ಮಡಿಕೇರಿ, ಫೆ. ೧೨: ಸಮೀಪದ ಕೆ.ನಿಡುಗಣೆ ಗ್ರಾ.ಪಂ. ಅಧ್ಯಕ್ಷರಾಗಿ ಕೊಕ್ಕಲೇರ ಕೆ. ಅಯ್ಯಪ್ಪ ಹಾಗೂ ಉಪಾಧ್ಯಕ್ಷರಾಗಿ ಕೆ. ಬಾಡಗ ಕ್ಷೇತ್ರದ ಪಾರ್ವತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ೨೦೧೦ರಲ್ಲಿ ಕೆ. ನಿಡುಗಣೆ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕೆ.ಕೆ. ಅಯ್ಯಪ್ಪ, ಎರಡನೇ ಬಾರಿಗೆ ಅಧ್ಯಕ್ಷರಾಗಿದ್ದಾರೆ. ನೂತನ ಅಧ್ಯಕ್ಷ ಕೊಕ್ಕಲೇರ ಕೆ. ಅಯ್ಯಪ್ಪ ಮಾತನಾಡಿ, ಸದಸ್ಯನಾಗಿ ಅವಿರೋಧವಾಗಿ ಆಯ್ಕೆಯಾದಾಗ ಸಂತಸವಾಗಿತ್ತು. ಇದೀಗ ಅಧ್ಯಕ್ಷನಾಗಿಯೂ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸದೊAದಿಗೆ ಜವಾಬ್ದಾರಿ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಗ್ರಾ.ಪಂ.ಯ ಎಲ್ಲಾ ಕ್ಷೇತ್ರಗಳನ್ನು ಗಮನದಲ್ಲಿರಿಸಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು.

ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ರೀಟಾ ಮುತ್ತಣ್ಣ, ಡೀನ್ ಬೋಪಣ್ಣ, ಜಾನ್ಸನ್ ಪಿಂಟೋ, ಪಿ.ಸಿ. ರಘು, ಪ್ರಮೀಳಾ ಸುರೇಶ್, ಅನಿತಾಪ್ರಮೋದ್, ಸತೀಶ್ ಪೂಜಾರಿ ಮತ್ತಿತರರು ಹಾಜರಿದ್ದರು.