಡಲು ಶೃಂಗದಿAದ ಕೆಳಗೆ ಬಿದ್ದಿರುವುದನ್ನು ನೋಡಿ ತಮ್ಮ ಶಿಷ್ಯವೃಂದವನ್ನು ಕಾವೇರಿ ಹೊಳೆಯಾಗಿ ಹರಿದು ಹೋದಳೇ ಎಂದು ಕೇಳುತ್ತಾರೆ. ಹೌದು ಗುಡುಗು-ಸಿಡಿಲು ಎರಗಿದಾಗ ಮರದ ಕೆಳಗೆ ನಾವು ಆಶ್ರಯ ಪಡೆದೆವು. ಕಮಂಡಲುವಿ ನಿಂದ ಹೊರಹೊಮ್ಮಿದ ಕಾವೇರಿ ನಮ್ಮನ್ನು ಮರೆಮಾಚಲು ಭೂಮಿಯಲ್ಲಿ ಗುಪ್ತಗಾಮಿನಿಯಾದಳು. ಅಲ್ಲಿಂದ ಐವತ್ತು ಮೀಟರ್ ದೂರದಲ್ಲಿ ಕಾವೇರಿ ಮತ್ತೆ (ಅಗಸ್ತö್ಯ ಶಿಷ್ಯರಿಗೆ) ನಮಗೆ ಗೋಚರಿಸಿ “ದೇವರ ಆಜ್ಞೆಯಂತೆ ನಾನು ಅಗಸ್ತö್ಯ ಕಮಂಡಲುವಿನಿAದ ಹೊರ ಬಂದಿದ್ದೇನೆ. ನನ್ನ ಮೂಲ ಸ್ಥಾನವು ಇದೇ ಬ್ರಹ್ಮಗಿರಿ ಬೆಟ್ಟದಲ್ಲೇ” ಎಂದು ಹೇಳುತ್ತಾಳೆ. ಅದೇ ಪ್ರಕಾರÀವಾಗಿ ಇಂದಿಗೂ ತಲಕಾವೇರಿಯ ತೀರ್ಥಸ್ಥಾನ ಕೊಳದ ಬಲಭಾಗದ ಉದ್ದದ ಕಟ್ಟೆಯ ಎಡಭಾಗದ ತಗ್ಗಿನ ಜಾಗದಲ್ಲಿ ಹನ್ನೆರಡು ಅಡಿ ಉದ್ದ, ಏಳು ಅಡಿ ಅಗಲ, ಮೂರು ಅಡಿ ಆಳವಿರುವ ಗುಪ್ತಗಾಮಿನಿ ಕೊಳದಿಂದ ಮುಂದೆ ಗುಪ್ತಗಾಮಿನಿಯಾಗಿ ಕಾವೇರಿ ಹರಿದು ಹೋಗಿ ಅಲ್ಲಿಂದ ಸುಮಾರು ಐವತ್ತು ಮೀಟರ್ ದೂರ ಕಾಡಿನಲ್ಲಿ ತೆರಳಿದರೆ ಅಲ್ಲಿ ಮತ್ತೆ ಕಾವೇರಿ ತನ್ನ ಹರಿಯುವಿಕೆಯನ್ನು ಕಿರಿದಾಗಿ ಪ್ರಾರಂಭಿಸಿರುವುದು ಇಂದಿಗೂ ಕಾಣಬಹುದು.

ಇಲ್ಲಿ ಇನ್ನೊಂದು ಅಂಶವೇನೆAದರೆ ತನ್ನಿಚ್ಛೆಯಂತೆ “ಶಕ್ತಿ” ಯ ಪ್ರತೀಕವಾದ ಪಾರ್ವತೀದೇವಿಯ ಅಂಶವಾದ ಕಾವೇರಿಯು ಲೋಕೋಪಕಾರಕ್ಕಾಗಿ ಹೊರಟ ನದೀ ರೂಪವನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಬಾರದೆಂದು ಕೊಡವರು ಈಗಲೂ ನಂಬಿದ್ದಾರೆ. ಷಟ್ಕರ್ಮಗಳಲ್ಲಿ ಒಂದಾದ ಅತಿಥಿ ಸತ್ಕಾರವೆಂಬ ನಿತ್ಯ ಕರ್ಮವನ್ನು ವೇದಕಾಲದ ಕ್ಷತ್ರಿಯರÀಂತೆ ಆಚರಿಸಲೇಬೇಕೆಂಬ ಧರ್ಮ ಸೂತ್ರದಂತೆ ಮನೆಗೆ ಬಂದ ಅತಿಥಿಗೆ ಜಲರೂಪಿಣಿಯಾದ ಕಾವೇರಿಯ ಮಕ್ಕಳಾದ ಕೊಡವರ ಮನೆಯ ಹೆಂಗಸರು, ಮುಂಜಾನೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಒಂದು ಚೆಂಬು ನೀರನ್ನು ಸಿಂಹ ದ್ವಾರದ ಹೊರಗೆ ಜಗಲಿಯಲ್ಲಿ ಇಡುತ್ತಾರೆ. ಅದನ್ನು ಸಹ ಅವರು ಮುಚ್ಚಿಡುವುದಿಲ್ಲ. ಲೋಕೋಪಕಾರಿ ಯಾದ ಕಾವೇರಿ ತಾಯಿ ಕೋಪಗೊಳ್ಳುತ್ತಾಳೆಂದು, ಕಳಸವು ತುಲೆಗೆ ರವಿಯದಲ್ಕೆ ಸಹ್ಯಜೆ

ಯೊಳಗವಧಿಯಾಗೊಂದು ತಿಂಗಳ

ಕಳೆದ ಪೆಣ್ಗಳು ಪುರುಷರಹರಿದಕೊಂಟೆ ಸಂಶಯವು

ಪೊಲತ ಸಹ್ಯಜೆಗೊಂದು ಗಂಗೆಯೆ

ತುಲೆಗೆ ಪ್ರತಿವರ್ಷದಲ್ಲಿಹಳಾ

ಸ್ಥಳದಿನೋಳ್ಪರ ಕಣ್ಮನಕ್ಕಾನಂದಮೀವುತ್ತ (ಕವಿರಂಗ ವಿರಚಿತ)

ಈ ಕವೇರಜಯೇ ಪುರಾತನ

ದಾಕೆಯ ಮಹಾಲಕ್ಷಿö್ಮಯಹುದಹು

ದೀಕೆಯೇ ಸಾಕ್ಷಾಜ್ಜಗದ್ಯೋನಿ ಸ್ವರೂಪಿಣಿಯು

ಈಕೆ ಸೃಷ್ಟಿ ಲಯಂಗಳ

ಸೋಕಿ ಮಾಳ್ಪುದರಂ ಜಗನ್ಮಯ

ಳೀಕೆ ಜಗಕಂ ಬೀಜವೇ ತಾನಾದಳಿದು ನೆಲೆಯು (ಕವಿರಂಗ ವಿರಚಿತ)

ಕಾವೇರಿ ಹೊರಟ ಮೇಲೆ ಬಂದ ಅಗಸ್ತö್ಯರು, ಕಮಂಡಲು ಶೃಂಗದಿAದ ಕೆಳಗೆ ಬಿದ್ದಿರುವುದನ್ನು ನೋಡಿ ತಮ್ಮ ಶಿಷ್ಯವೃಂದವನ್ನು ಕಾವೇರಿ ಹೊಳೆಯಾಗಿ ಹರಿದು ಹೋದಳೇ ಎಂದು ಕೇಳುತ್ತಾರೆ. ಹೌದು ಗುಡುಗು-ಸಿಡಿಲು ಎರಗಿದಾಗ ಮರದ ಕೆಳಗೆ ನಾವು ಆಶ್ರಯ ಪಡೆದೆವು. ಕಮಂಡಲುವಿ ನಿಂದ ಹೊರಹೊಮ್ಮಿದ ಕಾವೇರಿ ನಮ್ಮನ್ನು ಮರೆಮಾಚಲು ಭೂಮಿಯಲ್ಲಿ ಗುಪ್ತಗಾಮಿನಿಯಾದಳು. ಅಲ್ಲಿಂದ ಐವತ್ತು ಮೀಟರ್ ದೂರದಲ್ಲಿ ಕಾವೇರಿ ಮತ್ತೆ (ಅಗಸ್ತö್ಯ ಶಿಷ್ಯರಿಗೆ) ನಮಗೆ ಗೋಚರಿಸಿ “ದೇವರ ಆಜ್ಞೆಯಂತೆ ನಾನು ಅಗಸ್ತö್ಯ ಕಮಂಡಲುವಿನಿAದ ಹೊರ ಬಂದಿದ್ದೇನೆ. ನನ್ನ ಮೂಲ ಸ್ಥಾನವು ಇದೇ ಬ್ರಹ್ಮಗಿರಿ ಬೆಟ್ಟದಲ್ಲೇ” ಎಂದು ಹೇಳುತ್ತಾಳೆ. ಅದೇ ಪ್ರಕಾರÀವಾಗಿ ಇಂದಿಗೂ ತಲಕಾವೇರಿಯ ತೀರ್ಥಸ್ಥಾನ ಕೊಳದ ಬಲಭಾಗದ ಉದ್ದದ ಕಟ್ಟೆಯ ಎಡಭಾಗದ ತಗ್ಗಿನ ಜಾಗದಲ್ಲಿ ಹನ್ನೆರಡು ಅಡಿ ಉದ್ದ, ಏಳು ಅಡಿ ಅಗಲ, ಮೂರು ಅಡಿ ಆಳವಿರುವ ಗುಪ್ತಗಾಮಿನಿ ಕೊಳದಿಂದ ಮುಂದೆ ಗುಪ್ತಗಾಮಿನಿಯಾಗಿ ಕಾವೇರಿ ಹರಿದು ಹೋಗಿ ಅಲ್ಲಿಂದ ಸುಮಾರು ಐವತ್ತು ಮೀಟರ್ ದೂರ ಕಾಡಿನಲ್ಲಿ ತೆರಳಿದರೆ ಅಲ್ಲಿ ಮತ್ತೆ ಕಾವೇರಿ ತನ್ನ ಹರಿಯುವಿಕೆಯನ್ನು ಕಿರಿದಾಗಿ ಪ್ರಾರಂಭಿಸಿರುವುದು ಇಂದಿಗೂ ಕಾಣಬಹುದು.

ಇಲ್ಲಿ ಇನ್ನೊಂದು ಅಂಶವೇನೆAದರೆ ತನ್ನಿಚ್ಛೆಯಂತೆ “ಶಕ್ತಿ” ಯ ಪ್ರತೀಕವಾದ ಪಾರ್ವತೀದೇವಿಯ ಅಂಶವಾದ ಕಾವೇರಿಯು ಲೋಕೋಪಕಾರಕ್ಕಾಗಿ ಹೊರಟ ನದೀ ರೂಪವನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಬಾರದೆಂದು ಕೊಡವರು ಈಗಲೂ ನಂಬಿದ್ದಾರೆ. ಷಟ್ಕರ್ಮಗಳಲ್ಲಿ ಒಂದಾದ ಅತಿಥಿ ಸತ್ಕಾರವೆಂಬ ನಿತ್ಯ ಕರ್ಮವನ್ನು ವೇದಕಾಲದ ಕ್ಷತ್ರಿಯರÀಂತೆ ಆಚರಿಸಲೇಬೇಕೆಂಬ ಧರ್ಮ ಸೂತ್ರದಂತೆ ಮನೆಗೆ ಬಂದ ಅತಿಥಿಗೆ ಜಲರೂಪಿಣಿಯಾದ ಕಾವೇರಿಯ ಮಕ್ಕಳಾದ ಕೊಡವರ ಮನೆಯ ಹೆಂಗಸರು, ಮುಂಜಾನೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಒಂದು ಚೆಂಬು ನೀರನ್ನು ಸಿಂಹ ದ್ವಾರದ ಹೊರಗೆ ಜಗಲಿಯಲ್ಲಿ ಇಡುತ್ತಾರೆ. ಅದನ್ನು ಸಹ ಅವರು ಮುಚ್ಚಿಡುವುದಿಲ್ಲ. ಲೋಕೋಪಕಾರಿ ಯಾದ ಕಾವೇರಿ ತಾಯಿ ಕೋಪಗೊಳ್ಳುತ್ತಾಳೆಂದು, ಕಳಸವು ಸ್ಥಳದಲ್ಲಿ ಅಡ್ಡಗಟ್ಟುತ್ತಾರೆ. ಅಗಸ್ತö್ಯರು ತನಗೆ ಸಹಾಯವಾಗಲೆಂದು ಕೊಡಗಿನ ಮೂಲ ನಿವಾಸಿಗಳಾದ ಕೊಡವರನ್ನೂ, ಕೇರಳದ ನಂಬೂದಿರಿ ಬ್ರಾಹ್ಮಣರನ್ನೂ (ಆಗ ಕೊಡಗಿನಲ್ಲಿ ನಂಬೂದಿರಿ ಬ್ರಾಹ್ಮಣರೇ ಇದ್ದರೆಂದು ಇತಿಹಾಸವಿದೆ.) ಜೊತೆಯಲ್ಲಿ ಇರಿಸಿಕೊಂಡು ಅಲ್ಲಿಯೇ ಇದ್ದ ಅಶ್ವತ್ಥ ಮರದ ಕೆಳಗೆ ಕಾವೇರಿ ಸಮೇತರಾಗಿ ಪಂಚಾಯತಕ್ಕೆ ಕೂರುತ್ತಾರೆ. ಪೌರಾಣಿಕವಾಗಿ ಈ ಕ್ಷೇತ್ರಕ್ಕೆ ಕುಬೇರ ದುರ್ಗವೆಂಬ ಹೆಸರಿದೆ, ಕುಬೇರ ಆಶ್ರಮ ಎಂದೂ ಕರೆಯುತ್ತಾರೆ. ಹಿಂದೆ ಇಲ್ಲಿ ಕುಬೇರನು ತಪಸ್ಸು ಮಾಡಿದ್ದರಿಂದ ಇಲ್ಲಿ ಋಷಿ ಮುನಿಗಳು ಗುಹೆಗಳಲ್ಲಿ ವಾಸ ಮಾಡುತ್ತಿದ್ದರಿಂದ ಈ ಸ್ಥಳಕ್ಕೆ ಗುಯ್ಯ (ಗುಹ್ಯ) ಎಂದು ಹೆಸರು ಬಂದಿದೆ. ಈಗ ಗುಹ್ಯದ ಅಗಸ್ತೆö್ಯÃಶ್ವರ ದೇವಾಲಯದ ಬಳಿ ಇರುವ ಪ್ರಾಚೀನವಾದ ಅಶ್ವತ್ಥ ವೃಕ್ಷದ ಕೆಳಗೆ ಅಗಸ್ತö್ಯ-ಕಾವೇರಿ ಯರ ನಡುವೆ ವಾದ-ವಿವಾದಗಳು ನಡೆಯಿತೆಂದೂ, ಅದಕ್ಕೆ ಸಾಕ್ಷಿಯಾಗಿ ಕೊಡವರು-ಬ್ರಾಹ್ಮಣರೂ ಅಲ್ಲಿಯೇ ಇದ್ದರೆಂದೂ ಸ್ಕಾಂದ ಪುರಾಣ ಹೇಳುತ್ತದೆ. ಅಗಸ್ತö್ಯ-ಕಾವೇರಿಯರ ನಡುವೆ ವಾಗ್ವಾದ ನಡೆಯುತ್ತಿರುವಾಗ ಬೀಸಿದ ಗಾಳಿಗೆ ಅಶ್ವತ್ಥ ಮರದ ಎಲೆಗಳು ಒಂದಕ್ಕೊAದು ತಾಗಿದ ಶಬ್ದದಿಂದ ಮಾತನಾಡಲು ತೊಂದರೆ ಯಾದ್ದರಿಂದ ಮುನಿ ಅಗಸ್ತö್ಯರು ಆವೇಶದಿಂದ ಆ ಅಶ್ವತ್ಥ ವೃಕ್ಷಕ್ಕೆ “ಸದ್ದು ಮಾಡಬೇಡ” ವೆಂದು ಶಾಪಕೊಟ್ಟ ರೆಂದೂ, ಸ್ಕಾಂದ ಪುರಾಣದಲ್ಲಿ ಹೇಳಿದ್ದೂ ನಿಜವೆಂಬAತೆ, ಅಗಸ್ತö್ಯರು ಸದ್ದು ಮಾಡಬೇಡವೆಂದು ಹೇಳಿದ ಅಶ್ವತ್ಥ ವೃಕ್ಷ ಇಂದಿಗೂ ಜೋರಾಗಿ ಗಾಳಿ ಬೀಸಿದರೂ ಸದ್ದು ಮಾಡುವುದಿಲ್ಲ ವೆಂಬದು ಆಶ್ಚರ್ಯವಾದರೂ ಸತ್ಯವಾಗಿದೆ. ಹೀಗೆ ಅಗಸ್ತö್ಯ-ಕಾವೇರಿಯರ ನಡುವೆ ವಾದ-ವಿವಾದಗಳು ನಡೆದು ಕೊನೆಗೆ ಒಂದAಶದಲ್ಲಿ ಅಗಸ್ತö್ಯರ ಪತ್ನಿ ಲೋಪಾಮುದ್ರೆಯಾಗಿ, ಇನ್ನೊಂದAಶದಲ್ಲಿ ಕಾವೇರಿಯಾಗಿ ಲೋಕೋಪಕಾರಕ್ಕಾಗಿ ಹೊರಡುತ್ತಾಳೆಂದು ಸ್ಕಾಂದ ಪುರಾಣ ಹೇಳುತ್ತದೆ.

ಪೂರ್ವದಲ್ಲಿ ಕಾವೇರಿಯು ಗುಹ್ಯದಿಂದ ಎರಡು ಕವಲಾಗಿ ಹರಿಯುತ್ತಿದ್ದ ಳೆಂದು ಭೂ ವಿಜ್ಞಾನಿಗಳ ಸಂಶೋಧನೆಯು ತಿಳಿಸುತ್ತದೆ. ಕೊಡಗಿನ ಸಿದ್ದಾಪುರದ ಗುಹ್ಯದ ಹತ್ತಿರ ಕಾವೇರಿ ವಾಯುವ್ಯ ದಿಕ್ಕಿಗೆ ಹರಿಯುವಲ್ಲಿ ಇಂಗ್ಲೀಷ್ ಅಕ್ಷರದ ‘ಯು’ ಆಕಾರದಲ್ಲಿ ವಿಸ್ತಾರವಾಗಿ ಕಾವೇರಿ ಹರಿಯುತ್ತಿರು ವುದು ಈಗಲೂ ಕಾಣಬಹುದು. ಅಂದರೆ ಭೂ ಪದರಗಳು ವ್ಯತ್ಯಾಸ ಆದ ಕಾಲದಲ್ಲಿ ಹಿಮಾಲಯ-ಅರಬ್ಬಿ ಸಮುದ್ರಗಳು ಇಲ್ಲದಂತ ಕಾಲದಲ್ಲಿ ಕಾವೇರಿಯ ಇನ್ನೊಂದು ಕವಲು ಗುಹ್ಯದಿಂದ ಆಫ್ರಿಕಾದ ಮಡಗಾಸ್ಕರ್ ತನಕ ಹರಿಯುತ್ತಿತ್ತೆಂದೂ ಮಡಗಾಸ್ಕರಿನ ಈಶಾನ್ಯದಲ್ಲಿ ‘ಮಹಾಜಂಘಾ’ ವೆನ್ನುವ ನೆಲೆ ಕೊಡಗಿನ ಮಹಾಂತೋಡಿನ ಹೆಸರಿನ ಕುರುಹಾಗಿದೆಯೆಂದು ಭೂ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಜಂಘ ಎನ್ನುವುದು ಸಂಸ್ಕೃತ

ಶಬ್ದ. ‘ತೊಡೆ’ ಎಂದು ಅರ್ಥ. ಬಲಿಷ್ಟವಾದ ತೊಡೆ ಅಥವಾ ಜಂಘ ಎಂದು ಮಹಾ ನದಿಗಳನ್ನು ಕರೆಯುವುದುಂಟು. ‘ಕಾಂಟಿನೆAಟಲ್’ ಸಿದ್ಧಾಂತ ಪ್ರಕಾರ ದಕ್ಷಿಣ, ಮಧ್ಯಭಾರತ, ಆಫ್ರಿಕಾ ಭೂ ಪ್ರದೇಶವು ಅಂಟಿಕೊAಡಿತ್ತು. ಕಾವೇರಿಯ ಎರಡೂ ಕವಲುಗಳಲ್ಲಿ ಒಂದು (ಈಗಿನ) ಬಂಗಾಳಕೊಲ್ಲಿಗೂ, ಇನ್ನೊಂದು ಕವಲು ಗುಹ್ಯದಿಂದ ಆಫ್ರಿಕಾದ ಮಡಗಾಸ್ಕರ್ ತನಕ ಹರಿಯುತ್ತಿತ್ತೆಂದು ಭೂ ವಿಜ್ಞಾನಿಗಳು ಹೇಳುತ್ತಾರೆ. ದಕ್ಷಿಣ ಭಾರತದ ನದಿಗಳೆಲ್ಲಾ ಉತ್ತರ ಭಾರತ ನದಿಗಳಿಗಿಂತ ಹಿರಿಯವು. ಭೂ ವೈಜ್ಞಾನಿಕ ಆಧಾರ ತೆಗೆದುಕೊಂಡರೆ ಗಂಗಾ ನದಿಗಿಂತ ಕಾವೇರಿಯೇ ಹಿರಿಯಳು. ಗಂಗಾ ತೀರದಲ್ಲಿ ಮೂರು ರಾತ್ರಿ, ಯಮುನಾ ತಟದಲ್ಲಿ ಐದು ರಾತ್ರಿ ತಂಗಿದರೆ ಪಾಪ ನಾಶವಾಗುವುದು. ಆದರೆ ಕಾವೇರಿ ದಡದಲ್ಲಿ ಒಂದು ಕ್ಷಣ ಕಾಲ ತಂಗಿದರೆ ಸಂಚಿತ ಪಾಪಗಳೆಲ್ಲ ಪರಿಹಾರವಾಗುವುದು. ಇದು ಏಳು ಕೋಟಿ ತೀರ್ಥಗಳಿಂದ ಕೂಡಿದ್ದು ಮಾನವನಿಗೆ ಮೋಕ್ಷದಾಯಿನಿಯಾಗಿರುವಳು. ಗಂಗೆಯ ಅಮೋಘ ವರ್ಷನ ಸೂತ್ರವನ್ನು ನೂರು ಬಾರಿ ಜಪಿಸಿ ಮಿಂದರೆ ಪಾಪ ಪರಿಹಾರ. ಆದರೆ ಕಾವೇರಿಯಾದರೋ ಶ್ರವಣ ಮಾತ್ರದಿಂದ ಪಾಪ ನಾಶ ಮಾಡುವಳು ಎಂದು ತ್ರಿಜಟಕನೆಂಬ ಯತಿಯೊಡನೆ ಸೇನನು ಸ್ಕಾಂದ ಪುರಾಣದಲ್ಲಿ ಹೇಳುತ್ತಾನೆ.

ಸ್ಕಾಂದ ಪುರಾಣದ ನಾರದ ಗಂಗಾ ಸಂವಾದದಲ್ಲಿ ಒಮ್ಮೆ ನಾರದರಿಗೆ ಗಂಗೆಯ ದರ್ಶನ ಮಾಡಬೇಕೆಂಬ ಆಸೆಯಾಯಿತು. ಅದಕ್ಕಾಗಿ ಅವರು ಅಲ್ಲಿಗೆ ಹೋಗಿ ಗಂಗಾ ಜಲದಲ್ಲಿ ಮಿಂದು ನೂರು ವರ್ಷಗಳ ಕಾಲ ಅವಳ ಸೇವೆ ಮಾಡಿದರು. ಆಗ ಗಂಗೆ ಪ್ರತ್ಯಕ್ಷಳಾಗಲು ನಾರದರು ಅವಳನ್ನು ಕುರಿತು ನಿನ್ನ ಪಾಪ ಪರಿಹಾರವಾದ ಬಗ್ಗೆ ಹೇಗೆ ? ಎಂದು ಕೇಳಲು ಅವಳು ಕಾವೇರಿಯಲ್ಲಿ ಸ್ನಾನ ಮಾಡಿದ್ದರಿಂದ ಪರಿಹಾರವಾಯಿತು ಎಂದಳು. ನಾರದರು ಅಲ್ಲಿಂದ ಹೊರಟು ಕಾವೇರಿ ತೀರಕ್ಕೆ ಬಂದು, ಕಾವೇರಿಯನ್ನು ಪೂಜಿಸಿ ಹೊರಟು ಹೋದರು ಎಂಬ ಕಥೆೆಯನ್ನು ತ್ರಿಜಟನು ಸೇನನಿಂದ ಕೇಳಿ ಸೇನನಿಗೆ ವಂದಿಸಿ ಕಾವೇರಿಯಲ್ಲಿ ಮಿಂದು ತ್ರಿಜಟನು ಮುಕ್ತಿ ಹೊಂದಿದನೆAದು ಸ್ಕಾಂದ ಪುರಾಣದಲ್ಲಿ ಉಕ್ತವಾಗಿದೆ.

ಇದೇ ರೀತಿ ಒಂದು ದಿನ ಯಮುನೆ ತನ್ನ ಗೆಳತಿ ಗಂಗೆಯನ್ನು ಬಹಳ ದಿನಗಳಿಂದ ಕಾಣದೆ ಚಿಂತಾಕ್ರಾAತಳಾಗಿ ಸರಸ್ವತಿಯೊಡಗೂಡಿ ಅವಳನ್ನು ಹುಡುಕುತ್ತಾ ಹೊರಟು ಮಾರ್ಗ ಮಧ್ಯೆದಲ್ಲಿ ಎದುರಾದಳು. ಆಗ ಯಮುನೆ ನೀನು ನನ್ನನ್ನಗಲಿ ಎಲ್ಲಿಗೆ ಹೋಗಿದ್ದೆ ? ನಿನ್ನ ಬಟ್ಟೆ ಒದ್ದೆಯಾಗಲು ಕಾರಣವೇನು ? ಎಂದು ಕೇಳಲಾಗಿ, ಗಂಗೆ ತಾನು ಇತರ ನದಿಗಳೊಂದಿಗೆ ಹೋಗಿ ಕಾವೇರಿಯಲ್ಲಿ ಮಿಂದು ಬಂದು ದಾಗಿಯೂ, ಯಮುನೆ ಕೂಡ ಹಾಗೆ ಮಾಡುವಂತೆ ಗಂಗೆ ಹೇಳಿದಳೆಂದು ಯಮುನೆ ಹಾಗೆ ಮಾಡಲಾಗಿ ಆಕೆಯೂ ತನ್ನ ಪಾಪ ಕಳೆದುಕೊಂಡು ಪವಿತ್ರಳಾದಳೆಂದು ಸ್ಕಾಂದ ಪುರಾಣವು ಹೇಳುತ್ತದೆ. ಗಂಗೆ-ಯಮುನೆ ಸಹಿತರಾಗಿ ಏಳು ಕೋಟಿ ತೀರ್ಥಗಳೂ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ಕಾವೇರಿಯಲ್ಲಿ ಸಂಗಮವಾಗಿ, ಒಂದು ತಿಂಗಳ ಕಾಲ ಕಾವೇರಿ ಯೊಡನಿದ್ದು ವೃಶ್ಚಿಕ ಸಂಕ್ರಮಣದ ಪುಣ್ಯ ಕಾಲವನ್ನು ಮುಗಿಸಿ ಕೊಂಡು ತಮ್ಮ-ತಮ್ಮ ಸ್ಥಾನಗಳಿಗೆ ಹೋಗುತ್ತಾರೆ ಎಂದು ಸ್ಕಾಂದ ಪುರಾಣವು ಹೇಳುತ್ತದೆ. (ಮುಂದುವರಿಯುವುದು)

?ಕರೋಟಿರ ಶಶಿ ಸುಬ್ರಮಣಿ,

ವೀರಾಜಪೇಟೆ.