ಮಡಿಕೇರಿ, ಫೆ. ೧೩ ಎನ್.ಸಿ.ಸಿ. ಯ ೧೯ ಕರ್ನಾಟಕ ಬೆಟಾಲಿಯನ್‌ನ ವತಿಯಿಂದ, ನವದೆಹಲಿಯ ರಾಜ್‌ಪಥ್‌ನಲ್ಲಿ ತಾ.೨೬ ರಂದು ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ೩ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಆರ್ಮಿ ಕ್ಯಾಂಟೀನ್ ಬಳಿಯ ಎನ್.ಸಿ.ಸಿ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವರ್ಷ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ರಕ್ಷಾ ಮಡಿಕೇರಿ, ಫೆ. ೧೩ ಎನ್.ಸಿ.ಸಿ. ಯ ೧೯ ಕರ್ನಾಟಕ ಬೆಟಾಲಿಯನ್‌ನ ವತಿಯಿಂದ, ನವದೆಹಲಿಯ ರಾಜ್‌ಪಥ್‌ನಲ್ಲಿ ತಾ.೨೬ ರಂದು ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ೩ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಆರ್ಮಿ ಕ್ಯಾಂಟೀನ್ ಬಳಿಯ ಎನ್.ಸಿ.ಸಿ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವರ್ಷ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ರಕ್ಷಾ ಕಾರ್ಯಪ್ಪ ಕಾಲೇಜಿನ ಮೇಜರ್ ರಾಘವ.ಬಿ ಅವರುಗಳು ಸೇರಿದಂತೆ ಪೆರೇಡ್‌ನಲ್ಲಿ ಭಾಗವಹಿಸಿದ ೩ ವಿದ್ಯಾರ್ಥಿಗಳಿಗೆ ‘ಡಿ.ಜಿ ಎನ್.ಸಿ.ಸಿ ಕಮೆಂಡೇಷನ್ ಪತ್ರ’ ಹಾಗೂ ‘ಮುಖ್ಯಮಂತ್ರಿ ಕಮೆಂಡೇಷನ್ ಪತ್ರ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಯಶೋದಾ ಎ.ಕೆ(ಎಸ್.ಯು.ಒ) ಸ್ವಾಗತ ಭಾಷಣ ಮಾಡಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎನ್.ಸಿ.ಸಿ ಅಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.
(ಚಿತ್ರ ಲಕ್ಷಿö್ಮÃಶ್)